ಬೆಂಗಳೂರು : ನಗರದಲ್ಲಿ ಕಠಿಣ ಲಾಕ್ಡೌನ್ ಜಾರಿಯಾಗಿದ್ದರೂ ಸಹ ಅಲ್ಲಲ್ಲಿ ನಿಯಮ ಉಲ್ಲಂಘಟನೆಯಂತಹ ಘಟನೆ ನಡೆದಿವೆ. ಬೀದಿಗಿಳಿದ ವಾಹನ ಸವಾರರಿಗೆ ಪೊಲೀಸರು ಲಾಠಿ ರುಚಿ ತೋರಿಸಿ ವಾಹನಗಳನ್ನು ಸೀಜ್ ಮಾಡಿದ್ದಾರೆ.
ಡಿಸಿಪಿ ಪ್ರಮಾಣ ವಚನ ಬೋಧನೆ : ದಕ್ಷಿಣ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕೃಪಾನಿಧಿ ಸರ್ಕಲ್‌ನಲ್ಲಿ ಲಾಕ್ಡೌ್ನ್ ನಿಯಮ ಉಲ್ಲಂಘನೆ ಮಾಡಿದವರಿಗೆ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ಇನ್ನು ಮುಂದೆ ಕೋವಿಡ್ ನಿಯಮ ಉಲ್ಲಂಘನೆ ಮಾಡುವುದಿಲ್ಲ ಎಂದು ಪ್ರಮಾಣ ವಚನ ಬೋಧಿಸಿದರು.
ಆಟೋ ಚಾಲಕರಿಗೆ ಬಸ್ಕಿ ಶಿಕ್ಷೆ : ಅನಗತ್ಯವಾಗಿ ಓಡಾಡುತ್ತಿದ್ದ ಆಟೋ ಚಾಲಕರಿಗೆ ಮಾರ್ಕೆಟ್ ಪೊಲೀಸರು ಬಸ್ಕಿ ಹೊಡಿಸಿದರು. ಈ ಸಂದರ್ಭದಲ್ಲಿ ನಾಳೆಯಿಂದ ಆಟೋ ಹೊರಗೆ ತೆಗೆಯಲ್ಲ ಸರ್ ಎಂದು ಕಿವಿ ಹಿಡಿದು ಆಟೋ ಚಾಲಕರು ಪೊಲೀಸರಲ್ಲಿ ಮನವಿ ಮಾಡಿದರು. ನಂತರ ಪೊಲೀಸರು ಆಟೋಗಳನ್ನು ಬಿಟ್ಟು ಕಳುಹಿಸಿದ್ದಾರೆ.
ನಕಲಿ ಪತ್ರಕರ್ತನ ವಾಹನ ಸೀಜ್ : ವಿಕ್ಟೋರಿಯಾ ಮಾರ್ಚರಿ ಬಳಿ ವ್ಯಕ್ತಿಯೊಬ್ಬ ಪತ್ರಕರ್ತ ಎಂದು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಹೋಗುತ್ತಿದ್ದ. ವಿಚಾರಿಸಿದಾಗ ಅವನು ನಕಲಿ ಪತ್ರಕರ್ತ ಎಂದು ತಿಳಿದು ಬಂದಿತ್ತು. ಸದ್ಯ ಕಮೀಷನ್ ವಾಹನ ಸೀಜ್ ಮಾಡಲು ಹೇಳಿದ್ದಾರೆ.
ಪೊಲೀಸ್ ಜೊತೆ ವಾಗ್ದಾದಕ್ಕಿಳಿದ ಬೈಕ್ ಸವಾರ : ವಾಹನ ಸಂಚಾರಕ್ಕೆ ಅವಕಾಶ ಇಲ್ಲ ಎಂದರು. ವ್ಯಕ್ತಿಯೊಬ್ಬ ಬೈಕ್ ಸವಾರಿ ಮಾಡಿಕೊಂಡು ಬಂದಿದ್ದ. ಅವನನ್ನು ತಡೆದ ಪೊಲೀಸರು ಪ್ರಶ್ನಿಸಿದಾಗ ಯುವಕ ವಾಗ್ವಾದಕ್ಕಿಳಿದ್ದಾನೆ. ಸದ್ಯ ಬೈಕ್ ಸೀಜ್ ಮಾಡಿರುವ ಪೊಲೀಸರು ಯುವಕನನ್ನು ವಶಕ್ಕೆ ಪಡೆದಿದ್ದಾರೆ.