ETV Bharat / city

ದಾವಣಗೆರೆಯ ಮಕ್ಕಳಲ್ಲಿ ಡೆಂಘೀ ಸೇರಿ ವಿಚಿತ್ರ ಜ್ವರ

author img

By

Published : Sep 10, 2021, 6:29 PM IST

Updated : Sep 21, 2021, 11:42 AM IST

ಈಗಾಗಲೇ ಜಿಲ್ಲಾಡಳಿತ ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದೆ. ಜಿಲ್ಲಾಧಿಕಾರಿಗಳು ಮಕ್ಕಳ ವೈದ್ಯರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳ ರಕ್ತ ಪರೀಕ್ಷೆ ಮಾಡಲಾಗುತ್ತಿದೆ..

Children suffering from different fevers in davanagere district
ದಾವಣಗೆರೆಯ ಮಕ್ಕಳಲ್ಲಿ ಡೆಂಗ್ಯೂ ಸೇರಿ ವಿಚಿತ್ರ ಜ್ವರ; ಕೋವಿಡ್‌ 3ನೇ ಅಲೆಯ ಭೀತಿಯಲ್ಲಿ ಜನ!

ದಾವಣಗೆರೆ : ಜಿಲ್ಲೆಯಲ್ಲಿ ಮಕ್ಕಳು ಚಳಿ, ಜ್ವರ, ಡೆಂಘೀ ಜ್ವರ ಹೀಗೆ ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಹುತೇಕ ಕಡೆ ಆಸ್ಪತ್ರೆಗಳಲ್ಲಿ ಬೆಡ್‌ ಸಿಗದೆ ಮಕ್ಕಳ ಪೋಷಕರು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಜಿಲ್ಲಾಡಳಿತ ವಿಶೇಷ ಸಭೆಗಳನ್ನ ನಡೆಸಿ ಮಕ್ಕಳ ಮೇಲೆ 3ನೇ ಅಲೆ ಅಪ್ಪಳಿಸುತ್ತಿದೆ ಎಂಬ ಭೀತಿ ದೂರವಾಗಿಸಲು ಯೋಜನೆಗಳನ್ನು ರೂಪಿಸುತ್ತಿದೆ.

ದಾವಣಗೆರೆಯ ಮಕ್ಕಳಲ್ಲಿ ಡೆಂಘೀ ಸೇರಿ ವಿಚಿತ್ರ ಜ್ವರ

ಹೆಚ್ಚಿನ ಮಕ್ಕಳು ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದಾರೆ. ಬಹುತೇಕರಲ್ಲಿ ಪ್ಲೇಟ್ಲೇಟ್‌ ಸಂಖ್ಯೆ ಕಡಿಮೆ ಆಗುತ್ತಿದೆ. ಜಿಲ್ಲಾಸ್ಪತ್ರೆ, ಬಾಪೂಜಿ ಮಕ್ಕಳ ಆಸ್ಪತ್ರೆ ಹಾಗೂ ಎಸ್‌ಎಸ್ ಆಸ್ಪತ್ರೆ ಮಕ್ಕಳ ವಿಭಾಗದಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರ ಜೊತೆಗೆ ಕೆಲ ಮಕ್ಕಳನ್ನ ತೆಗೆದುಕೊಂಡು ದೂರದ ಉಡುಪಿಯ ಮಣಿಪಾಲ್ ಆಸ್ಪತ್ರೆಗೂ ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ರಕ್ತ ಮಾದರಿ ತಪಾಸಣೆ ಹೆಚ್ಚಾಗುತ್ತಿದೆ.

ಕಳೆದೊಂದು ವಾರದಿಂದ ದಾವಣಗೆರೆ ಜಿಲ್ಲೆಯಲ್ಲಿ 12 ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚು ಜ್ವರ ಕಾಣಿಸಿಕೊಳ್ಳುತ್ತಿದೆ. ಇದರಲ್ಲಿ ಬಹುತೇಕ ಕಡೆ ಡೆಂಘೀ ಭೀತಿ ಶುರುವಾಗಿದೆ. ಇತರ ಜ್ವರಗಳಿಗಿಂತ ಹೆಚ್ಚು ಭೀತಿ ಹುಟ್ಟಿಸುವುದು ಡೆಂಘೀ ಜ್ವರ. ಕಾರಣ ಇದರಿಂದ ಸಾವು ಸಂಭವಿಸುವ ಸಾಧ್ಯತೆಗಳಿವೆ.

ಈಗಾಗಲೇ ಜಿಲ್ಲಾಡಳಿತ ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿಸಲು ಮುಂದಾಗಿದೆ. ಜಿಲ್ಲಾಧಿಕಾರಿಗಳು ಮಕ್ಕಳ ವೈದ್ಯರ ಹಾಗೂ ಅಧಿಕಾರಿಗಳ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ. ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮಕ್ಕಳ ರಕ್ತ ಪರೀಕ್ಷೆ ಮಾಡಲಾಗುತ್ತಿದೆ.

ಕೆಲ ಮಕ್ಕಳು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಬಹುತೇಕ ಮಕ್ಕಳಿಗೆ ಕೋವಿಡ್ ಟೆಸ್ಟ್‌ಗಳನ್ನ ಮಾಡಲಾಗುತ್ತಿದೆ. ಸದ್ಯಕ್ಕೆ ಸಂತಸದ ವಿಚಾರ ಅಂದ್ರೆ ಮಕ್ಕಳಲ್ಲಿ ಕೋವಿಡ್ ದೃಢ ಪಟ್ಟಿಲ್ಲ. ಆದ್ರೆ, ಮಕ್ಕಳು ಮಾತ್ರ ವಿಚಿತ್ರ ಜ್ವರದಿಂದ ಬಳಲುತ್ತಿದ್ದಾರೆ. ಇದರ ಬಗ್ಗೆ ಇನ್ನಷ್ಟು ಗಂಭೀರ ಕ್ರಮಗಳನ್ನ ಕೈಗೊಳ್ಳಬೇಕಾಗಿದೆ.

ಇದನ್ನೂ ಓದಿ: ದಾವಣಗೆರೆ ಜಿಲ್ಲಾಸ್ಪತ್ರೆಯಲ್ಲಿಲ್ಲ MRI ಸ್ಕ್ಯಾನಿಂಗ್ ಸೆಂಟರ್: ಚಿತ್ರದುರ್ಗಕ್ಕೆ ತೆರಳುವ ಬಡರೋಗಿಗಳು

Last Updated : Sep 21, 2021, 11:42 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.