ETV Bharat / city

ರಾಜಧಾನಿಯಲ್ಲಿ ಮುಂದುವರಿದ ನೀರು ಮರುಬಳಕೆ ಗೊಂದಲ! - Wastewater Treatment Water Use

ವಸತಿ ಸಮುಚ್ಚಯಗಳು ಕಡ್ಡಾಯವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳುವಂತೆ ಜಲಮಂಡಳಿ ನಿಯಮ ರೂಪಿಸಿದೆ. 2016ರ ನಂತರ ಕಟ್ಟಲ್ಪಟ್ಟ ಹೊಸ ಅಪಾರ್ಟ್​ಮೆಂಟ್​​ಗಳಲ್ಲಿ ಸಂಸ್ಕರಿಸಿದ ನೀರು ಪುನರ್​​​ಬಳಕೆಗೆ ಮಾರ್ಗಸೂಚಿ ರೂಪಿಸಲಾಗಿದೆ.

Sewage treatment
ತ್ಯಾಜ್ಯ ನೀರು ಸಂಸ್ಕರಣಾ ಘಟಕ
author img

By

Published : Dec 29, 2020, 4:17 PM IST

Updated : Dec 30, 2020, 3:24 PM IST

ಬೆಂಗಳೂರು: ಸಿಲಿಕಾನ್ ಸಿಟಿಯ ಸುಮಾರು ಒಂದೂಕಾಲು ಕೋಟಿ ಜನಸಂಖ್ಯೆಗೆ ಜಲಮಂಡಳಿ ನಿತ್ಯ 1,450 ಎಂಎಲ್​ಡಿ (ದಶಲಕ್ಷ ಲೀ) ನೀರು ಹರಿಸಲಾಗುತ್ತಿದೆ. ಪ್ರತಿಮನೆಗೂ ಎರಡು ದಿನಕ್ಕೊಮ್ಮೆ ಕಾವೇರಿ ನೀರು ಹರಿಸಲಾಗುತ್ತಿದೆ. ಹೊಸ 110 ಹಳ್ಳಿಗಳಿಗೂ 1,500 ಎಂ‌ಎಲ್​​ಡಿ ನೀರು ಪೂರೈಸಲಾಗುತ್ತಿದೆ. ಇಷ್ಟಾದರೂ ಬೇಸಿಗೆಯಲ್ಲಿ ಜನರಿಗೆ, ಎತ್ತರದ ಪ್ರದೇಶದ ಮನೆಗಳಿಗೆ ನೀರು ಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, 50 ದಶಲಕ್ಷ ಹೆಚ್ಚುವರಿ ನೀರು ಪೂರೈಕೆಗೆ ಮಂಡಳಿ ಚಿಂತನೆ ನಡೆಸಿದೆ.

ಜೊತೆಗೆ 2021ರ ಸೆಪ್ಟೆಂಬರ್​​ನಿಂದ ಎತ್ತಿನಹೊಳೆ ಯೋಜನೆ ಹಾಗೂ 5ನೇ ಹಂತದ ಯೋಜನೆಯಿಂದಲೂ ಹೆಚ್ಚುವರಿ ನೀರು ದೊರೆಯಲಿದೆ. 2023ರ ಡಿಸೆಂಬರ್ ವೇಳೆಗೆ ನಗರದಲ್ಲಿ ಒಟ್ಟು 2,300 ಎಂಎಲ್​ಡಿ ನೀರು ಲಭ್ಯವಾಗಲಿದೆ. ಈ ನೀರನ್ನು 2,035ರವರೆಗೂ ಬಳಸಿಕೊಳ್ಳುವ ಬಗ್ಗೆ ಜಲಮಂಡಳಿ ಯೋಜನೆ ರೂಪಿಸಿದೆ.

