ಬೆಂಗಳೂರು: ರಾಜ್ಯದಲ್ಲಿ ನೆಲೆಸಿರುವ 50 ತಬ್ಲೀಕ್ ಜಮಾತ್ನ ಸದಸ್ಯರ ಮೆಲೆ ಸಿಲಿಕಾನ್ ಸಿಟಿ ಪೊಲೀಸರು ತೀವ್ರ ಎಚ್ಚರವಹಿಸಿದ್ದು, ಕೊರೊನಾ ಭೀತಿಯಿಂದ ಅವರು ತಂಗಿರುವ ಸ್ಥಳದಲ್ಲಿಯೇ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಹೋಂ ಕ್ಯಾರಂಟೈನ್ನಲ್ಲಿರಿಸಿದ್ದಾರೆ.
19 ಜನರು ಕಿರ್ಗಿಸ್ತಾನ್, 20 ಜನರು ಇಂಡ್ಯೋನೇಷ್ಯಾ, 4 ಜನರು ದಕ್ಷಿಣಾ ಆಫ್ರಿಕಾ, 3 ಜನರು ಗ್ಯಾಂಬಿಯಾ ಹಾಗೂ ಅಮೆರಿಕ, ಯು.ಕೆ, ಪ್ರಾನ್ಸ್, ಕೀನ್ಯಾದ ತಲಾ ಒಬ್ಬರು ರಾಜ್ಯದಲ್ಲಿದ್ದು ಅವರು ತಂಗಿರುವ ಸ್ಥಳದಲ್ಲೇ ಕ್ವಾರಂಟೈನ್ಗೆ ಒಳಪಟ್ಟಿದ್ದಾರೆ. ಆಘಾತಕಾರಿ ವಿಷ್ಯ ಅಂದರೆ ಇದರಲ್ಲಿ ಕೆಲವರು ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದ ಮರ್ಕಾಜ್ಗೆ ಹಾಜರಾಗಿರುವ ಶಂಕೆ ಇದೆ.
ದೆಹಲಿಯ ನಿಜಾಮುದ್ದೀನ್ ಮರ್ಕಾಜ್ಗೆ ರಾಜ್ಯದ ಸುಮಾರು 300 ಜನರು ಭಾಗಿಯಾಗಿದ್ದರು. ಮಾರ್ಚ್ ತಿಂಗಳ ಮಧ್ಯೆದಲ್ಲಿ ನಿಜಾಮುದ್ದೀನನಲ್ಲಿ ನಡೆದಿದ್ದ ಮರ್ಕಾಜ್ನಲ್ಲಿ ಭಾಗವಹಿಸಿದ್ದವರೆಲ್ಲಾ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗ್ತಿದೆ. ಅಲ್ಲದೆ ಸ್ವಯಂ ಪ್ರೇರಣೆಯಿಂದ ವ್ಯಾಪಕ ವೈದ್ಯಕೀಯ ಪರೀಕ್ಷೆಗೆ ಬರಲು ಮನವಿಯನ್ನ ಮಾಡಿದ್ದಾರೆ.