ETV Bharat / city

ಕೋವಿಡ್​ ಹಾವಳಿ ಮಧ್ಯೆಯೂ ಈ ವರ್ಷ ಹೀಗಿತ್ತು ಬಿಬಿಎಂಪಿಯ ಕಾರ್ಯವೈಖರಿ.. - Bruhath Bengaluru mahanagara palike

ಕೊರೊನಾ, ಚುನಾವಣೆಗಳು, ಪ್ರಕೃತಿ ವಿಕೋಪಗಳನ್ನು ಸಾಲು ಸಾಲಾಗಿ ಎದುರಿಸುತ್ತಾ ಸಾಗಿದ ರಾಜಧಾನಿ ಬೆಂಗಳೂರು ಹಾಗೂ ಆಡಳಿತ ನಡೆಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2020ರ ವರ್ಷ ಸಾಕಷ್ಟು ಸವಾಲುಗಳನ್ನ ತಂದೊಡ್ಡಿತ್ತು. ಹೀಗಾಗಿ ಈ ವರ್ಷದ ಪ್ರಮುಖ ಘಟನೆಗಳು, ಬದಲಾವಣೆಗಳ ಮೇಲೊಂದು..

The BBMP's performance this year, despite the Covid pandemic
ಕೋವಿಡ್​ ಹಾವಳಿ ಮಧ್ಯೆಯೂ ಈ ವರ್ಷ ಹೇಗಿತ್ತು ಬಿಬಿಎಂಪಿಯ ಕಾರ್ಯ ವೈಖರಿ
author img

By

Published : Dec 20, 2020, 1:31 PM IST

Updated : Dec 25, 2020, 7:43 PM IST

ಬೆಂಗಳೂರು : ನಗರದ ಅಭಿವೃದ್ಧಿಗಾಗಿ ಶ್ರಮಿಸುವ ಬಿಬಿಎಂಪಿ ತನ್ನೆಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಬ್ರೇಕ್ ಹಾಕಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಹೆಚ್ಚು ಗಮನ ಕೊಡುವಂತೆ ಮಾಡಿದ ವರ್ಷವಿದು. ಈ ವರ್ಷ ಅಧಿಕಾರಗಳ ಬದಲಾವಣೆ ಜೊತೆಗೆ ಅನೇಕ ಪ್ರಮುಖ ಬದಲಾವಣೆಗಳಾಗಿವೆ. ಕೋವಿಡ್ ನಿಯಂತ್ರಿಸುವಲ್ಲಿ ತಕ್ಕಮಟ್ಟಿಗೆ ಯಶಸ್ಸು ಸಾಧಿಸಲು ಶ್ರಮಿಸಿದೆ.

ರಾಜಧಾನಿ ಬೆಂಗಳೂರು ಹಾಗೂ ಆಡಳಿತ ನಡೆಸುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ 2020ರ ವರ್ಷ ಬಹಳ ಮಹತ್ವದ್ದಾಗಿತ್ತು. ಹೀಗಾಗಿ ಈ ವರ್ಷದ ಪ್ರಮುಖ ಘಟನೆಗಳು, ಬದಲಾವಣೆಗಳ ಮೇಲೊಂದು ನೋಟ..

ಜನಪ್ರತಿನಿಧಿಗಳ ಅವಧಿ ಮುಕ್ತಾಯ : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 198 ಸದಸ್ಯರು ಐದು ವರ್ಷದ ಅಧಿಕಾರ ಅವಧಿ ಮುಗಿಸಿ ಹೊಸ ಚುನಾವಣೆಯ ನಿರೀಕ್ಷೆ ಹಾಗೂ ಸಿದ್ಧತೆಯಲ್ಲಿದ್ದರು. ಆದರೆ, ಮಾರ್ಚ್‌ನಲ್ಲಿ ಕೊರೊನಾ ವಕ್ಕರಿಸಿದ ಬಳಿಕ ನಗರದ ಚಿತ್ರಣವೇ ಬದಲಾಯಿತು. ನಗರದಲ್ಲಿ ಲಾಕ್‌ಡೌನ್ ಘೋಷಣೆಯಾಯಿತು. ಸೆಪ್ಟೆಂಬರ್ 10ಕ್ಕೆ ಐದು ವರ್ಷಗಳ ಅಧಿಕಾರ ಅವಧಿ ಮುಕ್ತಾಯಗೊಂಡಿತು.

