ETV Bharat / city

ಮಕ್ಕಳಿಗೆ ₹50 ಲಕ್ಷ, ಶಿಕ್ಷಕರಿಗೆ 25 ಲಕ್ಷ ರೂ. ಜೀವ ವಿಮೆ ಭದ್ರತೆಯಿಟ್ಟು ಪರೀಕ್ಷೆ ನಡೆಸಿ: ವಾಟಾಳ್​ ನಾಗರಾಜ್​​ - ಜೂನ್​​ 25ರಂದು ಎಸ್​​ಎಸ್​​ಎಲ್​ಸಿ ಪರೀಕ್ಷೆ

ಎಸ್​​​ಎಸ್​ಎಲ್​ಸಿ ಮತ್ತು ಪದವಿ ಪರೀಕ್ಷೆ ರದ್ದುಪಡಿಸುವಂತೆ ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು.

Vatal Nagaraj protest against state government
ವಾಟಾಳ್​ ನಾಗರಾಜ್​ ಪ್ರತಿಭಟನೆ
author img

By

Published : Jun 24, 2020, 2:22 PM IST

ಬೆಂಗಳೂರು: ಕೊರೊನಾ ಅರ್ಭಟದ ನಡುವೆ ಎಸ್​​​ಎಸ್​ಎಲ್​ಸಿ ಮತ್ತು ಪದವಿ ಪರೀಕ್ಷೆ ರದ್ದುಪಡಿಸಿ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡಬೇಕು ಎಂದು ಆಗ್ರಹಿಸಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ತೆಲಂಗಾಣ, ಆಂಧ್ರಪ್ರದೇಶ, ಹರಿಯಾಣ, ತಮಿಳುನಾಡು, ಪುದುಚೇರಿ ಮತ್ತು ದೆಹಲಿಯಲ್ಲಿ ಎಸ್​​​ಎಸ್​​​ಎಲ್​​​ಸಿ ಪರೀಕ್ಷೆಗಳನ್ನು ರದ್ದುಗೊಳಿಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ. ನಮ್ಮ ರಾಜ್ಯದಲ್ಲೂ ಅದೇ ರೀತಿ ನಿರ್ಧಾರ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆ ನಡೆಸಿದ ವಾಟಾಳ್​ ನಾಗರಾಜ್​​

ದೇಶದ 12 ರಾಜ್ಯಗಳು ಪರೀಕ್ಷೆಗಳಿಲ್ಲದೆ ಐಐಟಿಯಂತ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಡಿಗ್ರಿ ವಿದ್ಯಾರ್ಥಿಗಳನ್ನು ಪಾಸಿ ಮಾಡಿವೆ. ಕೊರೊನಾ ಸಂದರ್ಭದಲ್ಲಿ ಮಕ್ಕಳ ಜೀವ ಮುಖ್ಯ. ಒಂದು ವೇಳೆ ಪರೀಕ್ಷೆ ನಡೆಸಿದರೆ ಶಿಕ್ಷಣ ಸಚಿವರು ಮಕ್ಕಳ ಜೀವ ಭದ್ರತೆಗೆ ₹ 50 ಲಕ್ಷ ಹಾಗೂ ಶಿಕ್ಷಕರ ಜೀವ ಭದ್ರತೆಗೆ ₹ 25 ಲಕ್ಷ ರೂ. ವಿಮೆ ಮೀಸಲಿಟ್ಟು ಪರೀಕ್ಷೆಗಳನ್ನು ನಡೆಸಬೇಕು ಎಂದು ಆಗ್ರಹಿಸಿದರು.

ಸರ್ಕಾರದ ಆದೇಶವಿದ್ದರೂ ಖಾಸಗಿ ಶಿಕ್ಷಣ ಸಂಸ್ಥೆಗಳು ಶುಲ್ಕ ವಸೂಲಿ ಮಾಡಿ ದರೋಡೆ ನಡೆಸುತ್ತಿವೆ. ಆದ್ದರಿಂದ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಾಟಾಳ್​ ಹೇಳಿದ್ರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.