ಬೆಂಗಳೂರು: ಹೆಡಗೇವಾರ್ ಕುರಿತಾದ ವಿಚಾರಗಳು ಇಪ್ಪತೈದು ವರ್ಷದ ಹಿಂದೆಯೇ ಪಠ್ಯದಲ್ಲಿ ಸೇರಿಸಬೇಕಿತ್ತು. ಈ ತಪ್ಪನ್ನು ನಮ್ಮ ಸರ್ಕಾರ ಸರಿ ಮಾಡಿದೆ. ಯಾರಿಗೋ ಕಹಿಯಾಗುತ್ತದೆ ಎಂಬ ಕಾರಣಕ್ಕೆ ಹೆಡಗೇವಾರ್ ವಿಚಾರ ಕೈ ಬಿಡಲು ಸಾಧ್ಯವಿಲ್ಲ. ರಾಷ್ಟ್ರೀಯ ವಾದಿಗಳ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡುವ ನಮ್ಮ ಬದ್ಧತೆ ಭವಿಷ್ಯದಲ್ಲೂ ಮುಂದುವರಿಯುತ್ತದೆ ಎಂದು ಸಚಿವ ಸುನಿಲ್ ಕುಮಾರ್ ಟ್ವೀಟ್ ಮಾಡಿ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
-
ಹೆಡಗೇವಾರ್ ಕುರಿತಾದ ವಿಚಾರಗಳು ಇಪ್ಪತೈದು ವರ್ಷದ ಹಿಂದೆಯೇ ಪಠ್ಯದಲ್ಲಿ ಸೇರಿಸಬೇಕಿತ್ತು. ಈ ತಪ್ಪನ್ನು ನಮ್ಮ ಸರಕಾರ ಸರಿ ಮಾಡಿದೆ. ಯಾರಿಗೋ ಕಹಿಯಾಗುತ್ತದೆ ಎಂಬ ಕಾರಣಕ್ಕೆ ಹೆಡ್ಗೆವಾರ್ ವಿಚಾರ ಕೈ ಬಿಡಲು ಸಾಧ್ಯವಿಲ್ಲ. ರಾಷ್ಟ್ರೀಯ ವಾದಿಗಳ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡುವ ನಮ್ಮ ಬದ್ದತೆ ಭವಿಷ್ಯದಲ್ಲೂ ಮುಂದುವರಿಯುತ್ತದೆ.
— Sunil Kumar Karkala (@karkalasunil) May 28, 2022 " class="align-text-top noRightClick twitterSection" data="
">ಹೆಡಗೇವಾರ್ ಕುರಿತಾದ ವಿಚಾರಗಳು ಇಪ್ಪತೈದು ವರ್ಷದ ಹಿಂದೆಯೇ ಪಠ್ಯದಲ್ಲಿ ಸೇರಿಸಬೇಕಿತ್ತು. ಈ ತಪ್ಪನ್ನು ನಮ್ಮ ಸರಕಾರ ಸರಿ ಮಾಡಿದೆ. ಯಾರಿಗೋ ಕಹಿಯಾಗುತ್ತದೆ ಎಂಬ ಕಾರಣಕ್ಕೆ ಹೆಡ್ಗೆವಾರ್ ವಿಚಾರ ಕೈ ಬಿಡಲು ಸಾಧ್ಯವಿಲ್ಲ. ರಾಷ್ಟ್ರೀಯ ವಾದಿಗಳ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡುವ ನಮ್ಮ ಬದ್ದತೆ ಭವಿಷ್ಯದಲ್ಲೂ ಮುಂದುವರಿಯುತ್ತದೆ.
— Sunil Kumar Karkala (@karkalasunil) May 28, 2022ಹೆಡಗೇವಾರ್ ಕುರಿತಾದ ವಿಚಾರಗಳು ಇಪ್ಪತೈದು ವರ್ಷದ ಹಿಂದೆಯೇ ಪಠ್ಯದಲ್ಲಿ ಸೇರಿಸಬೇಕಿತ್ತು. ಈ ತಪ್ಪನ್ನು ನಮ್ಮ ಸರಕಾರ ಸರಿ ಮಾಡಿದೆ. ಯಾರಿಗೋ ಕಹಿಯಾಗುತ್ತದೆ ಎಂಬ ಕಾರಣಕ್ಕೆ ಹೆಡ್ಗೆವಾರ್ ವಿಚಾರ ಕೈ ಬಿಡಲು ಸಾಧ್ಯವಿಲ್ಲ. ರಾಷ್ಟ್ರೀಯ ವಾದಿಗಳ ವಿಚಾರಧಾರೆಗಳನ್ನು ಪ್ರತಿಪಾದನೆ ಮಾಡುವ ನಮ್ಮ ಬದ್ದತೆ ಭವಿಷ್ಯದಲ್ಲೂ ಮುಂದುವರಿಯುತ್ತದೆ.