ಕಡೆಯ ವರ್ಷ ಆಡಳಿತ ನಡೆಸಿದ ಬಿಜೆಪಿ ಮೇಯರ್ ಗೌತಮ್ ಕುಮಾರ್ ಸೇರಿದಂತೆ ಎಲ್ಲರೂ ಅಧಿಕಾರದಿಂದ ಕೆಳಗಿಳಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಬಿಬಿಎಂಪಿಗೆ ಕೂಡಲೇ ಚುನಾವಣೆ ನಡೆಸಬೇಕು. ಇಲ್ಲವಾದ್ರೆ ಈಗಿರುವ ಸದಸ್ಯರ ಅಧಿಕಾರ ಅವಧಿಯನ್ನೇ ಮುಂದುವರಿಸಬೇಕೆಂದು ಪಟ್ಟು ಹಿಡಿದ್ರೂ ಕೋವಿಡ್ ಹಿನ್ನೆಲೆ ರಾಜ್ಯ ಸರ್ಕಾರ ಚುನಾವಣೆ ನಡೆಸಲಿಲ್ಲ.

ಕಾಂಗ್ರೆಸ್ ಪಾಲಿಕೆ ಸದಸ್ಯರು ಚುನಾವಣೆ ನಡೆಸುವಂತೆ ಹೈಕೋರ್ಟ್ ಮೆಟ್ಟಿಲೇರಿದ ಹಿನ್ನೆಲೆ ಚುನಾವಣೆ ನಡೆಸಲು ಗ್ರೀನ್ ಸಿಗ್ನಲ್ ಸಿಕ್ಕರೂ ಡಿಸೆಂಬರ್ ತಿಂಗಳಲ್ಲಿ ಸುಪ್ರೀಂಕೋರ್ಟ್ ಮಧ್ಯಂತರ ತಡೆ ನೀಡಿತು.

ಪಾಲಿಕೆಯಲ್ಲಿ ಆಡಳಿತಗಾರರ ಪರ್ವ : ಈ ವರ್ಷದ ಸೆಪ್ಟೆಂಬರ್ 11ರಂದು ಬಿಬಿಎಂಪಿಯಲ್ಲಿ ಚುನಾಯಿತ ಪ್ರಧಿನಿಧಿಗಳ ಅಧಿಕಾರ ಅವಧಿ ಕೊನೆಕೊಂಡ ಹಿನ್ನೆಲೆ ಹಿರಿಯ ಐಎಎಸ್ ಅಧಿಕಾರಿ ಗೌರವ್ ಗುಪ್ತಾ ಅವರನ್ನು ಆಡಳಿತಾಧಿಕಾರಿಯಾಗಿ ಸರ್ಕಾರ ನೇಮಿಸಿತು. ಕಳೆದ ನಾಲ್ಕು ತಿಂಗಳಿಂದ ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತದ ಬದಲು ಅಧಿಕಾರಿಗಳ ಆಡಳಿತ ನಡೆಯುತ್ತಿದೆ.

