ETV Bharat / city

ಪತಿಗೆ ಅಶ್ಲೀಲ ಚಿತ್ರ ಜಾಲತಾಣಗಳ ಚಟ: ಕೋರ್ಟ್ ಮೆಟ್ಟಿಲೇರಿದ ಪತ್ನಿ - ಬೆಂಗಳೂರು ಪೋರ್ನ್ ನ್ಯೂಸ್

ತನ್ನ ಪತಿ ಪೋರ್ನ್ ಸೈಟ್ ನೋಡುವ ಹಾಗೂ ವೇಶ್ಯೆಯರೊಂದಿಗೆ ಮೊಬೈಲ್ ಚಾಟ್ ಮಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ.

porn
porn
author img

By

Published : Nov 2, 2021, 3:58 PM IST

ಬೆಂಗಳೂರು: ಪೋರ್ನ್ ವೆಬ್ ಸೈಟ್ ಚಟಕ್ಕೆ ಬಿದ್ದ ಗಂಡನನ್ನು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಪತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ನಿರ್ದೇಶಿಸಿದೆ.

ಜಯನಗರದ 36 ವರ್ಷದ ಮಹಿಳೆಯೊಬ್ಬರು ತನ್ನ ಪತಿ ಪೋರ್ನ್ ಸೈಟ್ ನೋಡುವ ಹಾಗೂ ವೇಶ್ಯೆಯರೊಂದಿಗೆ ಮೊಬೈಲ್ ಚಾಟ್ ಮಾಡುವ ದುರಭ್ಯಾಸ ಬೆಳೆಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ತನಗೆ ಕಿರುಕುಳ ನೀಡುತ್ತಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸರಿಗೆ ಆದೇಶಿಸಬೇಕು ಎಂದು ಕೋರಿ ಪಿಸಿಆರ್ ದಾಖಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನಗರದ 1ನೇ ಹೆಚ್ಚುವರಿ ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಎಸಿಎಂಎಂ) ಕೋರ್ಟ್, ಪತಿಯ ವಿರುದ್ಧ ದೂರು ದಾಖಲಿಸಿ ತನಿಖೆ ನಡೆಸುವಂತೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರಿಗೆ ನಿರ್ದೇಶಿಸಿದೆ.

ಮಹಿಳೆಯ ಆರೋಪವೇನು?
ನ್ಯಾಯಾಲಯಕ್ಕೆ ನೀಡಿರುವ ದೂರಿನ ಪ್ರಕಾರ, ಮಹಿಳೆ 2019ರ ನವೆಂಬರ್ 11ರಂದು ಆರೋಪಿತ ವ್ಯಕ್ತಿಯೊಂದಿಗೆ ಮದುವೆಯಾಗಿದ್ದರು. ಈ ವೇಳೆ 2 ಲಕ್ಷ ಹಣ ಹಾಗೂ 1 ಲಕ್ಷ ಮೌಲ್ಯದ ಒಡವೆಗಳನ್ನು ವರದಕ್ಷಿಣೆಯಾಗಿ ನೀಡಿದ್ದರು. ಮದುವೆಯಾದ ಕೆಲ ಸಮಯದಲ್ಲೇ ಪತಿ ಪೋರ್ನ್ ವಿಡಿಯೋಗಳ ಚಟಕ್ಕೆ ಬಿದ್ದಿರುವುದು ಬೆಳಕಿಗೆ ಬಂದಿತ್ತು. ಈ ಕುರಿತು ಮಹಿಳೆ, ಪತಿಯ ಪೋಷಕರಿಗೆ ದೂರು ಹೇಳಿದ್ದರು. ಮೊದಲಿಗೆ ಆತನ ಪೋಷಕರು ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶ ನೀಡುವಂತೆ ತಿಳಿಸಿ, ಮಗನಿಗೂ ಬುದ್ಧಿ ಹೇಳಿದ್ದರು.

ನಂತರದ ದಿನಗಳಲ್ಲಿಯೂ ಪತಿ ತನ್ನ ನಡವಳಿಕೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ಬದಲಿಗೆ ಪೋರ್ನ್ ವೆಬ್ ಸೈಟ್​​ಗಳಿಗೆ ಸಬ್ ಸ್ಕ್ರಿಪ್ಶನ್ ತೆಗೆದುಕೊಂಡು ವೇಶ್ಯೆಯರೊಂದಿಗೆ ತಡರಾತ್ರಿವರೆಗೂ ಆನ್ಲೈನ್ ಚಾಟ್ ಮಾಡುತ್ತಿದ್ದಾರೆ. ಅಲ್ಲದೇ, ಅವರೊಂದಿಗೆ ಸಂಬಂಧವಿರಿಸಿಕೊಂಡು ಹಣ ಖರ್ಚು ಮಾಡುತ್ತಿದ್ದಾರೆ. ಈ ಕುರಿತು ಪ್ರಶ್ನಿಸಿದ್ದಕ್ಕೆ ಕಿರುಕುಳ ನೀಡಲು ಪ್ರಾರಂಭಿಸಿದರು. ಜೊತೆಗೆ ಹಳಸಿದ ಊಟ ಕೊಡುತ್ತಿದ್ದರು. ಇತ್ತೀಚೆಗೆ ಪತಿ ತಾನು ವಿಚ್ಛೇದಿತ ಎಂದು ಹೇಳಿಕೊಂಡು ಮ್ಯಾಟ್ರಿಮೊನಿಯಲ್ ವೆಬ್ ಸೈಟ್​​ನಲ್ಲಿ ತನ್ನ ಪ್ರೊಫೈಲ್ ಹಾಕಿಕೊಂಡಿದ್ದಾರೆ. ಈ ಮೂಲಕ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ನ್ಯಾಯಾಲಯದ ನಿರ್ದೇಶನದಂತೆ ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಆರೋಪಿ ಪತಿ ವಿರುದ್ಧ ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಿರುಕುಳ ಹಾಗೂ ಐಟಿ ಕಾಯ್ದೆ ಅಡಿ ಸೋಮವಾರ (ನ.1) ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ: ನ್ಯೂಸ್​ ಚಾನೆಲ್​​ನಲ್ಲಿ ಅಶ್ಲೀಲ ವಿಡಿಯೋ ಪ್ರಸಾರ; ವೆದರ್​ ರಿಪೋರ್ಟ್​ ನೋಡಿ ಬೆದರಿದ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.