ETV Bharat / city

ಉದ್ಧವ್​ ಠಾಕ್ರೆ ತಮ್ಮ ಹೇಳಿಕೆ ಹಿಂಪಡೆಯಬೇಕು: ವಾಟಾಳ್ ನಾಗರಾಜ್

author img

By

Published : Jan 21, 2021, 8:15 PM IST

ರಾಜ್ಯ ಸರ್ಕಾರಕ್ಕೆ ಕನ್ನಡಿಗರ ಮೇಲಾಗಲಿ, ಕರ್ನಾಟಕದ ಮೇಲಾಗಲಿ ಕಾಳಜಿ ಇಲ್ಲ. ಹಿಂದಿ ಹೇರಿಕೆಯ ಮೇಲಿರುವ ಕಾಳಜಿ ಕನ್ನಡದ ಮೇಲಿಲ್ಲ. ಕನ್ನಡ ಕಾಪಾಡಬೇಕಾದ ಇಲಾಖೆ, ನಿಗಮ, ಪ್ರಾಧಿಕಾರಗಳು ಬಿಜೆಪಿ-ಆರ್​ಎಸ್​ಎಸ್ ಕೇಂದ್ರಗಳಾಗಿ ಮಾರ್ಪಟ್ಟಿವೆ ಎಂದು ವಾಟಾಲ್​ ನಾಗರಾಜ್​ ಕಿಡಿಕಾರಿದರು.

uddhav-thackeray-should-retract-his-statement
ವಾಟಾಳ್ ನಾಗರಾಜ್

ಆನೇಕಲ್: ಮೊದಲು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​ ಠಾಕ್ರೆ ತಮ್ಮ ಹೇಳಿಕೆ ಹಿಂಪಡೆಯಬೇಕು. ಇಲ್ಲವಾದಲ್ಲಿ ಹಂತ ಹಂತವಾಗಿ ಹೋರಾಟದ ಕಾವು ಹೆಚ್ಚಿಸಲಾಗುವುದು ಎಂದು ಕನ್ನಡ ವಾಟಾಳ್​​​ ಪಕ್ಷದ ಸಂಸ್ಥಾಪಕ​ ವಾಟಾಳ್​ ನಾಗರಾಜ್​ ಕಿಡಿಕಾರಿದ್ದಾರೆ.

ತಮಿಳುನಾಡು-ಕರ್ನಾಟಕ ಗಡಿ ಭಾಗ ಅತ್ತಿಬೆಲೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ಕನ್ನಡಿಗರ ಮೇಲಾಗಲಿ, ಕರ್ನಾಟಕದ ಮೇಲಾಗಲಿ ಕಾಳಜಿ ಇಲ್ಲ. ಹಿಂದಿ ಹೇರಿಕೆಯ ಮೇಲಿರುವ ಕಾಳಜಿ ಕನ್ನಡದ ಮೇಲಿಲ್ಲ. ಕನ್ನಡ ಕಾಪಾಡಬೇಕಾದ ಇಲಾಖೆ, ನಿಗಮ, ಪ್ರಾಧಿಕಾರಗಳು ಬಿಜೆಪಿ-ಆರ್​ಎಸ್​ಎಸ್ ಕೇಂದ್ರಗಳಾಗಿ ಮಾರ್ಪಟ್ಟಿವೆ. ಟಿ.ಎಸ್.ನಾಗಾಭರಣ ಒಬ್ಬ ಆರ್​ಎಸ್​ಎಸ್ ಮುಖಂಡ. ಇಂತಹವರಿಂದ ಕನ್ನಡ ನಾಡು ಉದ್ಧಾರವಾಗಲ್ಲ ಎಂದು ವಾಟಾಳ್ ಹರಿಹಾಯ್ದರು.

ವಾಟಾಳ್​ ನಾಗರಾಜ್​

ಮೊದಲು ಹಿಂದಿವಾಲಾಗಳ ವಿರುದ್ಧ ಹೋರಾಟ ರೂಪಿಸಬೇಕು. ಸಿಎಂ ಯಡಿಯೂರಪ್ಪ ಮರಾಠ ಅಭಿವೃದ್ಧಿ ಪ್ರಾಧಿಕಾರ ವಾಪಸ್​ ಪಡೆಯಬೇಕು. ಇಲ್ಲವಾದಲ್ಲಿ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಭಾಷಾಭಿಮಾನವಿಲ್ಲದ ಕರ್ನಾಟಕ ಸರ್ಕಾರ ಒಂದೆಡೆಯಾದರೆ, ಒಂದೇ ಭಾಷೆಯನ್ನು ಬೇರೆ ರಾಜ್ಯಗಳ ಮೇಲೆ ಹೇರುತ್ತಿರುವ ಕೇಂದ್ರ ಸರ್ಕಾರದಿಂದ ಕನ್ನಡ ಮತ್ತು ಕನ್ನಡಿಗರ ಕಗ್ಗೊಲೆಯಾಗುತ್ತಿದೆ ಎಂದು ಕಿಡಿಕಾರಿದರು.

ಓದಿ-ಸಾವಿರಾರು ಜನರ ಸಮ್ಮುಖದಲ್ಲಿ ನಟರಾಜನ್​ಗೆ​​ ಸಿಕ್ತು ಭರ್ಜರಿ ಸ್ವಾಗತ: ವಿಡಿಯೋ

ಕನ್ನಡ ಜಾಗೃತಿ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಕೆ.ಮಂಜುನಾಥ ದೇವ ಮಾತನಾಡಿ, ಉದ್ಧವ್​​ ಠಾಕ್ರೆ ಅಲ್ಲಿನ ಮರಾಠರನ್ನ ಮೆಚ್ಚಿಸಲು ಎಂಇಎಸ್ ಪುಂಡಾಟಿಕೆಗೆ ನೀರೆರೆಯುವುದನ್ನು ನಿಲ್ಲಿಸಬೇಕು. ಇಲ್ಲವಾದಲ್ಲಿ ಕನ್ನಡಿಗರು ಮಹಾರಾಷ್ಟ್ರಕ್ಕೆ ನುಗ್ಗುವ ದಿನಗಳು ದೂರವಿಲ್ಲವೆಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಸಾರಾ ಗೋವಿಂದು ಮತ್ತಿತರರು ಭಾಗವಹಿಸಿದ್ದು, ಅತ್ತಿಬೆಲೆಯಿಂದ ತಮಿಳುನಾಡು ಗಡಿಯವರೆಗೆ ಕಾಲ್ನಡಿಗೆ ಮೂಲಕ ಮೆರವಣಿಗೆ ನಡೆಸಿದರು. ಅಲ್ಲದೆ ಹೆದ್ದಾರಿ ತಡೆಯಲು ಮುಂದಾದ ಹೋರಾಟಗಾರರನ್ನು ಅತ್ತಿಬೆಲೆ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.