ದಾವಣಗೆರೆ: ಜಿಲ್ಲೆಯಲ್ಲಿ ವಿದ್ಯಾಗಮ ಮತ್ತು ಎಸ್ಎಸ್ಎಲ್ಸಿ ಹಾಗೂ ಪಿಯುಸಿ ತರಗತಿಗಳು ಆರಂಭವಾದ ಹಿನ್ನೆಲೆ ಶಿಕ್ಷಕರಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ. ಅದ್ರೆ ಇಲ್ಲಿಯವರೆಗೆ ಯಾವುದೇ ಶಿಕ್ಷಕರಲ್ಲಾಗಲಿ, ವಿದ್ಯಾರ್ಥಿಗಳಲ್ಲಾಗಲಿ ಸೋಂಕು ಕಂಡು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿಲ್ಲ, ಅದು ನಮ್ಮ ಸುದೈವ. ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂದ ಈ ರೀತಿ ಫಲಿತಾಂಶ ಬರಲು ಪ್ರಮುಖ ಕಾರಣವಾಗಿದೆ ಎಂದರು.
ಓದಿ-ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನ ಕೊಂದು, ಪೊಲೀಸ್ ಠಾಣೆಗೆ ಹೋದ ಯುವತಿ!
ಶಿಕ್ಷಕರು ಕೊರೊನಾ ಪರೀಕ್ಷೆ ಮಾಡಿಸುವಾಗ ತಪ್ಪು ವಿಳಾಸಗಳನ್ನು ನೀಡುತ್ತಿರುವುದು ಕಂಡುಬಂದಿದ್ದು, ಅದು ಸರಿ ಅಲ್ಲ. ಸರಿಯಾದ ವಿಳಾಸ ನೀಡಿ ಪರೀಕ್ಷೆ ಮಾಡಿಸಿಕೊಂಡು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಶಿಕ್ಷಕರಿಗೆ ಮನವಿ ಮಾಡಿದರು.