ETV Bharat / city

14 ದಿನ ಕಳೆದರೂ ಪತ್ತೆಯಾಗದ ನವಜಾತ ಶಿಶು: ಕೃತ್ಯ ಎಸಗಿದ ಮಹಿಳೆಯ ವಿಡಿಯೋ ಲಭ್ಯ - Newborn kidnapped case latest update

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಉಮೇಸಲ್ಮಾ(22) ‌ಎಂಬ ಮಹಿಳೆ ದಾವಣಗೆರೆ ನಗರದ ಚಾಮರಾಜಪೇಟೆ​​ಯಲ್ಲಿರುವ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕ ಸಂಬಂಧಿಕರ ಕೈಗೆ ಮಗು ಕೊಡುವುದಾಗಿ ಸಿಬ್ಬಂದಿ ಹೇಳಿದ್ದರು. ನಂತರ ಮಗು ನಾಪತ್ತೆಯಾಗಿತ್ತು.

Newborn kidnap CCTV Footage
ನವಜಾತ ಶಿಶು ಅಪಹರಿಸಿದ ಮಹಿಳೆ: ಸಿಸಿಟಿವಿ ದೃಶ್ಯ
author img

By

Published : Mar 30, 2022, 7:49 PM IST

ದಾವಣಗೆರೆ: ನಗರದ ಚಾಮರಾಜಪೇಟೆಯಲ್ಲಿರುವ ಆಸ್ಪತ್ರೆಯಲ್ಲಿ ಹೆರಿಗೆಯಾದ 2 ಗಂಟೆಯಲ್ಲಿ ನವಜಾತ ಶಿಶು ನಾಪತ್ತೆಯಾಗಿ 14 ದಿನ ಕಳೆದರೂ ಪತ್ತೆಯಾಗದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ. ಇದೀಗ ಮಗುವನ್ನು ಅಪಹರಿಸಿದ ಮಹಿಳೆಯ ಇನ್ನಷ್ಟು ವಿಡಿಯೋ ಲಭ್ಯವಾಗಿದೆ. ಈ ವಿಡಿಯೋದಲ್ಲಿ ತಲೆಗೆ ಬಿಳಿ ಬಣ್ಣದ ಸ್ಕಾರ್ಫ್ ಹಾಗೂ ಗುಲಾಬಿ ಬಣ್ಣದ ಚೂಡಿ ಧರಿಸಿದ ಮಹಿಳೆ ಮಗುವನ್ನು ಅಪಹರಣ ಮಾಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಸಿಸಿಟಿವಿ ದೃಶ್ಯಾವಳಿ

ವಿಜಯನಗರ ಜಿಲ್ಲೆಯ ಹರಪನಹಳ್ಳಿ ಪಟ್ಟಣದ ಉಮಾಸಲ್ಮಾ- ಇಸ್ಮಾಯಿಲ್ ಜಬೀವುಲ್ಲಾ ದಂಪತಿಗೆ ಜನಿಸಿದ ಮಗು ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಾ.16 ರಾತ್ರಿ ಎಂಟು ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದು, ಮಗು ಮಾರಾಟ ಜಾಲದ ಶಂಕೆ ವ್ಯಕ್ತವಾಗಿತ್ತು.

ಹೆರಿಗೆ ಬಳಿಕ ತಂದೆ ಇಸ್ಮಾಯಿಲ್ ಜಬೀವುಲ್ಲಾನಿಗೆ ಶಿಶುವಿಗಾಗಿ ಬಟ್ಟೆ ತರಲು ಸಿಬ್ಬಂದಿ ಹೇಳಿದ್ದು, ಅವರು ಬಟ್ಟೆ ತರುವಷ್ಟರಲ್ಲಿ ಮಕ್ಕಳ ತೀವ್ರ ನಿಗಾ ಘಟಕದಲ್ಲಿದ್ದ ಶಿಶು ನಾಪತ್ತೆಯಾಗಿತ್ತು. ಆಸ್ಪತ್ರೆಯ ಮುಂದೆ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಈ ಸಂಬಂಧ ಪಾಲಕರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ: ದಾವಣಗೆರೆ ಆಸ್ಪತ್ರೆಯಲ್ಲಿ ಜನಿಸಿದ ಎರಡು ಗಂಟೆಯಲ್ಲೇ ಗಂಡು ಶಿಶು ನಾಪತ್ತೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.