ಕೋವಿಡ್ ನಿರ್ವಹಣೆ : ಅಂತಾರಾಷ್ಟ್ರೀಯ ಖ್ಯಾತಿಯ ನಗರ ಹಾಗೂ ಜನಸಂಖ್ಯೆ ಒಂದೂ ಕಾಲು ಕೋಟಿಯಷ್ಟಿರುವ ಬೆಂಗಳೂರಿನಲ್ಲಿ ಕೋವಿಡ್ ನಿರ್ವಹಣೆ ಸವಾಲಿನ ಕೆಲಸ ಆಗಿತ್ತು. ಆರಂಭದಲ್ಲಿ ಒಂದೊಂದು ಪ್ರಕರಣ ಕಂಡು ಬಂದಾಗಲೂ ಕೋವಿಡ್ ಸೋಂಕಿತರ ಟ್ರಾವೆಲ್​ ಹಿಸ್ಟರಿ, ಕಾಂಟಾಕ್ಟ್​ ಹಿಸ್ಟರಿ ತೆಗೆದು ಮನೆ ಮಂದಿಯನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಿ ಚಿಕಿತ್ಸೆ ಕೊಡಲಾಗುತ್ತಿತ್ತು. ಮನೆ ಸುತ್ತಲೂ ಕಂಟೇನ್ಮೆಂಟ್ ಮಾಡಿ 10ರಿಂದ 14 ದಿನ ಆ ಪ್ರದೇಶದ ಜನ ಹೊರಗೆ ಓಡಾಡದಂತೆ ತಡೆಯಲಾಗಿತ್ತು.

ಇದರಿಂದ ಕೊರೊನಾ ಹಬ್ಬುವುದನ್ನು ನಿಯಂತ್ರಿಸಲು ಸಾಧ್ಯವಾಗಿತ್ತು. ಪ್ರಕರಣಗಳು ಹೆಚ್ಚಾದಂತೆ ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ, ಹೋಂ ಐಸೋಲೇಷನ್‌ಗೆ ಅವಕಾಶ ಮಾಡಿಕೊಡಲಾಯಿತು. ದೇಶದ ಅತಿದೊಡ್ಡ ಹತ್ತು ಸಾವಿರ ಹಾಸಿಗೆ ಸೌಲಭ್ಯದ ಕೋವಿಡ್ ಕೇರ್ ಸೆಂಟರ್‌ನ ಬಿಐಇಸಿಯಲ್ಲಿ ತೆರೆಯಲಾಯಿತು. ಇದರಲ್ಲಿ ಹಣಕಾಸಿನ ಅವ್ಯವಹಾರ ಆರೋಪ ಕೇಳಿ ಬಂದಿದ್ದರಿಂದ ಬಿಬಿಎಂಪಿ ಆಯುಕ್ತರಾಗಿದ್ದ ಅನಿಲ್ ಕುಮಾರ್ ಅವರ ವರ್ಗಾವಣೆ ಆಗಿ ಮತ್ತೆ ಮಂಜುನಾಥ್ ಪ್ರಸಾದ್‌ ಅವರನ್ನು ಜುಲೈ 18, 2020ರಂದು ಪಾಲಿಕೆಗೆ ಮರು ನೇಮಕ ಮಾಡಲಾಯಿತು.

ಲಾಕ್‌ಡೌನ್ ಅವಧಿಯಲ್ಲಿ ಬಡವರಿಗೆ ಉಚಿತ ರೇಶನ್, ಕಾರ್ಮಿಕರಿಗೆ ಊರಿಗೆ ತೆರಳಲು ವ್ಯವಸ್ಥೆ ಮಾಡಲಾಯಿತು. ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಬೆಡ್ ಮೀಸಲಿಡುವುದು ಕಡ್ಡಾಯ ಮಾಡಲಾಯಿತು. ನಗರದ ಜನನಿಬಿಡ ಪ್ರದೇಶವಾದ ಮಾರುಕಟ್ಟೆಗಳನ್ನು ಬಂದ್ ಮಾಡಿ ಬೇರೆಡೆಗೆ ಸ್ಥಳಾಂತರಿಸಲಾಯಿತು. ಹೋಂ ಐಸೋಲೇಷನ್‌ನ ಜನರ ಸಂಖ್ಯೆ ಹೆಚ್ಚುತ್ತಿದ್ದಂತೆ ಸಿಸಿಸಿ ಕೇಂದ್ರಗಳನ್ನು ಮುಚ್ಚಲಾಯಿತು.

