ಬೆಂಗಳೂರು: ರಾಜ್ಯದ ಐಟಿ-ಬಿಟಿ, ನವೋದ್ಯಮ ಮತ್ತು ಸೆಮಿಕಂಡಕ್ಟರ್ ವಲಯಗಳ ಪ್ರಮುಖ ಉದ್ಯಮಿಗಳೊಂದಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಸಂವಾದ ನಡೆಸಿದರು. ಕಾರ್ಯಕ್ರಮದಲ್ಲಿ ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಉಪಸ್ಥಿತರಿದ್ದರು.
ನಗರದ ಖಾಸಗಿ ಹೋಟೆಲ್ನಲ್ಲಿ ಸೋಮವಾರ ನಡೆದ ಈ ಕಾರ್ಯಕ್ರಮದಲ್ಲಿ ವಿಪ್ರೋ, ಇನ್ಫೋಸಿಸ್, ಮೈಂಡ್ ಟ್ರೀ ಸೇರಿದಂತೆ ಹತ್ತಾರು ಪ್ರಮುಖ ಕಂಪನಿಗಳ ಸಂಸ್ಥಾಪಕರು, ಮುಖ್ಯಸ್ಥರು, ಪ್ರತಿನಿಧಿಗಳು ಭಾಗವಹಿಸಿದ್ದರು. ಈ ಗೋಷ್ಠಿಯಲ್ಲಿ ಮುಖ್ಯವಾಗಿ, ರಾಜ್ಯದ ಈ ನಾಲ್ಕು ಉದ್ಯಮ ವಲಯಗಳ ಮುಂದಿನ ಹಂತದ ಬೆಳವಣಿಗೆ ಮತ್ತು ರಫ್ತು ವಹಿವಾಟು ಹೆಚ್ಚಳಕ್ಕೆ ಕೇಂದ್ರ ಸರಕಾರ ತೆಗೆದುಕೊಳ್ಳಬೇಕಾದ ಉಪಕ್ರಮಗಳು ಹೇಗಿರಬೇಕು ಎನ್ನುವುದನ್ನು ನಿರ್ಮಲಾ ಉದ್ಯಮಿಗಳಿಂದ ತಿಳಿದು ಕೊಂಡರು.
ಓದಿ: ವಾಹನ ಸವಾರರೇ ಎಚ್ಚರ: ಟ್ರಾಫಿಕ್ ಪೊಲೀಸರಿಗೆ ಬಂದಿದೆ ಬಾಡಿವೋರ್ನ್ ಕ್ಯಾಮರಾ
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿ ನೆಲೆಯೂರಿರುವ ಸ್ಟಾರ್ಟ್ ಅಪ್ ವಾತಾವರಣ ಅತ್ಯುತ್ತಮವಾಗಿದ್ದು, ಉಳಿದ ರಾಜ್ಯಗಳಿಗೆ ಸ್ಪೂರ್ತಿದಾಯಕವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಉದ್ಯಮಿಗಳು, ರಾಜ್ಯದಲ್ಲಿನ ಮಾಹಿತಿ ತಂತ್ರಜ್ಞಾನ ವಲಯದಿಂದ ರಫ್ತು ಪ್ರಮಾಣವು ಮತ್ತಷ್ಟು ಹೆಚ್ಚಳಗೊಳ್ಳಲು ಹಾಯ್ದುಗೊಳ್ಳಬೇಕಾದ ಕ್ರಮಗಳೇನು ಎನ್ನುವುದರ ಬಗ್ಗೆ ನಿರ್ಮಲಾ ಗಮನಕ್ಕೆ ಕೆಲವು ಸಂಗತಿಗಳನ್ನು ತಂದರು. ಜತೆಗೆ, ತೆರಿಗೆ ವಿಧಾನದ ಬಗ್ಗೆಯೂ ಮುಕ್ತವಾಗಿ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಂವಾದದಲ್ಲಿ ವಿಪ್ರೋ ಕಂಪನಿಯ ರಿಷಭ್ ಪ್ರೇಮ್ಜಿ, ಇನ್ಫೋಸಿಸ್ ಕಂಪನಿಯ ನಿರಂಜನ್ ರಾಯ್, ಮೇಳಾ ವೆಂಚರ್ಸ್ ಎನ್.ಕೃಷ್ಣಕುಮಾರ್, ಮೈಂಡ್ ಟ್ರೀ ಸಂಸ್ಥೆಯ ದೇವಶಿಶ್ ಚಟರ್ಜಿ, ಎಚ್ ಜಿ ಎಸ್ ಸೊಲ್ಯೂಷನ್ಸ್ ನ ಪಾರ್ಥ ಡೇ ಸರ್ಕಾರ್, ಕ್ವೆಸ್ಟ್ ಗ್ಲೋಬಲ್ ಸೊಲ್ಯೂಷನ್ಸ್ ನ ಡಾ.ಅಜಯ್ ಪ್ರಭು, ಬಾಶ್ ಸಾಫ್ಟ್ವೇರ್ ಸೊಲ್ಯೂಷನ್ಸ್ ನ ದತ್ತಾತ್ರಿ ಸಾಲಗಾಮೆ, ನಾಸ್ಕಾಂನ ಕೆ.ಎಸ್. ವಿಶ್ವನಾಥನ್ ಮತ್ತು ಎಸ್.ನಾಗೇಶ್ ಭಾಗವಹಿಸಿದ್ದರು.