ಮರುಬಳಕೆ ನೀರು ಆರೋಗ್ಯಕ್ಕೆ ಕುತ್ತು: ಇದರ ಮಧ್ಯೆ ವಸತಿ ಸಮುಚ್ಚಯಗಳು ಕಡ್ಡಾಯವಾಗಿ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಅಳವಡಿಸಿಕೊಳ್ಳುವಂತೆ ನಿಯಮ ಜಾರಿಗೆ ತರಲಾಗಿದೆ. 2016ರ ನಂತರ ಕಟ್ಟಲ್ಪಟ್ಟ ಹೊಸ ಅಪಾರ್ಟ್​ಮೆಂಟ್​​ಗಳಲ್ಲಿ ಸಂಸ್ಕರಿಸಿದ ನೀರು ಪುನರ್​​​ಬಳಕೆಗೆ ಮಾರ್ಗಸೂಚಿ ರೂಪಿಸಲಾಗಿದೆ. ಆದರೆ, ಅದಕ್ಕೆ ಅಗತ್ಯವಿರುವ ಸಂಪೂರ್ಣ ತಂತ್ರಜ್ಞಾನದ ಕುರಿತು ಅರಿವಿಲ್ಲದ ಕಾರಣ, ಈ ನೀರಿನ ಮರುಬಳಕೆಗೆ ಜನರ ಆರೋಗ್ಯಕ್ಕೆ ಕುತ್ತಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ. ಪ್ರಸ್ತುತ ಅಪಾರ್ಟ್​​​ಮೆಂಟ್​ಗಳಲ್ಲಿ ಸಂಸ್ಕರಿಸಿದ ನೀರನ್ನು ತೆರೆದ ಜಾಗಗಳಲ್ಲಿ ಗಾರ್ಡನಿಂಗ್​​ಗೆ ವಾಹನ ತೊಳೆಯಲು, ಸ್ನಾನಕ್ಕೆ - ಶೌಚಾಲಯದ ಉಪಯೋಗಕ್ಕೆ ಬಳಸಲಾಗುತ್ತಿದೆ.

ಇದನ್ನೂ ಓದಿ...ಸರ್ಕಾರದ ಭಾಗವಾದ ಬೆಂಗಳೂರು ಒನ್ ಸೆಂಟರ್​ನಲ್ಲೇ 10 ರೂ ನಾಣ್ಯ ನಿರಾಕರಣೆ

ಸಂಸ್ಕರಿಸಿದ ನೀರಿನ ಗುಣಮಟ್ಟ ಹಾಗೂ ಬಳಕೆ ಬಗ್ಗೆ ಜನರಲ್ಲಿರುವ ಆತಂಕದ ಬಗ್ಗೆ ಬೆಂಗಳೂರು ಅಪಾರ್ಟ್​​ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ವಿಕ್ರಮ್​​ ಮಾತನಾಡಿ, ಎಸ್​​ಟಿಪಿ ತಂತ್ರಜ್ಞಾನ ಸರಿಯಾಗಿ ಇರಬೇಕು. ಈ ಬಗ್ಗೆ ಇನ್ನೂ ಗುಣಮಟ್ಟ ನಿಗದಿಯಾಗಿಲ್ಲ. ಗಾರ್ಡನ್​​​ಗಳಿಗೆ ಬಳಸಲು ಯಾವುದೇ ಸಮಸ್ಯೆ ಇಲ್ಲ. ಆದರೆ, ಡಬಲ್​ ಪೈಪಿಂಗ್ ಇರುವ ಅಪಾರ್ಟ್​​ಮೆಂಟ್​ಗಳಲ್ಲಿ ಮನೆ ಬಳಕೆಗೂ ಬಳಸುತ್ತಿರುವುದರಿಂದ ಹಲವರಲ್ಲಿ ಆತಂಕ ಇದೆ ಎಂದರು.

