ETV Bharat / city

ಮುಂದುವರಿದ ವಕ್ಫ್ ಆಸ್ತಿ ಒತ್ತುವರಿ ಗುದ್ದಾಟ: ಸಚಿವೆ ನೇತೃತ್ವದ ಸಭೆಯಲ್ಲಿ ವಕ್ಫ್ ಆಸ್ತಿಗಳ ಬಗ್ಗೆ ಅಧಿಕಾರಿಗಳಿಂದಲೇ ತಪ್ಪು ಅಂಕಿ-ಅಂಶ !? - minister Shashikala jolle on Waqf property issue

ಕಳೆದ ವಾರ ವಕ್ಫ್, ಹಜ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ವಕ್ಫ್​ಗೆ ಸೇರಿದ ಜಮೀನು, ಕಬಳಿಕೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ವಕ್ಫ್ ಆಸ್ತಿ, ಕಬಳಿಕೆ, ನೋಂದಾಯಿತ ವಕ್ಫ್ ಆಸ್ತಿ ಅಂಕಿ- ಅಂಶಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ್ದರು.‌ ಇದರ ಪ್ರತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಸಭೆಯಲ್ಲಿ ಅಧಿಕಾರಿಗಳು ನೀಡಿದ ಅಂಕಿ - ಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 32,192 ವಕ್ಫ್ ಆಸ್ತಿಗಳನ್ನು ನೋಂದಣಿ ಮಾಡಲಾಗಿದೆ.

waqf-property-encroachment-issue-officers-gave-land-details
ವಕ್ಫ್ ಆಸ್ತಿ ಒತ್ತುವರಿ
author img

By

Published : Aug 25, 2021, 5:28 PM IST

ಬೆಂಗಳೂರು: ವಕ್ಫ್ ಭೂ ಕಬಳಿಕೆ ಇದೀಗ‌ ಮತ್ತೆ ಸುದ್ದಿ ಮಾಡಿದೆ. ಕಳೆದ ವಾರ ವಕ್ಫ್ ಮತ್ತು ಹಜ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾಧ್ಯಮಗೋಷ್ಠಿ ನಡೆಸಿ ವಕ್ಫ್ ಭೂ ಕಬಳಿಕೆ ಬಗ್ಗೆ ನೀಡಿದ ಹೇಳಿಕೆ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಕಣ್ಣು ಕೆಂಪಾಗಿಸಿದೆ. ಅಷ್ಟಕ್ಕೂ ವಕ್ಫ್ ಮಂಡಳಿ ಅಧಿಕಾರಿಗಳು ವಕ್ಫ್ ಜಮೀನು ಬಗ್ಗೆ ನೀಡಿದ ಅಂಕಿ - ಅಂಶ ಏನು ಎಂಬ ವರದಿ ಇಲ್ಲಿದೆ.

ವಕ್ಫ್ ಆಸ್ತಿ ಕಬಳಿಕೆ ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ ಸುದ್ದಿ. ಕೋಟ್ಯಂತರ ರೂ. ಮೌಲ್ಯದ ವಕ್ಫ್ ಆಸ್ತಿ ಕಬಳಿಕೆ ಸದಾ ಸದ್ದು ಮಾಡುತ್ತಲೇ ಇರುತ್ತದೆ. 2012ರಲ್ಲಿ ಅಂದಿನ ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಆಯೋಗ ವಕ್ಫ್ ಆಸ್ತಿ ಕಬಳಿಕೆ ಸಂಬಂಧ ವರದಿ ಸಲ್ಲಿಸಿದ್ದರು. ಆಗ ವಕ್ಫ್ ಮಂಡಳಿಗೆ ಸೇರಿದ ಆಸ್ತಿ ಕಬಳಿಕೆಯ ಗಂಭೀರತೆ ಬಯಲಾಗಿತ್ತು.

ಆದರೆ, ಇದುವರೆಗೂ ಆ ವರದಿಗೆ ಯಾವುದೇ ತಾರ್ಕಿಕ ಅಂತ್ಯ ಸಿಕ್ಕಿಲ್ಲ. ಕಬಳಿಕೆಯಾದ ವಕ್ಫ್ ಆಸ್ತಿಯನ್ನು ಸ್ವಾಧೀನ ಪಡಿಸುವಲ್ಲೂ ಇದುವರೆಗೂ ಯಾವ ಸರ್ಕಾರಗಳಿಗೂ ಸಾಧ್ಯವಾಗಿಲ್ಲ. ಈ‌ ಮಧ್ಯೆ ನೂತನ ಸಚಿವೆ ಜೊಲ್ಲೆ ವಕ್ಫ್ ಇಲಾಖೆ ಸಂಬಂಧ ಸಭೆ ನಡೆಸಿ, ಭೂ ಕಬಳಿಕೆ ಸೇರಿ ಹಲವು ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ಸಚಿವೆ ನೀಡಿದ ಹೇಳಿಕೆ ಇದೀಗ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಕಣ್ಣು ಕೆಂಪಾಗಿಸಿದೆ.