ಓದಿ: ಪುಟ್ಟೀರಮ್ಮನ ಸೊಪ್ಪಿನ ಜ್ಞಾನ: 60ಕ್ಕೂ ಹೆಚ್ಚು ಬೆರಕೆ ಸೊಪ್ಪು ಗುರುತಿಸುವ ದೇಸಿ ತಜ್ಞೆ!
ಐಇಎಸ್ಎ ವತಿಯಿಂದ ರಾಜೀವ್ ಕುಶೂ, ವಿವೇಕ್ ತ್ಯಾಗಿ, ಕೆ.ಕೃಷ್ಣಮೂರ್ತಿ, ಮೆಂಟರ್ ಗ್ರಾಫಿಕ್ಸ್ ಕಂಪನಿಯ ವೀರೇಶ್ ಶೆಟ್ಟಿ, ಮೈಕ್ರಾನ್ ಕಂಪನಿಯ ಆನಂದ್ ರಾಮಮೂರ್ತಿ, ಎಸ್ಎಲ್ಎನ್ ಟೆಕ್ ಸಂಸ್ಥೆಯ ಅನಿಲ್ ಕುಮಾರ್, ಸೀಮನ್ಸ್ ಕಂಪನಿಯ ರುಚಿರ್ ದೀಕ್ಷಿತ್, ಬ್ರಿಸಾ ಟೆಕ್ನಾಲಜೀಸ್ ಸಂಸ್ಥೆಯ ಪ್ರಸಾದ್ ಜೋಶಿ ಉಪಸ್ಥಿತರಿದ್ದರು.
ನವೋದ್ಯಮಗಳ ವಲಯದಿಂದ ಕೂ ಕಂಪನಿಯ ಅಪ್ರಮೇಯ ರಾಧಾಕೃಷ್ಣ, ಬೌನ್ಸ್ ಕಂಪನಿಯ ಸ್ಥಾಪಕ ಎಚ್.ಆರ್.ವಿವೇಕಾನಂದ, ರೇಜರ್ ಪೇ ಸಂಸ್ಥಾಪಕ ಹರ್ಷಿಲ್ ಮಾಥೂರ್, ವೇದಾಂತು ಕಂಪನಿಯ ಪುಲಕಿತ್ ಜೈನ್, ಅಕೋ ಕಂಪನಿಯ ಅಂಕಿತ್ ನಾಗೋರಿ, ಹೋಮ್ - ಲೇನ್ ಕಂಪನಿಯ ತನುಜ್ ಚೌಧರಿ, ಉಡಾನ್ ಸಂಸ್ಥಾಪಕ ಸುಜಿತ್ ಕುಮಾರ್, ಸಮುನ್ನತಿ ಕಂಪನಿಯ ಎಸ್.ಜಿ.ಅನಿಲ್ ವಿಚಾರ ವಿನಿಮಯದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಸರಕಾರದ ಐಟಿ ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣರೆಡ್ಡಿ, ಐಟಿಬಿಟಿ ಇಲಾಖೆ ನಿರ್ದೇಶಕಿ ಮೀನಾ ನಾಗರಾಜ, ಐಟಿ ವಿಷನ್ ಗ್ರೂಪ್ ಮುಖ್ಯಸ್ಥ ಕ್ರಿಸ್ ಗೋಪಾಲಕೃಷ್ಣ, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮುಖ್ಯಸ್ಥ ಬಿ.ವಿ.ನಾಯ್ಡು ಕೂಡ ಉಪಸ್ಥಿತರಿದ್ದರು.