ಆರಂಭದಲ್ಲಿ ಹಗರಣ ಕೇಳಿ ಬಂದಿದ್ದ ಸೀಲ್‌ಡೌನ್, ಕಂಟೇನ್ಮೆಂಟ್ ಪ್ರದೇಶ ಮಾಡುವುದನ್ನು ಕೈಬಿಡಲಾಯಿತು. ದಿನವೊಂದಕ್ಕೆ 6-7 ಸಾವಿರ ಕೋವಿಡ್ ಪಾಸಿಟಿವ್ ಪ್ರಕರಣ ಕಂಡು ಬರುತ್ತಿತ್ತು. ಸದ್ಯ ಡಿಸೆಂಬರ್ ಮದ್ಯದ ಅವಧಿಯಲ್ಲಿ 300ಕ್ಕೆ ಇಳಿಕೆಯಾದಂತಾಗಿದೆ. ವೈರಾಣು ಪರೀಕ್ಷೆ ಹೆಚ್ಚಳ ಮಾಡಿ ಸೋಂಕಿತರನ್ನು ಶೀಘ್ರವೇ ಪತ್ತೆ ಮಾಡಿದ್ದು, ಕೋವಿಡ್ ನಿಯಂತ್ರಣಕ್ಕೆ ಸಹಕಾರಿಯಾಯಿತು. ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಜಾರಿ ಮಾಡಿದ ಬಿಬಿಎಂಪಿ ಆರಂಭದಲ್ಲಿದ್ದ ₹100 ದಂಡ ವಿಧಿಸಿ ನಂತರ ಸಾವಿರಕ್ಕೆ ಏರಿಸಿತ್ತು. ಅಗ ಅದು ₹250ಕ್ಕಿಳಿದಿದೆ.

ಕೋವಿಡ್ ನಡುವೆ ಆರ್​ಆರ್‌ನಗರ ಮತದಾನ : ಆರ್​ಆರ್‌ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಘೋಷಣೆಯಾದ ಬಳಿಕ ಕೋವಿಡ್ ಮುನ್ನೆಚ್ಚರಿಕೆಗಳನ್ನನುಸರಿಸಿ ನವೆಂಬರ್ 3ರಂದು ಚುನಾವಣೆ ನಡೆಸಲಾಯಿತು. ವಯಸ್ಸಾದವರಿಗೆ, ಅಂಗವಿಕಲರಿಗೆ, ಪೋಸ್ಟಲ್ ವೋಟಿಂಗ್ ಹಾಗೂ ಕೋವಿಡ್ ಸೋಂಕಿತರಿಗೆ ಕಡೆಯ ಒಂದು ಗಂಟೆಯಲ್ಲಿ ವೋಟ್ ಮಾಡಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.

ಬಿಬಿಎಂಪಿಗೆ ಪ್ರತ್ಯೇಕ ಕಾಯ್ದೆ : ವಾರ್ಡ್ ಮರುವಿಂಗಡನೆಗೆ ತಯಾರಿ : ಬಿಬಿಎಂಪಿಗೆ ಎರಡು ಮಹತ್ತರ ಬದಲಾವಣೆಗಳು ಇದೇ ವರ್ಷದಲ್ಲಾದವು. ಇತರ ಮುನ್ಸಿಪಾಲಿಟಿ ನಗರಗಳಿಗೂ ಇರುವ ಕೆಎಂಸಿ ಆ್ಯಕ್ಟ್ ಬದಲಾಗಿ ಅಂತಾರಾಷ್ಟ್ರೀಯ ಖ್ಯಾತಿಯ ನಗರ ಬೆಂಗಳೂರಿಗೆ ಬಿಬಿಎಂಪಿ ಕಾಯ್ದೆ-2020ಅನ್ನು ರಚಿಸಿ ರಾಜ್ಯ ಸರ್ಕಾರ ಡಿಸೆಂಬರ್ 12ರಂದು ಉಭಯ ಸದನಗಳಲ್ಲಿ ಅನುಮೋದನೆ ನೀಡಿತು.

