ETV Bharat / city

ಸಾರಿಗೆ ನೌಕರರ ಮುಷ್ಕರ : ದಾವಣಗೆರೆಯಲ್ಲಿ ಮನವೊಲಿಸಿ 30 ಬಸ್​ ಬಿಟ್ಟ ಅಧಿಕಾರಿಗಳು

author img

By

Published : Apr 19, 2021, 3:59 PM IST

ಇಂದು ಒಮ್ಮೆಲೇ 30 ಬಸ್​ಗಳನ್ನು ಬಿಟ್ಟಿದ್ದರಿಂದ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕ ನಿರ್ವಹಕರು ಸಾರಿಗೆ ಅಧಿಕಾರಿಗಳ ವಿರುದ್ಧ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ವಾಗ್ವಾದಕ್ಕಿಳಿದ್ರು. ಆದ್ರೂ ಕೂಡ ಕೆಎಸ್ಆರ್​ಟಿಸಿಯಿಂದ ಮೂವತ್ತು ಬಸ್ ಬಿಡಲಾಯಿತು..

KSRTC
ಸಾರಿಗೆ

ದಾವಣಗೆರೆ : ಕೊರೊನಾ ಅಟ್ಟಹಾಸದ ನಡುವೆ ಸಾರಿಗೆ ನೌಕರರು ಮುಷ್ಕರ ಕರೆದಿರುವುದು ಪ್ರಯಾಣಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹಾಗಾಗಿ, ಇಂದು ದಾವಣಗೆರೆ ವಿಭಾಗದ ಅಧಿಕಾರಿಗಳು ಸಾರಿಗೆ ನೌಕರರ ಮನವೊಲಿಸಿ ಇಂದು 30 ಬಸ್​ಗಳನ್ನು ವಿವಿಧ ಊರುಗಳಿಗೆ ಸಂಚರಿಸುವಂತೆ ಮಾಡಿದರು.

ದಾವಣಗೆರೆ ವಿಭಾಗದಿಂದ ಇಂದು 30 ಬಸ್​ಗಳು ಸಂಚರಿಸುತ್ತಿದೆ. ದಾವಣಗೆರೆ-ಹರಿಹರ, ದಾವಣಗೆರೆ-ಚಿತ್ರದುರ್ಗ, ದಾವಣಗೆರೆ-ರಾಣೆಬೆನ್ನೂರು ಹಾಗೂ ಹಾವೇರಿ, ದಾವಣಗೆರೆ, ಬೆಂಗಳೂರಿಗೆ ಬಸ್​ಗಳನ್ನು ಬಿಟ್ಟಿದ್ದು, ಕೆಲಸಕ್ಕೆ ಹಾಜರ್ ಆಗುವಂತೆ ಸಾರಿಗೆ ನೌಕರರನ್ನು ಅಧಿಕಾರಿಗಳು ಮನವೊಲಿಸಿದರು.

ಇನ್ನು, ಇಂದು ಒಮ್ಮೆಲೇ 30 ಬಸ್​ಗಳನ್ನು ಬಿಟ್ಟಿದ್ದರಿಂದ ಖಾಸಗಿ ಬಸ್ ಮಾಲೀಕರು ಹಾಗೂ ಚಾಲಕ ನಿರ್ವಹಕರು ಸಾರಿಗೆ ಅಧಿಕಾರಿಗಳ ವಿರುದ್ಧ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ವಾಗ್ವಾದಕ್ಕಿಳಿದ್ರು. ಆದ್ರೂ ಕೂಡ ಕೆಎಸ್ಆರ್​ಟಿಸಿಯಿಂದ ಮೂವತ್ತು ಬಸ್ ಬಿಡಲಾಯಿತು.

ಇದನ್ನೂ ಓದಿ:ನಮ್ಮ ಮನೆ ಸುಟ್ಟು, ಬೇರೆಯವರ ಮನೆ ಬೆಳಗಿಸುತ್ತಿದ್ದೀರಾ?: ಸರ್ಕಾರಕ್ಕೆ ಖಂಡ್ರೆ ಪ್ರಶ್ನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.