ETV Bharat / city

ಮಂಗಳವಾರ ಪುನೀತ್ ರಾಜ್‌ಕುಮಾರ್‌ ಸಮಾಧಿಗೆ ಕುಟುಂಬಸ್ಥರಿಂದ ಹಾಲು, ತುಪ್ಪ ಕಾರ್ಯ

ಮಂಗಳವಾರದಂದು ಪುನೀತ್ ರಾಜ್‍ಕುಮಾರ್ ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ ಕಾರ್ಯ ನೆರವೇರಲಿದೆ.

worship from family members to puneeth's  tomb on Tuesday
ಮಂಗಳವಾರದಂದು ಅಪ್ಪು ಸಮಾಧಿಗೆ ಕುಟುಂಬಸ್ಥರಿಂದ ಹಾಲು ತುಪ್ಪ ಕಾರ್ಯ
author img

By

Published : Oct 31, 2021, 9:49 AM IST

ಬೆಂಗಳೂರು: ಕಂಠೀರವ ಸ್ಟುಡಿಯೋ ಆವರಣದಲ್ಲಿ ದಿ.ನಟ ಪುನೀತ್​ ರಾಜ್​ಕುಮಾರ್​ ಅವರ​ ಅಂತಿಮ ವಿಧಿವಿಧಾನಗಳನ್ನು ಈಡಿಗ ಸಂಪ್ರದಾಯದಂತೆ ಇಂದು ಬೆಳಗ್ಗೆ ನೆರವೇರಿಸಲಾಗಿದೆ. ಐದನೇ ದಿನಕ್ಕೆ ಅಂದರೆ ಮಂಗಳವಾರದಂದು ಪುನೀತ್ ರಾಜ್‍ಕುಮಾರ್ ಸಮಾಧಿಗೆ ಕುಟುಂಬಸ್ಥರಿಂದ ಹಾಲು, ತುಪ್ಪ ಕಾರ್ಯ ನೆರವೇರಲಿದೆ.

ಗೃಹ ಸಚಿವರಿಂದ ಧನ್ಯವಾದ ಸಮರ್ಪಣೆ:

ನೆಚ್ಚಿನ ನಟ, ಕನ್ನಡ ಚಿತ್ರರಂಗದ ಮುಕುಟಮಣಿಯೂ ಆಗಿದ್ದ ಪುನೀತ್ ರಾಜ್​​​ಕುಮಾರ್ ಅವರ ಅಂತಿಮ ದರ್ಶನ ಹಾಗೂ ವಿಧಿವಿಧಾನಗಳು ಅತ್ಯಂತ ಶಾಂತಿಯುತವಾಗಿ, ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು. ಪುನೀತ್​ ಅವರ ಅಕಾಲಿಕ ನಿಧನದಂತಹ ದುಃಖದ ಸಂದರ್ಭದಲ್ಲಿ ಸಾರ್ವಜನಿಕರು ಅತ್ಯಂತ ಶಾಂತಿಯುತವಾಗಿ ವರ್ತಿಸಿ ಗೌರವ ಸಲ್ಲಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ಪುನೀತ್‌ ಅಂತ್ಯಸಂಸ್ಕಾರಕ್ಕೆ ಸೂಕ್ತ ಭದ್ರತೆ: ಪೊಲೀಸ್ ಕಾರ್ಯನಿರ್ವಹಣೆಗೆ ಕಮಲ್ ಪಂತ್‌ ಮೆಚ್ಚುಗೆ

ಅತ್ಯಂತ ಶಿಸ್ತುಬದ್ಧವಾಗಿ ಎಷ್ಟೇ ಕಷ್ಟಗಳಿದ್ದರೂ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ನಿಭಾಯಿಸಿದ ನಮ್ಮ ಪೊಲೀಸ್, ಬಿಬಿಎಂಪಿ ಹಾಗೂ ಕಂದಾಯ ಇಲಾಖೆ ಸಿಬ್ಬಂದಿ ಹಾಗೂ ಇತರೆ ಎಲ್ಲರಿಗೂ ನನ್ನ ಹೃತ್ಪೂರ್ವಕ ಧನ್ಯವಾದ ಸಲ್ಲಿಸುತ್ತೇನೆ ಎಂದು ಗೃಹ ಸಚಿವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.