ಮೇಯರ್ ಅವಧಿ ಎರಡುವರೆ ವರ್ಷಕ್ಕೆ ಏರಿಕೆ, ನಗರದ ಗಡಿಯನ್ನು ಒಂದು ಕಿ.ಮೀ ವ್ಯಾಪ್ತಿಗೆ ವಿಸ್ತರಣೆ ಹೀಗೆ ಪ್ರಮುಖ ಬದಲಾವಣೆಗಳನ್ನು ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ. ಇನ್ನು, ವಾರ್ಡ್‌ಗಳ ಮತದಾರರ ಸಂಖ್ಯೆ ಸಮಾನಗೊಳಿಸಲು ವಾರ್ಡ್ ಪುನರ್ವಿಂಗಡಣೆಗೆ ಮುಂದಾದ ಸರ್ಕಾರ, ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಸಲು ಒಪ್ಪಿಗೆ ಸೂಚಿಸಿದೆ. ಬಿಬಿಎಂಪಿ ಆಯುಕ್ತರ ನೇತೃತ್ವದ ಸಮಿತಿ ವಾರ್ಡ್ ಪುನರ್ವಿಂಗಡಣೆ ಮಾಡಲು ತಯಾರಿ‌ ನಡೆಸುತ್ತಿದೆ.

ಬಿಬಿಎಂಪಿಯಲ್ಲಿ ಅನುಷ್ಠಾನಗೊಂಡ ಪ್ರತ್ಯೇಕ ಹಸಿ ತ್ಯಾಜ್ಯದ ಟೆಂಡರ್!: ಪಾಲಿಕೆ ವ್ಯಾಪ್ತಿಯಲ್ಲಿ ಕಸದ ಟೆಂಡರ್ ಜಾರಿ ಮಾಡದೆ ವರ್ಷಗಳೇ ಕಳೆದಿದ್ದವು. ಕಾಂಗ್ರೆಸ್ ಅವಧಿಯಲ್ಲೇ ಟೆಂಡರ್ ಕರೆಯಲಾಗಿದ್ದರೂ ಬಿಜೆಪಿ ಅವಧಿಯಲ್ಲಿ ನಿಧಾನಗೊಂಡು ಬಳಿಕ ಹೈಕೋರ್ಟ್ ಚಾಟಿ ಬೀಸಿದ ಮೇಲೆ ಪ್ರತ್ಯೇಕ ಹಸಿ ಕಸದ ಟೆಂಡರ್‌ನ ಆಗಸ್ಟ್ 2ನೇ ವಾರದಲ್ಲಿ ನಗರದಲ್ಲಿ ಅನುಷ್ಠಾನಗೊಳಿಸಲಾಯಿತು. ಇದರಿಂದ ತ್ಯಾಜ್ಯ ವಿಂಗಡಣಾ ಪ್ರಮಾಣದಲ್ಲಿ ಏರಿಕೆಯಾಗಿದೆ. ಎರಡು ತ್ಯಾಜ್ಯ ವಿದ್ಯುತ್ ಘಟಕಗಳಿಗೂ ಕಾರ್ಯಾದೇಶ ನೀಡಲಾಗಿದೆ.

ಹಬ್ಬಗಳ ಸರಳ ಆಚರಣೆ : ಸಂಭ್ರಮಾಚರಣೆಗಳಿಗಿಲ್ಲ ಅವಕಾಶ : ಸಾರ್ವಜನಿಕರ ಒತ್ತಡದ ಮೇರೆಗೆ ಕೋವಿಡ್ ನಡುವೆಯೂ ಗಣೇಶೋತ್ಸವ, ದೀಪಾವಳಿ, ಕ್ರಿಸ್‌ಮಸ್ ಆಚರಣೆಗೆ ಅವಕಾಶ ನೀಡಲಾಯಿತು. ಆದರೆ, ಎಲ್ಲಾ ಹಬ್ಬಗಳನ್ನು ಸರಳವಾಗಿ ಆಚರಿಸುವಂತೆ ಕರೆಕೊಟ್ಟ ಪಾಲಿಕೆ ಗಣಪತಿಯ ದೊಡ್ಡ ಮೂರ್ತಿ ಇಟ್ಟು ಪೂಜಿಸಬಾರದು, ಪಾಲಿಕೆ ಕೆರೆಗಳಿಗೆ ವಿಸರ್ಜಿಸಬಾರದೆಂದು ನಿಯಮ ಹಾಕಿತು.