ಸಭೆಯಲ್ಲಿ ವಕ್ಫ್ ಅಧಿಕಾರಿಗಳು ನೀಡಿದ ಅಂಕಿ - ಅಂಶ ಏನು?:

ಕಳೆದ ವಾರ ವಕ್ಫ್, ಹಜ್ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದರು. ಸಭೆಯಲ್ಲಿ ವಕ್ಫ್​ಗೆ ಸೇರಿದ ಜಮೀನು, ಕಬಳಿಕೆ ಬಗ್ಗೆ ಪರಿಶೀಲನೆ ನಡೆಸಿದ್ದರು. ಅಧಿಕಾರಿಗಳು ವಕ್ಫ್ ಆಸ್ತಿ, ಕಬಳಿಕೆ, ನೋಂದಾಯಿತ ವಕ್ಫ್ ಆಸ್ತಿ ಅಂಕಿ - ಅಂಶಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ್ದರು.‌ ಇದರ ಪ್ರತಿ ಈಟಿವಿ ಭಾರತಕ್ಕೆ ಲಭ್ಯವಾಗಿದೆ. ಸಭೆಯಲ್ಲಿ ಅಧಿಕಾರಿಗಳು ನೀಡಿದ ಅಂಕಿ - ಅಂಶದ ಪ್ರಕಾರ ರಾಜ್ಯದಲ್ಲಿ ಒಟ್ಟು 32,192 ವಕ್ಫ್ ಆಸ್ತಿಗಳನ್ನು ನೋಂದಣಿ ಮಾಡಲಾಗಿದೆ.

1964-1975ರಲ್ಲಿ ನಡೆದ ಮೊದಲ ಸಮೀಕ್ಷೆಯಲ್ಲಿ 1,02,120 ಎಕರೆಯ ಒಟ್ಟು 32,847 ಆಸ್ತಿಗಳ ಸಂಬಂಧ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು ಏಪ್ರಿಲ್ 2019ರವರೆಗೆ ನಡೆದ ಎರಡನೇ ಸಮೀಕ್ಷೆ ವೇಳೆ 3,735 ಎಕರೆಯ 12,054 ಆಸ್ತಿಗಳನ್ನು ಗುರುತಿಸಲಾಗಿದೆ. ಎರಡನೇ ಸಮೀಕ್ಷೆ ಬಳಿಕ ವಕ್ಫ್ ನಿಯಮದಡಿ 2,317 ಆಸ್ತಿಗಳನ್ನು ನೋಂದಾಯಿಸಲಾಗಿದೆ. ಈ ಆಸ್ತಿಗಳನ್ನು ಮುಂದೆ‌ ನಡೆಯುವ ಸಮೀಕ್ಷೆ ವೇಳೆ ಅಧಿಸೂಚಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಕ್ಫ್ ಮಂಡಳಿ ಸ್ವಾಧೀನದಲ್ಲಿರುವ ಆಸ್ತಿ ವಿವರ:

ರಾಜ್ಯ 1,13,692 ಎಕರೆಯ ಒಟ್ಟು 47,218 ವಕ್ಫ್ ಆಸ್ತಿಗಳನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪೈಕಿ 2,123 ಎಕರೆಯ 325 ಆಸ್ತಿಗಳನ್ನು ಸಾರ್ವಜನಿಕ ಉದ್ದೇಶಕ್ಕಾಗಿ ಸ್ವಾಧೀನಪಡಿಸಲಾಗಿದೆ ಎಂದು ಅಂಕಿ - ಅಂಶ ನೀಡಲಾಗಿದೆ. 72,940 ಎಕರೆಯ 5708 ವಕ್ಫ್ ಆಸ್ತಿಗಳು ಇನಾಂ ಹಾಗೂ ಭೂ ಸುಧಾರಣೆ ಕಾನೂನಿನಿಂದ ಪರಿಣಾಮಕ್ಕೊಳಗಾಗಿದೆ. 38,629 ಎಕರೆಗಳ 41,168 ವಕ್ಫ್ ಆಸ್ತಿಗಳು ವಕ್ಫ್ ಸಂಸ್ಥೆಗಳ ವಶದಲ್ಲಿವೆ ಎಂದು ಅಧಿಕಾರಿಗಳು ಅಂಕಿ - ಅಂಶ ನೀಡಿದ್ದಾರೆ.

ಕಬಳಿಕೆಯಾದ ವಕ್ಫ್ ಆಸ್ತಿ ವಿವರ:

ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟು 8,480 ಎಕರೆಯ 1,189 ವಕ್ಫ್ ಆಸ್ತಿಗಳು ಕಬಳಿಕೆಯಾಗಿದೆ. ಈ ಕಬಳಿಕೆಯಾದ ಆಸ್ತಿಗಳ ಸಂಬಂಧ ವಿವಿಧ ಕೋರ್ಟ್​ಗಳಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ವಕ್ಫ್ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.