ಬೆಂಗಳೂರು ಅಪಾರ್ಟ್​​ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ವಿಕ್ರಮ್

ನೀಡದ ಗುಣಮಟ್ಟ ಸೂಚ್ಯಂಕ: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲಮಂಡಳಿ ಎಷ್ಟೇ ನಿಯಮ ತಂದರೂ ಅದಕ್ಕೆ ಅಗತ್ಯವಾದ ಗುಣಮಟ್ಟ ಸೂಚ್ಯಂಕಗಳನ್ನು ನೀಡಿಲ್ಲ. ತಂತ್ರಜ್ಞಾನಗಳ ವ್ಯವಸ್ಥೆ ಇಲ್ಲದೇ ಬಳಸುವುದು ಕಷ್ಟ. ಅಲ್ಲದೆ, ಕೋವಿಡ್ ಸಮಯದಲ್ಲಿ ವಿವಿಧ ದೇಶಗಳಲ್ಲಿ ಮಾಡಿರುವ ಅಧ್ಯಯನಗಳ ಪ್ರಕಾರ, ತ್ಯಾಜ್ಯ ನೀರು ಹಾಗೂ ಘನತ್ಯಾಜ್ಯಗಳಲ್ಲಿ ವೈರಲ್ ಲೆವೆಲ್ ಹೆಚ್ಚಿರುವ ಕುರಿತು ಅಧ್ಯಯನದಲ್ಲಿ ಗೊತ್ತಾಗಿದೆ. ಹೀಗಾಗಿ, ನೀರಿನ ಮರುಬಳಕೆ ಆತಂಕ ಹುಟ್ಟುಹಾಕಿದೆ. ಬಳಸಿ ಉಳಿದ ಶೇ.50 - 60ರಷ್ಟು ನೀರನ್ನು ಪುನಃ ಒಳಚರಂಡಿಗೆ ಬಿಡದಂತೆ ಜಲಮಂಡಳಿ ಬ್ಲಾಕ್ ಮಾಡುತ್ತಿರುವುದೆಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ಯಾರಾಮೀಟರ್ ಪರೀಕ್ಷೆ ಪರಿಶೀಲನೆ: ಕೆ.ಸಿ.ವ್ಯಾಲಿ ಯೋಜನೆಯಡಿ ಜಲಮಂಡಳಿ ಬೆಂಗಳೂರಿನ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಜಿಲ್ಲೆಯ ಕೆರೆಗಳಿಗೆ ಹರಿಸಲಾಗುತ್ತದೆ. ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ 126 ಕೆರೆಗಳಿಗೆ ತುಂಬಿಸುವ ಯೋಜನೆ ಇದಾಗಿದ್ದು, ನಿತ್ಯ 100 ಎಂಎಲ್​​ಡಿಯಷ್ಟು ನೀರು ಕೊಳವೆ ಮುಖಾಂತರ ಹರಿಸಲಾಗುತ್ತದೆ. ಆದರೆ, ಆರಂಭದಲ್ಲಿ ಸಂಸ್ಕರಿಸಿದ ನೀರು ಹರಿಸುವಾಗ ನೊರೆ ಕಂಡು ಬಂದ ಹಿನ್ನೆಲೆ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. 3ನೇ ಹಂತದಲ್ಲಿ ನೀರು ಶುದ್ಧೀಕರಿಸಿ ಹರಿಸುವಂತೆ ಒತ್ತಾಯವೂ ಕೇಳಿ ಬಂದಿತ್ತು. ಬಳಿಕ ನಿತ್ಯ ನೀರಿನ ಗುಣಮಟ್ಟ ಪರಿಶೀಲಿಸಿ, ತಿಂಗಳಿಗೊಂದು ಬಾರಿ ಜಲಮಂಡಳಿಯಿಂದ ಹೊರಗೆ ಪ್ರಯೋಗಾಲಯಗಳಲ್ಲಿ ಪರೀಕ್ಷೆ ಮಾಡಿ, ನಿರಂತರ ಪ್ಯಾರಾಮೀಟರ್ ಟೆಸ್ಟಿಂಗ್ ಪರಿಶೀಲಿಸಿಯೇ ನೀರು ಹರಿಸಲಾಗುತ್ತಿದೆ ಎಂದು ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಅಭಿಯಂತರ ಗಂಗಾಧರ್ ತಿಳಿಸಿದರು.

ಇದನ್ನೂ ಓದಿ...ಉಪಸಭಾಪತಿ ಧರ್ಮೇಗೌಡರ ಸಾವು ನೋವುಂಟು ಮಾಡಿದೆ: ಹೆಚ್​ಡಿಡಿ ಭಾವುಕ

ಸದ್ಯ 29 ಎಸ್​ಟಿಪಿಗಳು ಕೆಲಸ ಮಾಡುತ್ತಿದ್ದರೂ ಪೂರ್ಣಪ್ರಮಾಣದ ಕೊಳಚೆ ನೀರು ಸಂಸ್ಕರಣೆಯಾಗುತ್ತಿಲ್ಲ. 2,021 ಮಾರ್ಚ್-ಏಪ್ರಿಲ್ ವೇಳೆಗೆ ಪೂರ್ಣ ಪ್ರಮಾಣ ತ್ಯಾಜ್ಯ ನೀರು ಸಂಸ್ಕರಣೆಗೆ ಜಲಂಮಡಳಿ ಯೋಜನೆ ರೂಪಿಸಿದೆ. ಇನ್ನೂ ಹಲವು ಯೋಜನೆಯಡಿ ಹೊಸ ಎಸ್​ಟಿಪಿಗಳ ನಿರ್ಮಾಣ ಕಾರ್ಯನಡೆಯುತ್ತಿದೆ. ಬೆಂಗಳೂರಿನಲ್ಲಿ ಪ್ರತಿದಿನ 145 ಕೋಟಿ ಲೀಟರ್ (600 ಕ್ಯೂಸೆಕ್, ತಿಂಗಳಿಗೆ 1.5 ಟಿಎಂಸಿ) ಕಾವೇರಿ ನೀರು ಬಳಕೆಯಾಗುತ್ತಿದೆ. ಇದನ್ನು ಹೊರತುಪಡಿಸಿ ಬೋರ್​ವೆಲ್​ನಿಂದ 30 - 40 ಕೋಟಿ ಲೀಟರ್​​ಗೂ ಹೆಚ್ಚು ನೀರನ್ನು ಜನ ಬಳಸುತ್ತಿದ್ದಾರೆ. ಅದರ ಶೇ.80ರಷ್ಟು ನೀರು ಬಳಕೆಯಾಗಿ ಚರಂಡಿ ಸೇರುತ್ತಿದೆ.