ಅಲ್ಲದೆ ದೀಪಾವಳಿಯಲ್ಲಿ ಹಸಿರು ಪಟಾಕಿ ಸಿಡಿಸಲು ಮಾತ್ರ ಅನುಮತಿ ನೀಡಲಾಯಿತು. ಹೊಸ ವರ್ಷಾಚರಣೆಗೆ ಸಾರ್ವಜನಿಕ ಆಚರಣೆ ಬ್ಯಾನ್ ಮಾಡಿ, ಪಬ್, ಬಾರ್, ರೆಸ್ಟೋರೆಟ್‌ಗಳಲ್ಲಿ, ಎಂಜಿ ರಸ್ತೆಗಳಲ್ಲಿ ಪಾರ್ಟಿ ಆಯೋಜಿಸುವುದನ್ನು ರದ್ದು ಮಾಡಿದೆ.

ಬಿಡಿಎಗೆ ಅಧ್ಯಕ್ಷರ ನೇಮಕ : ನಗರದ ಇನ್ನೊಂದು ಸ್ಥಳೀಯ ಸಂಸ್ಥೆಯಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಶಾಸಕ ಎಸ್ ಆರ್ ವಿಶ್ವನಾಥ್ ಅವರನ್ನು ನ.24ರಂದು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿತು.

ಕೋವಿಡ್ ಮಧ್ಯೆ ಮಳೆಯ ಆರ್ಭಟ : ನಗರದಲ್ಲಿ ಸೆಪ್ಟೆಂಬರ್ 9ಕ್ಕೆ ಸುರಿದ ಧಾರಾಕಾರ ಮಳೆ ಮತ್ತೆ ‌ಪ್ರವಾಹ ಭೀತಿ ಸೃಷ್ಟಿಸಿತ್ತು. ಯಲಹಂಕ, ದಾಸರಹಳ್ಳಿ, ಮಹದೇವಪುರ, ಹೆಣ್ಣೂರು ಭಾಗಗಳಲ್ಲಿ ಸುರಿದ ವಿಪರೀತ ಮಳೆ ಅನೇಕ ಮನೆಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಳಿಸಿತ್ತು. ಈ ಹಿಂದೆ ಅವಾಂತರ ಸೃಷ್ಟಿಸುತ್ತಿದ್ದ ಕಡೆಗಳಲ್ಲಿ ಈ ಬಾರಿ ಮಳೆ ನೀರುಗಾಲುವೆಯ ದುರಸ್ಥಿ ನಡೆದಿದ್ದರಿಂದ ಸಮಸ್ಯೆ ಮರುಕಳಿಸಲಿಲ್ಲ.

ಕೋವಿಡ್ ಸೋಂಕು ನಗರದ ಆರೋಗ್ಯ ವ್ಯವಸ್ಥೆಯನ್ನೇ ಅಲ್ಲೋಲಕಲ್ಲೋಲ ಮಾಡಿರುವುದರ ಜೊತೆಗೆ ಹಲವಾರು ಆಡಳಿತಾತ್ಮಕ ಬದಲಾವಣೆಗಳು, ಹೊಸ ಕಾಯ್ದೆ, ನಗರದ ವ್ಯಾಪ್ತಿ ವಿಸ್ತರಣೆ ಮುಂದಿನ ವರ್ಷಗಳಲ್ಲಿ ನಗರದ ಚಿತ್ರಣ ಬದಲಿಸಲಿದೆ.

Last Updated : Dec 25, 2020, 7:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.