ETV Bharat / city

ಆಡಳಿತ ಸುಧಾರಣಾ ಆಯೋಗದ ಮಧ್ಯಂತರ ವರದಿ ಸಲ್ಲಿಕೆ : ಅದರಲ್ಲಿನ ಶಿಫಾರಸುಗಳೇನು?

ಕಂದಾಯ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದ ಆಡಳಿತ ಸುಧಾರಣೆಯ ಮಧ್ಯಂತರ ವರದಿಯನ್ನು ಟಿ ಎಂ ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಇಂದು ಸಿಎಂ ಬಿ ಎಸ್​ ಯಡಿಯೂರಪ್ಪನವರಿಗೆ ಸಲ್ಲಿಕೆ ಮಾಡಿದೆ..

Administrative Reform Commission
ಆಡಳಿತ ಸುಧಾರಣಾ ಆಯೋಗದ ಮಧ್ಯಂತರ ವರದಿ ಸಲ್ಲಿಕೆ
author img

By

Published : Jul 3, 2021, 3:31 PM IST

ಬೆಂಗಳೂರು : ಟಿ ಎಂ ವಿಜಯಭಾಸ್ಕರ್ ನೇತೃತ್ವದ ಕರ್ನಾಟಕ ಆಡಳಿತ ಸುಧಾರಣಾ ಆಯೋಗ ಸಿಎಂ ಬಿ ಎಸ್​ ಯಡಿಯೂರಪ್ಪನವರಿಗೆ ಮಧ್ಯಂತರ ವರದಿ ನೀಡಿದ್ದು, ಆಡಳಿತ ಸುಧಾರಣೆ ಸಂಬಂಧ ಹಲವು ಶಿಫಾರಸು ಮಾಡಿದೆ.

ಮಧ್ಯಂತರ ವರದಿಯಲ್ಲಿ ಮೂರು ಇಲಾಖೆಗಳಾದ ಕಂದಾಯ, ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಸಾರಿಗೆ ಇಲಾಖೆಗೆ ಸಂಬಂಧಿಸಿದ ಆಡಳಿತ ಸುಧಾರಣೆಯ ಶಿಫಾರಸು ಮಾಡಿದೆ. ಆಯೋಗ ಹೋಬಳಿ, ತಾಲೂಕು, ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಕೆಲಸ ಮಾಡುವ ಹಾಗೂ ನಾಗರಿಕರ ಮಧ್ಯೆ ಕಾರ್ಯನಿರ್ವಹಿಸುವ ಸಿಬ್ಬಂದಿಯೊಂದಿಗೆ ಹಲವಾರು ಗುಂಪು ಚರ್ಚೆಗಳನ್ನು ನಡೆಸಿದೆ. 57 ಐಎಎಸ್, ಕೆಎಎಸ್ ಅಧಿಕಾರಿಗಳು ಮತ್ತು ಪ್ರೊಬೇಷನರಿ ಅಧಿಕಾರಿಗಳ ಗುಂಪು ಕ್ಷೇತ್ರ ಸಮೀಕ್ಷೆ ನಡೆಸಿ ವರದಿ ತಯಾರು ಮಾಡಿದೆ.

ಕಂದಾಯ ಇಲಾಖೆಗೆ ಸಂಬಂಧಿಸಿದ ಶಿಫಾರಸುಗಳು :

