ಬೆಂಗಳೂರು : ಮನೆ ಖಾಲಿ ಮಾಡುವಂತೆ ರೌಡಿಶೀಟರ್ ಹಾಗೂ ಆತನ ಸಹಚರರು ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿರುವುದಾಗಿ ಆರೋಪಿಸಿ ಅರ್ಚನಾ ಮಹದೇವ್ ಎಂಬುವರು ಬಸವನಗುಡಿ ಪೊಲೀಸರಿಗೆ ಫೇಸ್‌ಬುಕ್ ಮೂಲಕ ಬಹಿರಂಗವಾಗಿ ದೂರು ನೀಡಿದ್ದಾರೆ.
ಪೊಲೀಸ್ ಠಾಣೆಗೆ ತೆರಳಿ ಲಿಖಿತವಾಗಿ ದೂರು ನೀಡಿದರೂ ಕಾನೂನು ಕ್ರಮಕೈಗೊಂಡಿಲ್ಲ. ಹೀಗಾಗಿ, ತಮ್ಮ ಫೇಸ್‌ಬುಕ್‌ನಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಹಿರಂಗ ಪತ್ರ ಬರೆದಿದ್ದಾರೆ.
ಬಸವನಗುಡಿ ಠಾಣಾ ವ್ಯಾಪ್ತಿಯ ಪೊಲೀಸ್ ರಸ್ತೆಯಲ್ಲಿ ವಾಸಿಸುತ್ತಿರುವ ಅರ್ಚನಾ ಅವರ ಮನೆಗೆ ರೋಹನ್ ರೆಡ್ಡಿ ಎಂಬಾತ ಮತ್ತು ಆತನ ಸಹಚರರು ಮನೆ ಖಾಲಿ ಮಾಡುವಂತೆ ಒತ್ತಾಯಿಸಿದ್ದಾರೆ. ಮನೆ ಮುಂದೆ ಬಂದು ಕುಟುಂಬಸ್ಥರಿಗೆ ಜೀವ ಬೆದರಿಕೆವೊಡ್ಡಿದ್ದಾರೆ.
ಇದರಿಂದ ತಮ್ಮ ಕುಟುಂಬ ಬಹಳ ನೊಂದಿದೆ. ಅಲ್ಲದೆ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಚಕ್ರಕ್ಕೂ ಮತ್ತು ಕಾರಿಗೂ ಇರುವ ಸಂಪರ್ಕ ತೆಗೆದು ಅಪಘಾತವಾಗುವಂತೆ ಮಾಡಿದ್ದಾರೆ. ತಾನು ವಾಸ ಮಾಡುತ್ತಿರುವ ಮನೆಯನ್ನು ವಶಕ್ಕೆ ಪಡೆಯಲು ರೋಹನ್ ರೆಡ್ಡಿ ಕಡೆಯವರು ತಮ್ಮ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆಂದು ಇವರು ಆರೋಪಿಸಿದ್ದಾರೆ.
ಓದಿ : ಶಿವಮೊಗ್ಗದಲ್ಲಿ ಭಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ, ನಿಷೇಧಾಜ್ಞೆ ಜಾರಿ