ಬೆಂಗಳೂರು : ಚಾಮರಾಜಪೇಟೆ ಈದ್ಗಾ ಮೈದಾನ ತಮ್ಮದೆಂದು ವಾದಿಸಿ ವಕ್ಫ್ ಬೋರ್ಡ್ ಸಲ್ಲಿಸಿದ್ದ ಅರ್ಜಿಯನ್ನು ಬಿಬಿಎಂಪಿ ವಜಾ ಮಾಡಿದೆ. ಈ ಮೂಲಕ ಈದ್ಗಾ ಮೈದಾನ ಕರ್ನಾಟಕ ರಾಜ್ಯ ಕಂದಾಯ ಇಲಾಖೆಯ ಜಾಗ ಎಂದು ಪಶ್ಚಿಮ ವಲಯದ ಜಂಟಿ ಆಯುಕ್ತ ಶ್ರೀನಿವಾಸ್ ಆದೇಶ ಹೊರಡಿಸಿದ್ದಾರೆ.
ಚಾಮರಾಜಪೇಟೆ ಆಟದ ಮೈದಾನವನ್ನ ವಕ್ಫ್ ಬೋರ್ಡ್ ಹೆಸರಿಗೆ ಖಾತೆ ಮಾಡುವಂತೆ ಸಲ್ಲಿಸಿದ್ದ ಅರ್ಜಿ ವಜಾ ಮಾಡಲಾಗಿದೆ. ಬಿಬಿಎಂಪಿ ದಾಖಲೆಗಳಲ್ಲಿ ಈ ಆಸ್ತಿಯನ್ನು ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ ಆಸ್ತಿಯೆಂದು ನಮೂದಿಸಲು ಸೂಚಿಸಲಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಬಿಬಿಎಂಪಿ ವಕ್ಫ್ ಬೋರ್ಡ್ ಮುಂದಕ್ಕೆ ಮೈದಾನದ ದಾಖಲೆ ಇಚ್ಛಿಸಿದಲ್ಲಿ ನೇರವಾಗಿ ರಾಜ್ಯ ಕಂದಾಯ ಇಲಾಖೆಯ ಜೊತೆಗೆ ವ್ಯವಹರಿಸಲು ಹಾಗೂ ದಾಖಲೆ ಸಲ್ಲಿಸಲು ಈ ಆದೇಶ ಅಡ್ಡಿಯಾಗುವುದಿಲ್ಲವೆಂದೂ ಆದೇಶದಲ್ಲಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ವೆಬ್ಸೈಟ್ನಿಂದ ಹಿಂದಿ ಬ್ಯಾನರ್ ತೆಗೆದು ಹಾಕಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