ಬೆಂಗಳೂರು: ರಾಜ್ಯದಲ್ಲಿ ಎರಡನೇ ಅಲೆಯ ಪರಿಣಾಮ ಸಕ್ರಿಯ ಪ್ರಕರಣಗಳು 4ಲಕ್ಷಕ್ಕೆ ಏರಿಕೆ ಆಗಿವೆ. ಇಂದು 40,990 ಮಂದಿಗೆ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 15,64,132ಕ್ಕೆ ಏರಿಕೆ ಆಗಿದೆ.
ಕೋವಿಡ್ಗೆ 271 ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಒಟ್ಟು ಸಾವಿನ ಸಂಖ್ಯೆ 15,794ಕ್ಕೆ ಹೆಚ್ಚಿದೆ. ಇತ್ತ 18,341 ಮಂದಿ ಗುಣಮುಖರಾಗಿದ್ದು, ಈವರೆಗೆ 11,43,250 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆತಂಕದ ವಿಷ್ಯ ಅಂದರೆ ಸಕ್ರಿಯ ಪ್ರಕರಣಗಳು 4,05,068 ಕ್ಕೆ ಏರಿದೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 23.03 ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ 0.66 ರಷ್ಟು ಇದೆ. ವಿಮಾನ ನಿಲ್ದಾಣದ ಮೂಲಕ ಬಂದಿರುವ 3,518 ಪ್ರಯಾಣಿಕರನ್ನ ತಪಾಸಣೆಗೆ ಒಳಪಡಿಸಲಾಗಿದೆ. ಈವರೆಗೆ ಯುಕೆಯಿಂದ ಬಂದಿದ್ದ 64 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಇವರ ಸಂಪರ್ಕದಲ್ಲಿದ್ದ 26 ಮಂದಿಗೂ ಸೋಂಕು ಹರಡಿದೆ. ಹಾಗೇ ಯುಕೆಯ ರೂಪಾಂತರ ಕೊರೊನಾ 46 ಜನರಿಗೆ ತಗುಲಿದೆ. ಸೌತ್ ಆಫ್ರಿಕಾ ಸೋಂಕು 6 ಮಂದಿಗೆ ಡಬಲ್ ಮ್ಯುಟೇಷನ್ 20 ಸೋಂಕು ದೃಢಪಟ್ಟಿದೆ.
18 ವರ್ಷ ಮೇಲ್ಪಟ್ಟವರಲ್ಲಿ ಕೇವಲ 35 ಮಂದಿಗೆ ಮಾತ್ರ ಲಸಿಕೆ
ರಾಜ್ಯದಲ್ಲಿ ಇಂದಿನಿಂದ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನ ಎಲ್ಲರಿಗೂ ಲಸಿಕೆಯನ್ನ ನೀಡಲಾಗುತ್ತಿದೆ. ಸಿಎಂ ಯಡಿಯೂರಪ್ಪ ಇಂದು ಚಾಲನೆ ನೀಡಿದ್ದಾರೆ. ಆದರೆ ಅಚ್ಚರಿ ಎಂಬಂತೆ ರಾಜ್ಯಾದ್ಯಂತ ಕೇವಲ 35 ಮಂದಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆ. ರಾಜ್ಯಾದ್ಯಂತ ಕೊರೊನಾ ಲಸಿಕಾ ಅಭಿಯಾನದಲ್ಲಿ ಈವರೆಗೆ 97,55,976 ಮಂದಿ ಪಡೆದಿದ್ದಾರೆ. ಇದರಲ್ಲಿ ಮೊದಲ ಡೋಸ್ಅನ್ನ ಆರೋಗ್ಯ ಕಾರ್ಯಕರ್ತರು 6,78,724 ಮಂದಿ, ಎರಡನೇ ಡೋಸ್ 4,33,061 ಮಂದಿ ಪಡೆದಿದ್ದಾರೆ.
ಇನ್ನು ಮುಂಚೂಣಿ ಕಾರ್ಯಕರ್ತರು 3,86,745, ಎರಡನೇ ಡೋಸ್ಅನ್ನು 1,47,780 ಮಂದಿ ಲಸಿಕೆ ಪಡೆದಿದ್ದಾರೆ. ಹಿರಿಯ ನಾಗರಿಕರು ಮೊದಲ ಡೋಸ್ನಲ್ಲಿ 35,29,489, ಎರಡನೇ ಡೋಸ್ನ 7,38,751 ಪೂರ್ಣಗೊಳಿಸಿದ್ದಾರೆ. ಅನಾರೋಗ್ಯ ಸಮಸ್ಯೆಯಿಂದ ಬಳುತ್ತಿರುವವರು ಮೊದಲ ಡೋಸ್ 35,68,965 ಮಂದಿ, ಎರಡನೇ ಡೋಸ್ 2,72,426 ಲಸಿಕೆ ಪಡೆದುಕೊಂಡಿದ್ದಾರೆ.
(ಕರ್ನಾಟಕಕ್ಕೆ 1.62 ಲಕ್ಷ ರೆಮ್ಡೆಸಿವಿರ್ ವಯಲ್ಸ್ ನಿಗದಿ: ಸದಾನಂದ ಗೌಡ)