850 ಎಂಎಲ್​​ಡಿ ತ್ಯಾಜ್ಯ ನೀರು ಸಂಸ್ಕರಣೆ: ನಗರದಲ್ಲಿ 29 ತ್ಯಾಜ್ಯ ನೀರು ಸಂಸ್ಕರಣಾ ಘಟಕ ಕೆಲಸ ಮಾಡುತ್ತಿದ್ದು, 1157.5 ಎಂಎಲ್​ಡಿಯಷ್ಟು ತ್ಯಾಜ್ಯ ನೀರು ಸಂಸ್ಕರಿಸುವ ಸಾಮರ್ಥ್ಯ ಇದೆ. ನಗರದಲ್ಲಿ 850 ಎಂಎಲ್​ಡಿ ತ್ಯಾಜ್ಯ ನೀರು ಸಂಸ್ಕರಿಸಲಾಗುತ್ತಿದೆ. ಕೆಲವೆಡೆ ಕಾಮಗಾರಿಗಳು, ಲಿಂಕಿಂಗ್ ಕೆಲಸಗಳು ನಡೆಯುತ್ತಿವೆ. ಮಾರ್ಚ್ ಏಪ್ರಿಲ್ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಲಿದ್ದು, ಒಟ್ಟು ಸಾಮರ್ಥ್ಯದಷ್ಟೇ ಅಂದರೆ 1,157 ಎಂಎಲ್​ಡಿ ಚರಂಡಿ ನೀರು ಸಂಸ್ಕರಣೆಯಾಗಲಿದೆ. ಇನ್ನು ಹೆಬ್ಬಾಳ ಸೇರಿದಂತೆ ನಾಲ್ಕು ಕಡೆ ಹೊಸದಾಗಿ ಸಂಸ್ಕರಣಾ ಘಟಕಗಳು ನಿರ್ಮಾಣವಾಗುತ್ತಿದ್ದು, ಅವು ಕೂಡ ಮಾರ್ಚ್​ - ಏಪ್ರಿಲ್ ವೇಳೆಗೆ 1,582.5 ಎಂಎಲ್​ಡಿಯಷ್ಟು ತ್ಯಾಜ್ಯ ನೀರು ಸಂಸ್ಕರಿಸಬಹುದು.

ಅಲ್ಲದೇ, ಜೈಕಾ ಯೋಜನೆಯಡಿ 14 ಸಣ್ಣ ಸಣ್ಣ ಎಸ್​​ಟಿಪಿಗಳ ನಿರ್ಮಾಣ ಕಾರ್ಯ ತೆಗೆದುಕೊಂಡಿದ್ದು, ಟೆಂಡರ್ ನಡೆಯುತ್ತಿದೆ. 2,023ರ ವೇಳೆಗೆ ಅಂತಿಮಗೊಳ್ಳಲಿದೆ. 124 ಎಂಎಲ್​ಡಿ ತ್ಯಾಜ್ಯ ನೀರು ಸಂಸ್ಕರಿಸುವ ಸಾಮರ್ಥ್ಯವಿದೆ. 1,750 ಎಂಎಲ್​​ಡಿ ಸಾರ್ಮರ್ಥ್ಯದ ಎಸ್​​ಟಿಪಿ ಸಿದ್ಧವಾದಂತಾಗುತ್ತಿದೆ. ಜಲಮಂಡಳಿಯಲ್ಲಿ ಮಾನವ ಬಳಕೆಯ ನೀರು ಮಾತ್ರ ಸಂಸ್ಕರಿಸಲಾಗುತ್ತಿದೆ. ಆದರೆ, ಕಾರ್ಖಾನೆ, ಕೈಗಾರಿಕೆಗಳ ಕೆಮಿಕಲ್​ಗಳನ್ನು ಟ್ರೀಟ್ ಮಾಡುವ ಎಸ್​ಟಿಪಿಗಳು ಸದ್ಯ ಇಲ್ಲ. ಪುಟ್ಟೇನಹಳ್ಳಿ, ಸಾರಕ್ಕಿ, ಹುಳಿಮಾವು, ಬೆಳ್ಳಂದೂರು ಕೆರೆಗಳಲ್ಲಿಯೂ ಜಲಮಂಡಳಿ ಎಸ್​ಟಿಪಿ ಅಳವಡಿಸಿದ್ದು, ಕಾರ್ಯನಿರ್ವಹಿಸುತ್ತಿದೆ ಎಂದರು.

Last Updated : Dec 30, 2020, 3:24 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.