ETV Bharat / city

ವರಮಹಾಲಕ್ಷ್ಮಿ ಹಬ್ಬ ಬರ್ತಿದೆ, ಪ್ಲೀಸ್ ಸಂಬಳ ಕೊಡಿ: ಸಾರಿಗೆ ನೌಕರರ ಮನವಿ

ಸಾರಿಗೆ ನೌಕರರಿಗೆ 10ನೇ ತಾರೀಖಿನೊಳಗೆ ವೇತನ ನೀಡಲಾಗ್ತಿತ್ತು. ಇದೀಗ ಜುಲೈ ತಿಂಗಳ ಸಂಬಳ ಆಗಸ್ಟ್ 17 ಆದರೂ ನೀಡಿಲ್ಲ. ಹಾಗಾಗಿ ನೂತನ ಸಾರಿಗೆ ಸಚಿವರಿಗೆ ಜುಲೈ ತಿಂಗಳ ವೇತನ ಕೊಡಿ ಎಂದು ಸಾರಿಗೆ ನೌಕರರು ಮನವಿ ಮಾಡಿದ್ದಾರೆ.

Transport employees salary problem
ಸಂಬಳ ಕೊಡುವಂತೆ ಸಾರಿಗೆ ನೌಕರರ ಮನವಿ
author img

By

Published : Aug 17, 2021, 3:11 PM IST

Updated : Aug 17, 2021, 3:20 PM IST

ಬೆಂಗಳೂರು: ಕೊರೊನಾ ಸೋಂಕು ಸಾರಿಗೆ ನಿಗಮಗಳನ್ನು ನೆಲಕಚ್ಚುವಂತೆ ಮಾಡಿದ್ದು ಸುಳ್ಳಲ್ಲ. ತಿಂಗಳಾಯ್ತು ಅಂದರೆ ಸಾಕು, ಸಿಬ್ಬಂದಿಗೆ ಸಂಬಳ ನೀಡುವ ಚಿಂತೆ ಶುರುವಾಗುತ್ತೆ. ಇದೀಗ, ಪೂರ್ಣ ಪ್ರಮಾಣದಲ್ಲಿ ಬಸ್​​​​ಗಳು ಓಡಾಟ ನಡೆಸುತ್ತಿದ್ದರೂ ಸಾರಿಗೆ ನಿಗಮಗಳು ಚೇತರಿಕೆ ಕಾಣುತ್ತಿಲ್ಲ. ಇತ್ತ ಜುಲೈ ತಿಂಗಳ ವೇತನ ಸಿಗದೇ ಸಾರಿಗೆ ನೌಕರರ ಬದುಕು ದುಸ್ಥರವಾಗಿದೆ. ಹೀಗಾಗಿ, ನೂತನ ಸಾರಿಗೆ ಸಚಿವರಿಗೆ ಜುಲೈ ತಿಂಗಳ ವೇತನ ಕೊಡಿ ಎಂದು ಸಾರಿಗೆ ನೌಕರರು ಮನವಿ ಮಾಡಿದ್ದಾರೆ.

ಕೆಬಿಎನ್​​ಎನ್ ವರ್ಕ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ನಾಗರಾಜ್

ಆಗಸ್ಟ್ 17ನೇ ತಾರೀಖಾದರೂ ನಾಲ್ಕು ಸಾರಿಗೆ ನಿಗಮಗಳಿಗೆ ಇನ್ನೂ ಜುಲೈ ತಿಂಗಳ ವೇತನ ಆಗಿಲ್ಲ. ಹೀಗಾಗಿ, ವರಮಹಾಲಕ್ಷ್ಮಿ ಹಬ್ಬ ಬರುತ್ತಿದೆ, ಮನೆಯಲ್ಲಿ ಹಬ್ಬ ಆಚರಿಸಲಾದರೂ ಸಂಬಳ ಕೊಡಿ ಅಂತ ಮನವಿ ಮಾಡಿದ್ದಾರೆ. ನಾಲ್ಕು ಸಾರಿಗೆ ನಿಗಮಗಳಿಗೆ ವೇತನ ನೀಡಲು 326 ಕೋಟಿ ರೂ. ಹಣ ಬೇಕು. ಸುಮಾರು 1.30 ಲಕ್ಷ ಸಾರಿಗೆ ನೌಕರರು ಇದ್ದಾರೆ. ಇತ್ತ ಕೋವಿಡ್ ಕಾರಣಕ್ಕೆ ಜುಲೈ ತಿಂಗಳವರೆಗೆ ಸರ್ಕಾರವೇ ಅನುದಾನ ಬಿಡುಗಡೆ ಮಾಡಿತ್ತು‌.

ಇದನ್ನೂ ಓದಿ: ತೆರಿಗೆ ವಂಚಿಸಿ ಒಂದೇ ನಂಬರ್​​​​ನಲ್ಲಿ ಸಂಚರಿಸುತ್ತಿದ್ದ ಮೂರು ಬಸ್​ ಆರ್​ಟಿಒ ವಶ

ಈ ಕುರಿತು ಮಾತಾನಾಡಿರುವ ಕೆಬಿಎನ್​​ಎನ್ ವರ್ಕ್ಸ್ ಫೆಡರೇಷನ್ ಪ್ರಧಾನ ಕಾರ್ಯದರ್ಶಿ ನಾಗರಾಜ್, ಈ ಹಿಂದೆ ಸಾರಿಗೆ ನೌಕರರಿಗೆ 10ನೇ ತಾರೀಖಿನೊಳಗೆ ವೇತನ ನೀಡಲಾಗ್ತಿತ್ತು. ಇದೀಗ ಜುಲೈ ತಿಂಗಳ ಸಂಬಳ, ಆಗಸ್ಟ್ 17 ಆದರೂ ನೀಡಿಲ್ಲ. ಸಾರಿಗೆ ಸಚಿವ ಶ್ರೀರಾಮುಲು ಇದನ್ನು ಗಮನಕ್ಕೆ ತೆಗೆದುಕೊಂಡು ಸರ್ಕಾರದ ವತಿಯಿಂದ ಆದರೂ ಸಂಬಳ ದೊರಕಿಸಿಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

Last Updated : Aug 17, 2021, 3:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.