ETV Bharat / city

ಪ್ರಚಾರದ ಗೀಳಿಗೆ ಬಿದ್ದು ಗಲಾಟೆ ಮಾಡಿ ವಿಡಿಯೋ ಮಾಡಿದ್ದೆವು : ತಪ್ಪೊಪ್ಪಿಕೊಂಡ ಆರೋಪಿಗಳು

ಸಣ್ಣ ಸಣ್ಣ ವಿಡಿಯೋ ಮಾಡಿ ಫೇಸ್​​ಬುಕ್​​ಗೆ ಹಾಕುತ್ತಿದ್ದೆ. ಅದೇ ರೀತಿ ಗಲಾಟೆ ಮಾಡಿದ ವಿಡಿಯೋ ಸಹ ಅಪ್‌ಲೋಡ್ ಮಾಡಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದ್ದ ವಿರೋಧ ಕಂಡು ಹೆದರಿ ಮೊಬೈಲ್​​ನಲ್ಲಿ ವಿಡಿಯೋ ಡಿಲೀಟ್ ಮಾಡಿದ್ದೆ ಎಂದು ಆರೋಪಿ ನಯಾಜ್ ಕಣ್ಣೀರು ಸುರಿಸಿದ್ದಾನೆ..

Bangalore
ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣ
author img

By

Published : Sep 20, 2021, 9:49 PM IST

ಬೆಂಗಳೂರು : ಅನ್ಯಕೋಮಿನ ಯುವತಿಗೆ ಬೈಕ್​ನಲ್ಲಿ ಡ್ರಾಪ್ ಮಾಡಿದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸುದ್ದುಗುಂಟೆಪಾಳ್ಯ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಆರೋಪಿಗಳನ್ನ ವಿಚಾರಣೆಗೊಳಪಡಿಸಲಾಗಿದೆ. ಈ ವೇಳೆ ಪ್ರಚಾರಕ್ಕಾಗಿ ಈ ಕೃತ್ಯದಲ್ಲಿ ತೊಡಗಿಕೊಂಡೆವು ಎಂಬ ಸಂಗತಿಯನ್ನು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

ಕಳೆದ ಶುಕ್ರವಾರ ನಗರದ ಡೈರಿ ಸರ್ಕಲ್ ಬಳಿ ಅನ್ಯಕೋಮಿನ ಯುವತಿ (ಸಹದ್ಯೋಗಿ)ಯನ್ನು ಹಿಂದೂ ಯುವಕ ಬೈಕ್‌ನಲ್ಲಿ ಕೂರಿಸಿಕೊಂಡಿರುವುದನ್ನು ಕಂಡು ಆರೋಪಿಗಳು ಆತನನ್ನು ಹಿಂಬಾಲಿಸಿ ಅಡ್ಡಗಟ್ಟಿ ಮುಸ್ಲಿಂ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಗಲಾಟೆ ಮಾಡಿ ಹಲ್ಲೆ ಮಾಡಿದ್ದರು. ಈ ಸಂಬಂಧ ಯುವತಿ ನೀಡಿದ ದೂರು ಆಧರಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ಪ್ರಚಾರ ಗಿಟ್ಟಿಸಿಕೊಳ್ಳಲು ಹೋಗಿ ತಪ್ಪು ಮಾಡಿದ್ದೇವೆ : ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದ ನಯಾಜ್ ಹಾಗೂ ಸ್ನೇಹಿತ ಸೋಯೆಲ್ ಇಬ್ಬರು ವಿಚಾರಣೆ ವೇಳೆ ಕೃತ್ಯದ ಬಗ್ಗೆ ಪಶ್ಚಾತಾಪ ವ್ಯಕ್ತಪಡಿಸಿದ್ದಾರೆ. ಪ್ರಚಾರದ ಹುಚ್ಚಿನಿಂದ ನಾವು ಹೀಗೆ ಮಾಡಿದ್ದೆವು. ಧರ್ಮದ ಬಗ್ಗೆ ವಿಡಿಯೋ ಮಾಡಿದರೆ ಒಳ್ಳೆಯ ಪ್ರಚಾರ ಸಿಗಲಿದೆ ಎಂದುಕೊಂಡಿದ್ದೆವು. ಆದರೆ, ಇಂತಹ ಪರಿಸ್ಥಿತಿ ನಿರ್ಮಾಣ ಆಗುತ್ತೆ ಎಂಬುದಾಗಿ ಗೊತ್ತಿರಲಿಲ್ಲ.

ಸಣ್ಣ ಸಣ್ಣ ವಿಡಿಯೋ ಮಾಡಿ ಫೇಸ್​​ಬುಕ್​​ಗೆ ಹಾಕುತ್ತಿದ್ದೆ. ಅದೇ ರೀತಿ ಗಲಾಟೆ ಮಾಡಿದ ವಿಡಿಯೋ ಸಹ ಅಪ್‌ಲೋಡ್ ಮಾಡಿದ್ದೆ. ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದ್ದ ವಿರೋಧ ಕಂಡು ಹೆದರಿ ಮೊಬೈಲ್​​ನಲ್ಲಿ ವಿಡಿಯೋ ಡಿಲೀಟ್ ಮಾಡಿದ್ದೆ ಎಂದು ಆರೋಪಿ ನಯಾಜ್ ಕಣ್ಣೀರು ಸುರಿಸಿದ್ದಾನೆ.

ಆರೋಪಿಗಳಿಂದ ಹಲ್ಲೆಗೆ ಒಳಗಾಗಿದ್ದ ಮಹೇಶ್ ಹಾಗೂ ಮಹಿಳೆ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದರು. ಕಳೆದ ಶುಕ್ರವಾರ ಸಂಜೆ ಬ್ಯಾಂಕಿನಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಮಹಿಳೆಯ ಅತ್ಯುತ್ತಮ ಉದ್ಯೋಗಿ ಎಂದು ಸನ್ಮಾನಿಸಿ ಲ್ಯಾಪ್‌ಟಾಪ್ ನೀಡಿ ಗೌರವಿಸಲಾಗಿತ್ತು.

ಸಮಾರಂಭ ತಡವಾಗಿದ್ದರಿಂದ ಬ್ಯಾಂಕಿನವರೇ ಮಹಿಳೆಯನ್ನು ಡ್ರಾಪ್ ಮಾಡುವಂತೆ ಸೂಚಿಸಿದ್ದರು. ಮಹಿಳೆಯು ಸಹ ಗಂಡನಿಗೆ ಕರೆ ಮಾಡಿ ಮನೆಗೆ ಬರುವುದು ತಡವಾಗಲಿದೆ. ಮಹೇಶ್ ಎಂಬುವರ ಬೈಕ್​​ನಲ್ಲಿ ಬರುತ್ತಿರುವುದಾಗಿ ಮಾಹಿತಿ ನೀಡಿದ್ದರು. ಇದರಂತೆ ಡೈರಿ ಸರ್ಕಲ್ ಬಳಿ ಬೈಕಿನಲ್ಲಿ ಹೋಗುವಾಗ ಆರೋಪಿಗಳು ಕಂಡು ಹಿಂಬಾಲಿಸಿ ಗಲಾಟೆ ಮಾಡಿ ಹಲ್ಲೆ ನಡೆಸಿದ್ದರು.

ಇದನ್ನೂ ಓದಿ: ಬೆಂಗಳೂರು: ಮುಸ್ಲಿಂ ಯುವತಿಗೆ ಡ್ರಾಪ್ ನೀಡಿದ ವ್ಯಕ್ತಿಗೆ ಥಳಿಸಿದ ಗುಂಪು.. ಇಬ್ಬರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.