ETV Bharat / city

ಸಿಲಿಕಾನ್​ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು: ಇಬ್ಬರು ರೌಡಿಶೀಟರ್​ಗಳ ಕಾಲಿಗೆ ಗುಂಡೇಟು - Rowdy Sheeter bubly murder case

ಬ್ಯಾಂಕ್​ಗೆ ನುಗ್ಗಿ ರೌಡಿಶೀಟರ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಶೂಟ್​ ಮಾಡಿ, ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

banglore
ಇಬ್ಬರು ರೌಡಿಶೀಟರ್​ಗಳ ಕಾಲಿಗೆ ಗುಂಡೇಟು
author img

By

Published : Jul 21, 2021, 9:34 AM IST

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಗುಂಡಿನ ಸದ್ದು ಮೊಳಗಿದೆ. ರಾಜಧಾನಿ ಬ್ಯಾಂಕ್​ವೊಂದಕ್ಕೆ ನುಗ್ಗಿ ರೌಡಿಶೀಟರ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹೊಡೆದು ಕೋರಮಂಗಲ ಪೊಲೀಸರು ಬಂಧಿಸಿದ್ದಾರೆ.

ಜೆ.ಸಿ.ನಗರ ಠಾಣೆಯ ರೌಡಿಶೀಟರ್ ರವಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಪ್ರದೀಪ್‌ ಗುಂಡೇಟು ತಿಂದ ಆರೋಪಿಗಳು.‌ ಘಟನೆಯಲ್ಲಿ ಪಿಎಸ್ಐ ಸಿದ್ದಪ್ಪ ಹಾಗೂ ಎಎಸ್ಐ ರವೀಂದ್ರ ಎಂಬುವರು ಗಾಯಗೊಂಡಿದ್ದು, ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏನಿದು ಪ್ರಕರಣ..?

ಆಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಬಬ್ಲಿ ಜು. 19ರಂದು ಪತ್ನಿಯೊಂದಿಗೆ ಕೋರಮಂಗಲ ಶಾಖೆಯ ಯುನಿಯನ್ ಬ್ಯಾಂಕ್​ಗೆ ಹೋಗಿದ್ದಾಗ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಏಕಾಏಕಿ ಬ್ಯಾಂಕ್​ಗೆ ನುಗ್ಗಿ ಮಾರಕಾಸ್ತ್ರಗಳಿದ ಬಬ್ಲಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದರು. ಈ ಸಂಬಂಧ‌ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣೆ ಇನ್ಸ್​ಪೆಕ್ಟರ್​ ರವಿ ನೇತೃತ್ವತದ ತಂಡ ಆರೋಪಿಗಳಿಗಾಗಿ ಶೋಧ ನಡೆಸುತ್ತಿತ್ತು.

ಮಂಗಳವಾರ ರಾತ್ರಿ ರವಿ ಹಾಗೂ ಪ್ರದೀಪ್ ಬೇಗೂರು ಬಳಿ‌ಯ ನಿರ್ಜನ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಬಂಧಿಸಲು ಹೋದಾಗ ಪಿಎಸ್ಐ ಸಿದ್ದಪ್ಪ ಹಾಗೂ‌ ಎಎಸ್ಐ ರವೀಂದ್ರ ಎಂಬುವವರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ, ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ‌.

ಶರಣಾಗುವಂತೆ ಸೂಚಿಸಿದರೂ ಕ್ಯಾರೆ ಅನ್ನದ ಆರೋಪಿಗಳ ಕಾಲುಗಳಿಗೆ ಇನ್ಸ್​ಪೆಕ್ಟರ್​ ರವಿ ಹಾಗೂ ಪಿಎಸ್ಐ ಪುಟ್ಟಸಾಮಯ್ಯ ಶೂಟ್ ಮಾಡಿ, ಬಂಧಿಸಿದ್ದಾರೆ ಎಂದು ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವನ್ ಜೋಶಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬ್ಯಾಂಕ್ ಒಳಗೆ ನುಗ್ಗಿ ರೌಡಿಶೀಟರ್ ಬಬ್ಲಿಯ ಬರ್ಬರ ಕೊಲೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.