  • ಎಲ್ಲಾ ಇಲಾಖೆಗಳು ನಾಗರಿಕರಿಗೆ ಒದಗಿಸುವ ಸುಮಾರು 800 ಆನ್‌ಲೈನ್ ಸೇವೆಗಳಿಗೆ ಅಟಲ್‌ ಜೀ ಜನಸ್ನೇಹಿ ಕೇಂದ್ರಗಳು ಏಕ ಗವಾಕ್ಷಿ ಏಜೆನ್ಸಿಯಾಗಬೇಕು. ಈ ಎಲ್ಲಾ 800 ಸೇವೆಗಳು ಬೆಂಗಳೂರು ಒನ್, ಕರ್ನಾಟಕ ಒನ್‌, ಗ್ರಾಮ ಪಂಚಾಯತ್ ಬಾಪೂಜಿ ಸೇವಾ ಕೇಂದ್ರಗಳು ಮತ್ತು ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ಲಭ್ಯವಾಗಬೇಕು.
  • ಎಲ್ಲಾ ಸಕಾಲ ಅರ್ಜಿಗಳಲ್ಲಿ ಶೇ.81ರಷ್ಟು ಅರ್ಜಿಗಳು ಆನ್​ಲೈನ್ ಮೂಲಕ ಸಲ್ಲಿಕೆಯಾಗುತ್ತಿವೆ. ಎಲ್ಲಾ ಇಲಾಖೆಗಳ ಸಕಾಲ ಮತ್ತು ಸಕಾಲವಲ್ಲದ ಸುಮಾರು 800 ಇ-ಸೇವೆಗಳಿಗೆ ಸೇವಾಸಿಂಧು ಏಕಮಾತ್ರ ವೇದಿಕೆಯಲ್ಲಿ ದೊರೆಯುವಂತಾಗಬೇಕು.
  • ಕರ್ನಾಟಕ ಸರ್ಕಾರದ ಎಲ್ಲಾ ಇ-ಪೇಟೆಗಳನ್ನು ಮೊಬೈಲ್ ಮೂಲಕ ಒದಗಿಸಲು, ಕರ್ನಾಟಕ ಮೊಬೈಲ್ ಒನ್ ಆ್ಯಪ್‌ನ ಇತ್ತೀಚಿನ ತಂತ್ರಜ್ಞಾನವನ್ನು ಬಳಸಿಕೊಂಡು ಪುನರಾಭಿವೃದ್ಧಿ ಮಾಡಬೇಕು.
  • ಎಜೆಎಸ್‌ಕೆ, ಭೂಮಿ, ಎಸ್‌ಎಸ್‌ಪಿ, ಐಜಿಎಸ್‌ಎಲ್‌ ಮತ್ತು ಎಸ್‌ಎಸ್‌ಎಲ್‌ಆರ್ ಸೇವಾ ಪೋರ್ಟಲ್‌ಗಳು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಮತ್ತು ಆನ್‌ಲೈನ್‌ ವ್ಯಾಲೆಟ್ ವ್ಯವಸ್ಥೆಯನ್ನು ಬಳಸಿ ಅರ್ಜಿ ಶುಲ್ಕವನ್ನು ಸಂಗ್ರಹಿಸಲು ಯುಪಿಐ/ಕ್ಯೂಆರ್ ಕೋಡ್ ಪಾವತಿ ವಿಧಾನವನ್ನು ಹೊಂದಿರಬೇಕು.
  • ಕಂದಾಯ ಇಲಾಖೆಯಿಂದ ನೀಡಲಾಗುವ ಕೆಲವು ಪ್ರಮಾಣ ಪತ್ರಗಳು ಅನುಪಯುಕ್ತವಾಗಿದೆ. ಜನಸಂಖ್ಯಾ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರ, ಬೆಳೆ ಪ್ರಮಾಣ ಪತ್ರ, ಕೃಷಿಕ ಪ್ರಮಾಣ ಪತ್ರಗಳನ್ನು ತೆಗೆದು ಹಾಕಿ ಮತ್ತು ಪರ್ಯಾಯಗಳನ್ನು ಸೂಚಿಸಿ ಸರ್ಕಾರಿ ಆದೇಶ ಹೊರಡಿಸಬೇಕು.
  • ಭೂಸ್ವಾಧಿನ ನಿರ್ವಹಣಾ ಸಾಫ್ಟ್‌ವೇರ್ ವ್ಯವಸ್ಥೆಯನ್ನು ಕಂದಾಯ ಇಲಾಖೆ ತ್ವರಿತವಾಗಿ ಅಭಿವೃದ್ಧಿಪಡಿಸಬೇಕು. ಸೂಕ್ತ ಮಾರ್ಪಾಡುಗಳನ್ನು ಮಾಡುವ ಮೂಲಕ ಕೆಐಎಡಿಬಿ, ಬಿಡಿಎ, ಎನ್‌ಹೆಚ್‌ಐ ಸೇರಿದಂತೆ ವಿವಿಧ ಭೂ ಸ್ವಾಧೀನಪಡಿಸಿಕೊಳ್ಳುವ ಸಂಸ್ಥೆಗಳಿಂದ ಬಳಸುವುದನ್ನು ಕಡ್ಡಾಯಗೊಳಿಸಲು ಸೂಕ್ತ ಸರ್ಕಾರಿ ಆದೇಶ ಹೊರಡಿಸಬೇಕು.
  • ಅಡಮಾನವನ್ನು ನೋಂದಾಯಿಸಲು, ಭೂಮಿ ಅಥವಾ ನಿವೇಶನಗಳ ಅಡಮಾನ ಬಿಡುಗಡೆಗೊಳಿಸಲು ಮತ್ತು ಎನ್‌ಕಂಬೈನ್ಸ್ ನೀಡುವ ವಿಧಾನವನ್ನು ಸರಳೀಕರಿಸಬೇಕು ಮತ್ತು ಸಂಪೂರ್ಣವಾಗಿ ಆನ್‌ಲೈನ್‌ನಲ್ಲಿ ಮಾಡಬೇಕು.
  • ಕಾವೇರಿ-2 ಮತ್ತು ಆನ್‌ಲೈನ್ ಸೇವೆಯನ್ನು (ಕೆಪಿಎಸ್-2) ಅದ್ಯತೆಯ ಮೇರೆಗೆ ಅಭಿವೃದ್ಧಿಪಡಿಸಬೇಕು. ಇದು ಸಬ್ ರಿಜಿಸ್ಟ್ರಾರ್ ಕಚೇರಿಗೆ ಬರುವ ಮೊದಲು ಯಾವುದೇ ಸಮಸ್ಯೆಯಿಲ್ಲದೇ ನೋಂದಣಿ ಪೂರ್ವ ದತ್ತಾಂಶವನ್ನು ನಮೂದು ಮಾಡಲು ಅನುವು ಮಾಡಿ ಕೊಡುತ್ತದೆ ಮತ್ತು ಸಂಬಂಧಪಟ್ಟವರಿಗೆ ಹೆಚ್ಚಿನ ಸಮಯವನ್ನು ಉಳಿಸುತ್ತದೆ.
  • ಎಜೆಎಸ್‌ಕೆ, ತಹಶೀಲ್ದಾರ್, ಎಡಿಎಲ್‌ಆರ್, ಸಬ್ ರಿಜಿಸ್ಟ್ರಾರ್‌ ಕಚೇರಿಗಳಿಂದ ಮೇಲ್ಪಟ್ಟ ಎಲ್ಲಾ ಕಚೇರಿಗಳಿಗೆ ಇ-ಆಫೀಸ್ ಕಡ್ಡಾಯಗೊಳಿಸಬೇಕು.
  • ಗ್ರಾಮ ಲೆಕ್ಕಾಧಿಕಾರಿಗಳನ್ನು ಗ್ರಾಮ ಅಧಿಕಾರಿಗಳಾಗಿ ಮರು ಪದನಾಮಕಾರಣ ಮಾಡಬಹುದು. ಗ್ರಾಮ ಲೆಕ್ಕಾಧಿಕಾರಿಗಳ ಕಾರ್ಯವ್ಯಾಪ್ತಿ ಗ್ರಾಮೀಣ ಪ್ರದೇಶಗಳಲ್ಲಿನ ಗ್ರಾಮ ಪಂಚಾಯತ್ ಕಾರ್ಯವ್ಯಾಪ್ತಿಯೊಂದಿಗೆ ಸಮನ್ವಯಗೊಳ್ಳಬೇಕು.
  • ಎಲ್ಲಾ ನಾಲ್ಕು ಪ್ರಾದೇಶಿಕ ಆಯುಕ್ತರ ಕಚೇರಿಗಳನ್ನು ರದ್ದುಪಡಿಸಬಹುದು ಮತ್ತು ರಾಜ್ಯ ಮಟ್ಟದಲ್ಲಿ ಕಂದಾಯ ಆಯುಕ್ತಾಲಯವನ್ನು ಸ್ಥಾಪಿಸಬಹುದು.