— Sunil Kumar Karkala (@karkalasunil) May 28, 2022
ಸಿದ್ದರಾಮಯ್ಯ ಅವರು ಬಿಜೆಪಿ ಆರ್ಎಸ್ಎಸ್ ನಾಯಕರನ್ನು ಹಿಂದೂ ರಕ್ಷಕರಂತೆ ಬಿಂಬಿಸುತ್ತಿದೆ ಎಂದು ಮಾಡಿದ್ದ ಟ್ವೀಟ್ಗೆ, ಸಂಘದ ಶಾಖೆಗಳಲ್ಲಿ ನಮಗೆ ಕಲಿಸಿರುವ ಪ್ರಕಾರ ದೇಶ ವನ್ನು ಪ್ರೀತಿಸಬೇಕು ದೇಶವನ್ನು ಒಡೆಯುವ, ಧರ್ಮ ಒಡೆಯುವ ಕೆಲಸ ಮಾಡಬಾರದು ಹಾಗೂ ಅಂತಹ ವಿಘಟನಾ ಶಕ್ತಿಗಳನ್ನು ವಿರೋಧಿಸಬೇಕು, ಗೋ ಪೂಜೆ ಮಾಡಬೇಕು. ಎಲ್ಲ ಪೂಜಾ ಪದ್ಧತಿಗಳನ್ನು ಗೌರವದಿಂದ ಕಾಣಬೇಕು, ವೋಟಿನ ರಾಜಕಾರಣ ಮಾಡಬಾರದು ಹಾಗೂ ಸಮಾಜ ಕಟ್ಟುವುದಕ್ಕಾಗಿ ರಾಜಕಾರಣ ಉಪಕರಣ ಮಾತ್ರ ಎನ್ನುವುದು ಎಂದು ಸರಣಿ ಟ್ವೀಟ್ನಲ್ಲಿ ಪ್ರತಿಕ್ರಿಯಿಸಿದ್ದಾರೆ.
ನಿಮ್ಮಿಂದ RSS ಪಾಠ ಕಲಿಯಬೇಕೆ?: ಇದೇ ವೇಳೆ, ಸಚಿವ ಅಶ್ವತ್ಥ್ ನಾರಾಯಣ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದ್ದು, ನಿನ್ನಿಂದ ಆರ್ ಎಸ್ಎಸ್ ಪಾಠ ಕಲಿಯಬೇಕೇ ಎಂದು ಪ್ರಶ್ನಿಸಿದ್ದಾರೆ.
ಸಿದ್ದರಾಮಯ್ಯ ಅವರೇ, ಸ್ವಾಮಿ ವಿವೇಕಾನಂದರು, ಕನಕದಾಸರು, ನಾರಾಯಣ ಗುರುಗಳ ಜತೆ ಹೋಲಿಸಿಕೊಂಡು ದೊಡ್ಡವರಾಗುವ ಪ್ರಯತ್ನದ ಸಣ್ಣ ಬುದ್ಧಿ ಬಿಡಿ. ನಾಮ ಹಾಕಿದವರ ಕಂಡರೆ ಭಯ ಎನ್ನುತ್ತೀರಿ, ಅವಕಾಶ ಸಿಕ್ಕಾಗಲೆಲ್ಲ ಟೋಪಿ ಹಾಕಿಕೊಂಡು ಒಂದು ಸಮುದಾಯದ ಬ್ರ್ಯಾಂಡ್ ಅಂಬಾಸಿಡರ್‌ನಂತೆ ವರ್ತಿಸುತ್ತೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಶುರುವಾಗದ ಕೆಎಎಸ್ ಪರೀಕ್ಷೆ ಮೌಲ್ಯಮಾಪನ.. ಅಭ್ಯರ್ಥಿಗಳ ಪರ ನಿಂತ ಸುರೇಶ್ ಕುಮಾರ್