ETV Bharat / city

ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಸಾಗಣೆ: ಮೂವರು ಆರೋಪಿಗಳ ಬಂಧನ..

ಈಶಾನ್ಯ ರಾಜ್ಯಗಳಿಂದ ಗಾಂಜಾವನ್ನು ರೈಲಿನ ಮೂಲಕ ನಗರಕ್ಕೆ ಕಡಿಮೆ ಬೆಲೆಗೆ ಬೆಂಗಳೂರಿಗೆ ತಂದು ಮಾರಾಟ ಮಾಡುತ್ತಿದ್ದರು.

author img

By

Published : Feb 21, 2022, 6:29 PM IST

Trafficking in marijuana in Silicon City: Arrest of three accused
ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಸಾಗಣೆ: ಮೂವರು ಆರೋಪಿಗಳ ಬಂಧನ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಗಾಂಜಾ ಸಾಗಣೆ ಮಾಡುತ್ತಿದ್ದ ಮೂವರು ಅಂತರಾಜ್ಯ ಆರೋಪಿಗಳನ್ನು ಬಂಧಿಸಿರುವ ಶ್ರೀರಾಂಪುರ ಠಾಣೆ ಪೊಲೀಸರು 15 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.

ತ್ರಿಪುರ ರಾಜ್ಯದ ಆರೋಪಿಗಳು ರಾಜಧಾನಿಯಲ್ಲಿ ಸೆಕ್ಯೂರಿಟಿ ಕೆಲಸ ಮಾಡುತ್ತಿದ್ದರು. ಈಶಾನ್ಯ ರಾಜ್ಯಗಳಿಂದ ಗಾಂಜಾ ತ೦ದು ಮಾರಾಟ ಮಾಡಲು ದ್ವಿಚಕ್ರ ವಾಹನದಲ್ಲಿ ಮೆಜಿಸ್ಟಿಕ್ ಕಡೆಗೆ ತೆರಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಇನ್ಸ್​​​​ಪೆಕ್ಟರ್​​ ಬಾಲಕೃಷ್ಣ, ಸಬ್ ಇನ್ಸ್​​​​ಪೆಕ್ಟರ್​ ವಿನೋದ್ ನೇತೃತ್ವದ ಪೊಲೀಸ್ ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದಾರೆ. ಒಂದು ಫ್ಯಾಕ್ಟರಿ ಬಳಿ ಆರೋಪಿಗಳನ್ನು ವಶಕ್ಕೆ ಪಡೆದು ಬಂಧಿತರಿಂದ 15 ಕೆಜಿ ಗಾಂಜಾ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ದ್ವಿಚಕ್ರವಾಹನವನ್ನು ವಶಕ್ಕೆ ಪಡಿಸಿಕೊಂಡಿದ್ದಾರೆ.

ರೈಲಿನ ಮೂಲಕ ಗಾಂಜಾ: ರೈಲಿನ ಮೂಲಕ ನಗರಕ್ಕೆ ಕಡಿಮೆ ಬೆಲೆಗೆ ಗಾಂಜಾ ತಂದು ನಗರದಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹಣ ಪಡೆದು ಮಕ್ಕಳನ್ನು 'ದೇವರು' ಎಂದು ಘೋಷಿಸುತ್ತಿದ್ದ ಜ್ಯೋತಿಷಿ: ಪೊಲೀಸ್​, ಮಕ್ಕಳ ಹಕ್ಕು ಆಯೋಗದಿಂದ ತನಿಖೆ ಆರಂಭ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.