ಈ‌ ಪೈಕಿ 4 ವಕ್ಫ್ ಆಸ್ತಿ ಕಬಳಿಕೆ ಪ್ರಕರಣ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. 459 ಭೂ ಕಬಳಿಕೆ ಪ್ರಕರಣಗಳು ಹೈಕೋರ್ಟ್​ನಲ್ಲಿ ವಿಚಾರಣೆಯಲ್ಲಿದೆ. ವಕ್ಫ್ ನ್ಯಾಯಾಧಿಕರಣದಲ್ಲಿ 420 ವಕ್ಫ್ ಕಬಳಿಕೆಯಾದ ಆಸ್ತಿಗಳ ಪ್ರಕರಣ ವಿಚಾರಣೆಯಲ್ಲಿದೆ. ಸಿವಿಲ್ ಕೋರ್ಟಿನಲ್ಲಿ 129 ಆಸ್ತಿಗಳ ವಿಚಾರಣೆ, 165 ಆಸ್ತಿಗಳ ಪ್ರಕರಣ ಕಂದಾಯ ಅಧಿಕಾರಿಗಳ ವಿಚಾರಣೆಯಲ್ಲಿದ್ದರೆ, ಭೂ ಕಬಳಿಕೆದಾರರ ವಿಶೇಷ ನ್ಯಾಯಾಲಯದಲ್ಲಿ 12 ಆಸ್ತಿ ಕಬಳಿಕೆ ಪ್ರಕರಣಗಳಿವೆ ಎಂದು ಅಂಕಿ - ಅಂಶ ನೀಡಿದ್ದಾರೆ.

ಅಂಕಿ-ಅಂಶದ ಬಗ್ಗೆ ಅನ್ವರ್ ಮಾಣಿಪ್ಪಾಡಿ ಗರಂ:

ಇತ್ತ ಸಚಿವೆ ಜೊಲ್ಲೆಗೆ ‌‌ನೀಡಿದ ಅಂಕಿ - ಅಂಶದ ಬಗ್ಗೆ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಬಗ್ಗೆ ವಕ್ಫ್ ಮಂಡಳಿ ಅಧಿಕಾರಿಗಳು ಸಂಪೂರ್ಣವಾಗಿ ತಪ್ಪು ಅಂಕಿ - ಅಂಶ ನೀಡಿದ್ದಾರೆ. ಸಚಿವೆ ಜೊಲ್ಲೆ ಈ ಬಗ್ಗೆ ತಪ್ಪು ಹೇಳಿಕಯನ್ನು ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಾಣಿಪ್ಪಾಡಿ 2012ರಲ್ಲಿ ಸಲ್ಲಿಸಿದ ವರದಿಯಂತೆ ಸುಮಾರು 54,000 ಎಕರೆ ವಕ್ಫ್ ಆಸ್ತಿಗಳನ್ನು ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾಗಿದೆ. ಸುಮಾರು 27,000 ಎಕರೆ ಜಮೀನನ್ನು ಇನ್ನೂ ನೋಂದಾಯಿಸಲಾಗಿಲ್ಲ ಎಂದು ವಿವರಿಸಿದ್ದಾರೆ. ಸುಮಾರು 29,000 ಎಕರೆ ವಕ್ಫ್​ಗೆ ಸೇರಿದ ಜಮೀನನ್ನು ಒತ್ತುವರಿ ಮಾಡಲಾಗಿದ್ದು, ಸುಮಾರು 2.30 ಲಕ್ಷ ಕೋಟಿ ರೂ.‌ಮೌಲ್ಯದ ವಕ್ಫ್ ಆಸ್ತಿ ಒತ್ತುವರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ವಕ್ಫ್ ಮಂಡಳಿ ಅಧಿಕಾರಿಗಳು ಕಾಂಗ್ರೆಸ್ ಹಾಗೂ ಜೆಡಿಎಸ್ ನ ಪ್ರಭಾವಿಗಳೊಂದಿಗೆ ಕೈಜೋಡಿಸಿ ವಾಸ್ತವ ಅಂಕಿ - ಅಂಶವನ್ನು ಮರೆ ಮಾಚುತ್ತಿದ್ದಾರೆ. ತಪ್ಪು ಲೆಕ್ಕವನ್ನು ನೀಡಿ ಸಚಿವೆಯ ದಾರಿತಪ್ಪಿಸುತ್ತಿದ್ದಾರೆ. ಭೂ ಒತ್ತುವರಿದಾರರ ಪರವಾಗಿ ವಕ್ಫ್ ಬೋರ್ಡ್ ಕೆಲಸ‌ ಮಾಡುತ್ತಿದೆ. ಇನ್ನೂ ಸಾವಿರಾರು ಆಸ್ತಿಗಳನ್ನು ವಕ್ಫ್ ಮಂಡಳಿಯಲ್ಲಿ ನೋಂದಾವಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.