ಬೆಂಗಳೂರು: ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗ ಮುಖ್ಯ. ಮಕ್ಕಳು ಮತ್ತು ಯುವ ಜನಾಂಗ ಆನಾರೋಗ್ಯ ಪೀಡಿತರಾಗುತ್ತಿರುವುದು ಶೋಚನಿಯ ಸಂಗತಿ. ರೋಗ ಮುಕ್ತರಾಗಲು, ಆರೋಗ್ಯವಂತ ಜೀವನ ಸಾಗಿಸಲು ಪ್ರತಿದಿನ ಎಲ್ಲರೂ ಯೋಗ ಮಾಡಬೇಕು. ಯೋಗಕ್ಕೆ ವಿಶ್ವಮಾನ್ಯತೆ ತಂದುಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಆಯೋಜಿಸಲಾಗಿತ್ತು. ವಸತಿ ಸಚಿವ ವಿ. ಸೋಮಣ್ಣ, ನಟಿ ಪ್ರಿಯಾಂಕ ಉಪೇಂದ್ರ, ವಿ.ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜ ಸೋಮಣ್ಣ ಅಂತಾರಾಷ್ಟ್ರೀಯ ಯೋಗಪಟು ಡಾ. ಭಾಗಿರಥಿ ಕನ್ನಡತಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, 8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನ ಹಮ್ಮಿಕೊಳ್ಳಲಾಗಿದೆ. ಸುಖ, ಶಾಂತಿ ನೆಮ್ಮದಿಯ ಜೀವನಕ್ಕೆ ಯೋಗ ಮುಖ್ಯ ಎಂದರು. ಹೀಗಾಗಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಪ್ರತಿ ವಾರ್ಡ್ನಲ್ಲಿ ಯೋಗ ಕೇಂದ್ರ ಆರಂಭಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.
ನಟಿ ಪ್ರಿಯಾಂಕ ಉಪೇಂದ್ರಗೆ ಸನ್ಮಾನ: ಈ ಸಂದರ್ಭದಲ್ಲಿ ನಟಿ ಪ್ರಿಯಾಂಕ ಉಪೇಂದ್ರ ಮತ್ತು ಅಂತಾರಾಷ್ಟ್ರೀಯ ಯೋಗಪಟು ಭಾಗಿರಥಿ ಕನ್ನಡತಿ ಅವರಿಗೆ ವಿ.ಸೋಮಣ್ಣ ಪ್ರತಿಷ್ಠಾನ ವತಿಯಿಂದ ಸನ್ಮಾನಿಸಲಾಯಿತು.
ಇದನ್ನೂ ಓದಿ: ಕೋವಿಡ್ ವೇಳೆ ಆಕ್ಸಿಜನ್ ಕೊರತೆಗೆ ಕಾಂಗ್ರೆಸ್ ಕಾರಣವೇ ಹೊರತು ಮೋದಿಯಲ್ಲ: ಕಟೀಲ್