ಬೆಂಗಳೂರು: ಕೋವಿಡ್-19 ಸೋಂಕನ್ನು ಪತ್ತೆಹಚ್ಚಲು RT-PCR ಪರೀಕ್ಷೆಗಾಗಿ ಸರ್ಕಾರದಿಂದ ಕಳುಹಿಸಲಾದ ಮಾದರಿಗಳ ಪರೀಕ್ಷಾ ಫಲತಾಂಶವನ್ನು 24 ಗಂಟೆಗಳ ಅವಧಿಯೊಳಗಾಗಿ ನೀಡುವಂತೆ ಹೈಕೋರ್ಟ್ ನಿರ್ದೇಶಿಸಿದೆ.
ರಾಜ್ಯದಲ್ಲಿ ಕೋವಿಡ್-19ರ 2ನೇ ಅಲೆಯ ಸೋಂಕು ವ್ಯಾಪಕವಾಗಿ ಉಲ್ಬಣಿಸುತ್ತಿರುವ ಹಿನ್ನಲೆಯಲ್ಲಿ ಸೋಂಕನ್ನು ಪತ್ತೆ ಹಚ್ಚಲು RT-PCR ಪರೀಕ್ಷೆಗಾಗಿ ಮಾದರಿ ಸಂಗ್ರಹಿಸಲಾಗುತ್ತದೆ. ಬಳಿಕ ಪರೀಕ್ಷಾ ಫಲತಾಂಶವನ್ನು ಅತೀ ಶೀಘ್ರದಲ್ಲಿ ಹಾಗೂ 24ಗಂಟೆಗಳ ಅವಧಿಯೊಳಗಾಗಿ ಪ್ರಕಟಿಸಲು ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ. RT-PCR ಪರೀಕ್ಷೆ ಫಲತಾಂಶವನ್ನು 24 ಗಂಟೆಯೊಳಗಾಗಿ ನೀಡುವುದಲ್ಲದೆ ಅದರ ಮಾಹಿತಿಯನ್ನು ICMR Portal ನಲ್ಲಿ ನಮೂದಿಸುವಂತೆಯೂ ಹೇಳಿದೆ.