ಆಹಾರ ಇಲಾಖೆಗೆ ಸಂಬಂಧಿಸಿದ ಶಿಫಾರಸು :

  • ಪಡಿತರ ಕಾರ್ಡ್ ಹೊಂದಿರುವವರು ಇಚ್ಛಿಸಿದಲ್ಲಿ ಮನೆ ಬಾಗಿಲಿಗೆ ಪಡಿತರ ಪಡೆದುಕೊಳ್ಳಲು, ಪಡಿತರ ಕಾರ್ಡುದಾರರರು ಮತ್ತು ನ್ಯಾಯಬೆಲೆ ಅಂಗಡಿಯವರು ಪರಸ್ಪರ ಒಪ್ಪಿದ ಶುಲ್ಕವನ್ನು ಪಾವತಿಸಿ, ಪಡಿತರ ಪಡೆದುಕೊಳ್ಳಲು ಅನುಮತಿಸಬಹುದು.
  • ಜನನ ಮತ್ತು ಮರಣ ನೋಂದಣಿ ಪ್ರಕ್ರಿಯೆಯನ್ನು ಪಡಿತರ ಚೀಟಿ ಡೇಟಾಬೇಸ್‌ನೊಂದಿಗೆ ಸಂಯೋಜಿಸಬೇಕು. ಅವನ ಅಥವಾ ಮರಣದ ನೋಂದಣಿಯ ನಂತರ ಈತರ ಚೀಟಿ ಕುಟುಂಬ ಸದಸ್ಯರ ಪಟ್ಟಿಯು ಸ್ವಯಂಚಾಲಿತವಾಗಿ ನವೀಕರಣವಾಗುವಂತಾಗಬೇಕು.
  • ರಾಜ್ಯದಿಂದ ಸರ್ಕಾರ ಅನುಮೋದಿತ ಪರೀಕ್ಷಾ ಕೇಂದ್ರಗಳನ್ನು (GATC Government Approved Test Centres) ಗುರುತಿಸಬೇಕು.
  • ಕಾನೂನು ಮಾಪನಶಾಸ್ತ್ರ ಇಲಾಖೆ ನೀಡುವ ಪರವಾನಿಗೆಗಳನ್ನು 3-5 ವರ್ಷಗಳವರೆಗೆ ಸ್ವಯಂಚಾಲಿತ ಆನ್‌ಲೈನ್‌ ಮೂಲಕ ನವೀಕರಣ/ತಿದ್ದುಪಡಿ ವ್ಯವಸ್ಥೆಯನ್ನು ಜಾರಿಮಾಡಬೇಕು.

