ETV Bharat / city

ಬೆಂಗಳೂರಲ್ಲಿ ಮತ್ತಿಬ್ಬರು ಪೊಲೀಸ್​ ಸಿಬ್ಬಂದಿಗೆ ಕೊರೊನಾ - Corona virus found in police

ಬೆಂಗಳೂರು ನಗರದ ಹಲಸೂರು ಗೇಟ್​ ಸಂಚಾರಿ ಠಾಣೆ ಮತ್ತು ಹನುಮಂತನಗರ ಠಾಣೆಯ ತಲಾ ಒಬ್ಬರು ಕಾನ್ಸ್​​ಟೇಬಲ್​​ಗೆ ಕೊರೊನಾ ಸೋಂಕು ತಗುಲಿದೆ.

corona virus
ಕೊರೊನಾ ವೈರಸ್​
author img

By

Published : Jul 6, 2020, 2:59 PM IST

ಬೆಂಗಳೂರು: ಪೊಲೀಸ್ ಇಲಾಖೆಯನ್ನು ಬೆಂಬಿಡದೆ ಕಾಡುತ್ತಿರುವ ಕೊರೊನಾ ಸೋಂಕು, ಇಂದು ಎರಡು ಠಾಣೆಗಳ ಇಬ್ಬರು ಕಾನ್ಸ್​​ಟೇಬಲ್​​​ಗಳಿಗೆ ಅಂಟಿಕೊಂಡಿದೆ.

ಹಲಸೂರು ಗೇಟ್ ಸಂಚಾರಿ ಠಾಣೆ: ಈ ಠಾಣೆಯ ಸಿಬ್ಬಂದಿಯೊಬ್ಬರಿಗೆ ಈ ಮೊದಲೇ ಸೋಂಕು ದೃಢವಾಗಿತ್ತು. ಅವರ ಸಂಪರ್ಕದಲ್ಲಿದ್ದ ಕಾನ್ಸ್​ಟೇಬಲ್​​​ಗೆ ಇಂದು ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿತನ ಸಂಪರ್ಕದಲ್ಲಿದ್ದ ಸಿಬ್ಬಂದಿಗೆ ಹೋಮ್​​ ಕ್ವಾರಂಟೈನ್​​ಗೆ ಒಳಪಡಿಸಿ, ಠಾಣೆಯನ್ನ ಸೀಲ್​ ​ಡೌನ್ ಮಾಡಲಾಗಿದೆ.

ಹನುಮಂತನಗರ ಠಾಣೆ: ಈ ಠಾಣೆಯ ಸಿಬ್ಬಂದಿಗೂ ಕೊರೊನಾ ದೃಢಪಟ್ಟಿದೆ. ಈತ ಸೋಂಕಿತರು ದಾಖಲಾಗುವ ಆಸ್ಪತ್ರೆ, ವಿವಿ ಪುರಂ ಠಾಣೆ ಸುತ್ತಮುತ್ತ ಕೆಲಸ ಮಾಡಿದ್ದ. ಹೀಗಾಗಿ ಸೋಂಕಿತನನ್ನು ಆಸ್ಪತ್ರೆಗೆ ದಾಖಲಿಸಿ, ಆತನ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಮಾಡಲಾಗಿದ್ದು, ಠಾಣೆಯನ್ನು ಸೀಲ್​ ​ಡೌನ್ ಮಾಡಲಾಗಿದೆ.

ಅನಿವಾರ್ಯ ಕಾರಣಕ್ಕಾಗಿ‌ ಈ ಠಾಣೆಯನ್ನು ಸಂಪರ್ಕಿಸುವವರು ನಗರ ಆಯುಕ್ತರ ಕಚೇರಿಯ 100ಕ್ಕೆ ಕರೆ ಮಾಡಿ ಸಹಾಯ ಪಡೆದುಕೊಳ್ಳಬಹುದು ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.