ETV Bharat / city

ಪೊಲೀಸರ‌ ಮೇಲಿದ್ದ ಕೋಪದಿಂದ 230 ಟ್ರಾಫಿಕ್ ಸಿಗ್ನಲ್ ಬ್ಯಾಟರಿ ಕದ್ದಿದ್ದ ದಂಪತಿ ಅಂದರ್ - ಬ್ಯಾಟರಿ ಕಳವು ಪ್ರಕರಣ, ದಂಪತಿ ಅಂದರ್

ಬ್ಯಾಟರಿ ಕಳವು ಮಾಡುತ್ತಿದ್ದ ದಂಪತಿಗಳನ್ನು ಅಶೋಕ ನಗರದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿ ದಂಪತಿಗಳನ್ನು ಸಿಕಂದರ್ ಮತ್ತು ನಜ್ಮಾ ಎಂದು ಗುರುತಿಸಲಾಗಿದ್ದು, ಬಂಧಿತ ಆರೋಪಿಗಳಿಂದ ಬರೋಬ್ಬರಿ 20 ಲಕ್ಷ ಮೌಲ್ಯದ ಸುಮಾರು 230 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

author img

By

Published : Feb 15, 2022, 3:33 PM IST

ಬೆಂಗಳೂರು: ಪೊಲೀಸರಿಗೆ ಬುದ್ಧಿ ಕಲಿಸುವ ನಿಟ್ಟಿನಲ್ಲಿ ನಗರದ ಸಿಗ್ನಲ್ ನಲ್ಲಿ ಬ್ಯಾಟರಿ ಕಳವು ಮಾಡುತ್ತಿದ್ದ ದಂಪತಿಗಳನ್ನು ಅಶೋಕ ನಗರದ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ದಂಪತಿಗಳನ್ನು ಸಿಕಂದರ್ ಮತ್ತು ನಜ್ಮಾ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಗಳಿಂದ ಬರೋಬ್ಬರಿ 20 ಲಕ್ಷ ಮೌಲ್ಯದ ಸುಮಾರು 230 ಬ್ಯಾಟರಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಲಾಕ್ ಡೌನ್ ವೇಳೆ, ಇಟ್ಟುಕೊಂಡಿದ್ದ ಟೀ ಅಂಗಡಿಯಲ್ಲಿದ್ದ ವಸ್ತುಗಳನ್ನ ಪೊಲೀಸರು ನಾಶಪಡಿಸಿದ್ದರು ಎಂದು‌,‌ ಪೊಲೀಸರಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದ ಆರೋಪಿಗಳು ನಗರದ ಸಿಗ್ನಲ್ ಗಳಲ್ಲಿನ ಬ್ಯಾಟರಿಗಳ ಕಳ್ಳತನಕ್ಕೆ ಇಳಿದಿದ್ದರು.

ಇನ್ನು ಈ ಬ್ಯಾಟರಿ ಕಳ್ಳತನ ಮಾಡುತ್ತಿದ್ದ ಗಂಡ - ಹೆಂಡತಿ‌ ಬೆಳಗಿನ ಜಾವ 3 ಗಂಟೆಯಿಂದ 5 ಗಂಟೆಯೊಳಗೆ ಕಳ್ಳತನ ಮಾಡುತ್ತಿದ್ದರು. ತಮ್ಮ ಟಿವಿಎಸ್ ಎನ್ ಟಾರ್ಕ್ ಬೈಕ್ ನಲ್ಲಿ ಒಂದು ಕಟರ್ ಸಮೇತ ಸ್ಥಳಕ್ಕೆ ಬಂದು‌ ಟ್ರಾಫಿಕ್ ಸಿಗ್ನಲ್ ಕಂಬದಲ್ಲಿ ವೈರ್ ಕಟ್ ಮಾಡಿ ಸುಲಭವಾಗಿ ಬ್ಯಾಟರಿ ಎತ್ತಿಕೊಂಡು ಪರಾರಿಯಾಗುತ್ತಿದ್ದರು ಎಂಬುದು ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿಗಳನ್ನ ಹೆಡೆಮುರಿಕಟ್ಟಲು ವಿಶೇಷ ಕಾರ್ಯಾಚರಣೆ ನಡೆಸಿ‌ದ ಅಶೋಕನಗರ ಪೊಲೀಸ್ ಠಾಣೆಯ ಎಎಸ್ಐ ದೇವರಾಜ್ ಮತ್ತು ಇನ್ಸ್​​​​​​ಪೆಕ್ಟರ್​​ ಮಲ್ಲೇಶ್ ಬೊಳೆತ್ತಿನ್ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕದ್ದ 7 ಸಾವಿರ ಬೆಲೆಯ ಬ್ಯಾಟರಿಗಳನ್ನ ಕೇವಲ 1 ಸಾವಿರಕ್ಕೆ‌ ಮಾರಾಟ‌ ಮಾಡುತ್ತಿದ್ದ ಈ ಕಳ್ಳ ದಂಪತಿ ಕೊನೆಗೂ ಅಂದರ್ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.