ETV Bharat / city

ಕೇಂದ್ರ ಅಧ್ಯಯನ ತಂಡದಿಂದ 3ನೇ ಹಂತದ ನೆರೆ ಸಮೀಕ್ಷೆ ಶೀಘ್ರ; ಸಚಿವ ಆರ್. ಅಶೋಕ್ - minister R ashok news

ನೆರೆ ಹಾವಳಿಯಿಂದ ಒಟ್ಟು 24,942 ಕೋಟಿ ರೂ. ನಷ್ಟ ಸಂಭವಿಸಿದ್ದು, 25 ಜಿಲ್ಲೆಗಳ 180 ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹ ಪೀಡಿತವೆಂದು ಘೋಷಿಸಿ ಸೂಕ್ತ ಕ್ರಮ ವಹಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಆರ್. ಅಶೋಕ್ ತಿಳಿಸಿದರು.

Minister R. Ashok
ಸಚಿವ ಆರ್.ಅಶೋಕ್
author img

By

Published : Nov 9, 2020, 9:05 PM IST

ಬೆಂಗಳೂರು: ನೆರೆ ಹಾವಳಿಯಿಂದ ಒಟ್ಟು 24,942 ಕೋಟಿ ರೂ. ನಷ್ಟ ಸಂಭವಿಸಿದ್ದು, ರಾಜ್ಯ ವಿಪತ್ತು ನಿರ್ವಹಣಾ ನಿಧಿ (ಎಸ್‌ಡಿಆರ್‌ಎಫ್)ಯ ಮಾರ್ಗಸೂಚಿ ಪ್ರಕಾರ 2,385 ಕೋಟಿ ರೂ.ಗಳ ಅನುದಾನ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದರು.

ಕಂದಾಯ ಸಚಿವ ಆರ್.ಅಶೋಕ್

ವಿಧಾನಸೌಧದಲ್ಲಿ ಮಾತನಾಡಿದ ಅವರು, ಅತಿವೃಷ್ಟಿ, ಪ್ರವಾಹ ಹಾನಿಯ 3ನೇ ಹಂತದ ಸಮೀಕ್ಷೆಗಾಗಿ ಕೇಂದ್ರ ಅಧ್ಯಯನ ತಂಡ ಇಷ್ಟರಲ್ಲೇ ಭೇಟಿ ನೀಡಲಿದೆ. ಕೇಂದ್ರದಿಂದ ಪೂರ್ಣ ಪ್ರಮಾಣದ ನೆರವಿಗೆ ಕಾಯದೇ, ಎಸ್‌ಡಿಆರ್‌ಎಫ್ 737.80 ಕೋಟಿ ರೂ. ಬಿಡುಗಡೆ ಮಾಡಿ ತುರ್ತು ಅಗತ್ಯ ಕೆಲಸಗಳನ್ನು ನಿರ್ವಹಿಸಲಾಗಿದೆ ಎಂದರು. ಅಕ್ಟೋಬರ್​ನಲ್ಲಿ ಸಂಭವಿಸಿದ ನೆರೆಗೆ 9833.04 ಕೋಟಿ ರೂ. ಹಾನಿಯಾಗಿದೆ. ಎಸ್​ಡಿಆರ್​ಎಫ್ ಮಾರ್ಗಸೂಚಿಯನ್ವಯ 1078.46 ಕೋಟಿ ರೂ. ನಷ್ಟ ಅನುಭವಿಸಿರುವ ಬಗ್ಗೆ ಕೇಂದ್ರಕ್ಕೆ ಮೆಮೊರಾಂಡಮ್ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಈವರೆಗೆ ಬೆಳೆ ಹಾನಿಗೀಡಾದ ರೈತರ ಬ್ಯಾಂಕ್ ಖಾತೆಗೆ ನೇರವಾಗಿ ಇನ್ಪುಟ್ ಸಬ್ಸಿಡಿ ಜಮೆ ಮಾಡುವ ಸಂಬಂಧ ರೈತರ ದಾಖಲೆಗಳನ್ನು ತಂತ್ರಾಂಶದಲ್ಲಿ ದಾಖಲಿಸಲಾಗಿದೆ. ಈವರೆಗೆ ಒಟ್ಟು 2,56,491 ಸಂತ್ರಸ್ತ ರೈತರ ಬ್ಯಾಂಕ್ ಖಾತೆಗೆ 203.78 ಕೋಟಿ ರೂ. ಜಮೆ ಮಾಡಲಾಗಿದೆ ಎಂದರು.

ರಾಯಚೂರು ಜಿಲ್ಲೆಯ ಸಂತ್ರಸ್ತ ರೈತರಿಗೆ ತಲಾ 10,000 ಪಾವತಿ ಬಾಕಿಯಿದೆ. ಈ ಕುರಿತು ಅಲ್ಲಿನ ಜಿಲ್ಲಾಧಿಕಾರಿ ಜತೆ ಚರ್ಚಿಸಿದ್ದು, 2-3 ದಿನಗಳಲ್ಲಿ ಇನ್ಪುಟ್ ಸಬ್ಸಿಡಿ ಜಮೆ ಮಾಡಲು ಸೂಚಿಸಲಾಗಿದೆ. ಪ್ರವಾಹಕ್ಕೆ ಒಟ್ಟು 90 ಜನರು ಬಲಿಯಾಗಿದ್ದಾರೆ. ಮೃತರ ಕುಟುಂಬದ ಸಂಬಂಧಿಕರಿಗೆ ತಲಾ 5 ಲಕ್ಷ ರೂ. ಪರಿಹಾರ ವಿತರಿಸಿದ್ದು, ಒಟ್ಟು 4.50 ಕೋಟಿ ರೂ. ವಿನಿಯೋಗಿಸಲಾಗಿದೆ. 25 ಜಿಲ್ಲೆಗಳ 180 ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹ ಪೀಡಿತವೆಂದು ಘೋಷಿಸಿ ಸೂಕ್ತ ಕ್ರಮ ವಹಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರ್. ಅಶೋಕ್ ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.