ಬೆಂಗಳೂರು: ಪುನೀತ್ ರಾಜ್‍ಕುಮಾರ್ ಸಮಾಧಿಗೆ ಇಂದು ಹಾಲು-ತುಪ್ಪ ವಿಧಿವಿಧಾನ ಕಾರ್ಯ ನೆರವೇರಿಸಲಾಯಿತು. ದಿ. ನಟನ ಪತ್ನಿ, ಪುತ್ರಿಯರಿಂದ ಪೂಜೆ ನೇರವೇರಿಸಲಾಯಿತು.
ಪುನೀತ್ ಪತ್ನಿ ಅಶ್ವಿನಿ ಪುತ್ರಿಯರಾದ ವಂದನಾ ಹಾಗೂ ಧೃತಿ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ಇನ್ನೂ, ರಾಜ್ ಕುಟುಂಬದ ಪೂರ್ಣಿಮ, ಲಕ್ಷ್ಮೀ, ರಾಮ್ ಕುಮಾರ್ ಫ್ಯಾಮಿಲಿ, ಮಾವ ಚಿನ್ನೇಗೌಡ ಕುಟುಂಬ, ಗಾಜನೂರು ಸಂಬಂಧಿಕರು, ವಿನಯ್ ರಾಘವೇಂದ್ರ, ಯುವರಾಜ್ ಕುಮಾರ್, ಶ್ರೀ ಮುರುಳಿ, ವಿನಯ್ ರಾಘವೇಂದ್ರ , ಫಿಲ್ಮ್ ಚೇಂಬರ್ ಸದಸ್ಯರು , ಸಚಿವ ಗೋಪಾಲಯ್ಯ, ಮುನಿರತ್ನ, ಮಧು ಬಂಗಾರಪ್ಪ, ಗೀತಾ ಶಿವರಾಜ್ಕುಮಾರ್, ಶಿವರಾಜ್ ಕುಮಾರ್ ಮಗಳು ನಿವೇದಿತಾ ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
50ಕ್ಕೂ ಹೆಚ್ಚು ಬಗೆಯ ತಿನಿಸುಗಳು:
ಎಡೆ ಇಡಲು ದೊಡ್ಮನೆ ಕುಟುಂಬಸ್ಥರು ಕೆಲವು ಬಗೆಯ ಅಡುಗೆ ಮಾಡಿ ತಂದಿದ್ದಾರೆ. ಇನ್ನೂ ಅಪ್ಪು ನಾವ್ ವೆಜ್ ಪ್ರಿಯ ಆಗಿರುವುದರಿಂದ ಇಂದಿನ ವಿಧಿವಿಧಾನ ಕಾರ್ಯದಲ್ಲಿ ಕಬಾಬ್, ಬಿರಿಯಾನಿ, ಇಡ್ಲಿ , ಕಾಳು ಗೊಜ್ಜು, ಮೊಟ್ಟೆ ಬಿರಿಯಾನಿ, ಬಜ್ಜಿ, ಐದಾರು ವೈರಟಿಯ ಸಿಹಿ ತಿನಿಸುಗಳು, ಅಪ್ಪುವಿನ ಪ್ರಿಯವಾದ ಮುದ್ದೆ ಹಾಗೂ ನಾಟಿ ಕೋಳಿ ಸಾಂಬಾರ್ ಸೇರಿ ಸುಮಾರು 50ಕ್ಕೂ ಹೆಚ್ಚು ಬಗೆಯ ತಿನಿಸುಗಳು ಇವೆ.
ಇದನ್ನೂ ಓದಿ: ಪುನೀತ್ಗೆ ಇಂದು ಹಾಲು-ತುಪ್ಪ ಕಾರ್ಯ: ಬಿಳಿ, ಹಳದಿ ಬಣ್ಣದ ಹೂಗಳಿಂದ ಅಲಂಕಾರಗೊಂಡ ಅಪ್ಪು ಸಮಾಧಿ