ಸಾರಿಗೆ ಇಲಾಖೆಯ ಪ್ರಮುಖ ಶಿಫಾರಸುಗಳು :

  • ಪ್ರಸ್ತುತ ಆರ್‌ಟಿಒ ಸೇವೆಗಳಿಗೆ ನಾಗರಿಕರು ಕಾಗದದ ಅರ್ಜಿ ಮತ್ತು ಆನ್‌ಲೈನ್ ಅರ್ಜಿ ಎರಡರಲ್ಲೂ ಸಲ್ಲಿಸಲಾಗುತ್ತಿದೆ. ನಾಗರಿರೀಕರಿಗೆ ಎಲ್ಲಾ ಆರ್‌ಟಿಒ ಸೇವೆಗಳನ್ನು ಕಾಗದ ರಹಿತವಾಗಿ ಮಾಡಬೇಕು.
  • ಯಾವುದೇ ಉಪ ನೋಂದಣಾಧಿಕಾರಿಗಳ ಕಚೇರಿಗಳಲ್ಲಿ ದಾಖಲೆಗಳನ್ನು ನೋಂದಾಯಿಸಲು ಅವಕಾಶವಿರುವಂತೆ, ಸುಲಭವಾಗಿ ಸೇವೆಗಳನ್ನು ಪಡೆಯಲು ನಾಗರಿಕರು ಬೆಂಗಳೂರು ನಗರದ ಯಾವುದೇ ಆರ್‌ಟಿಒ ಕಚೇರಿಯನ್ನು ಆಯ್ಕೆಮಾಡಿಕೊಳ್ಳುವಂತಿರಬೇಕು.
  • ಹೆಚ್ಚಿನ ದಕ್ಷತೆಗಾಗಿ ಇ-ಆಫೀಸ್ ವ್ಯವಸ್ಥೆಯನ್ನು ಎಲ್ಲಾ ಆರ್‌ಟಿಒ ಕಚೇರಿಗಳು ಮತ್ತು ಸಾರಿಗೆ ಇಲಾಖೆ ಕಚೇರಿಗಳು ಬಳಸಬೇಕು.
  • ಸಾರಿಗೆ ಆಯುಕ್ತರು ವಶಪಡಿಸಿಕೊಂಡ ವಾಹನಗಳಿಗೆ ನಿಗದಿತ ಸಮಯದೊಳಗೆ ದಂಡವನ್ನು ಪಾವತಿಸದಿದ್ದರೆ, ನ್ಯಾಯಾಲಯದ ಆದೇಶ ಕಾಯುವ ಅಗತ್ಯವಿಲ್ಲದೆ ಇ-ಹರಾಜು ಹಾಕಲು ಸಾರಿಗೆ ಇಲಾಖೆಗೆ ಅನುಮತಿ ನೀಡಲು ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ಸೂಕ್ತ ತಿದ್ದುಪಡಿಯನ್ನು ಪ್ರಸ್ತಾಪಿಸಬಹುದು.
  • ನಗದು ಪಾವತಿಗಾಗಿ ಆರ್‌ಟಿಒ ಕಚೇರಿಗಳಲ್ಲಿ ತೆಗೆದುಕೊಳ್ಳುವ ಸಮಯ ಕಡಿಮೆ ಮಾಡಲು, ನಗದು ವ್ಯವಹಾರ ಕಡಿಮೆ ಮಾಡಲು, ಕ್ಯೂಆರ್ ಕೋಡ್ ಆಧಾರಿತ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಪಾವತಿ ಯಂತ್ರಗಳನ್ನು ಸ್ಥಾಪಿಸಬಹುದು.
  • ಐಟಿ ನಿರ್ದೇಶಕರ ಎರಡು ಹುದ್ದೆಗಳಿವೆ (ಒಂದು ಕೆಎಸ್‌ಆರ್‌ಟಿಸಿಯಲ್ಲಿ ಮತ್ತೊಂದು ಬಿಎಂಟಿಸಿಯಲ್ಲಿ) ಒಂದು ಹುದ್ದೆಯನ್ನು ರದ್ದುಪಡಿಸಿ ಎರಡೂ ಐಟಿ ವ್ಯವಸ್ಥೆಗಳ ಉಸ್ತುವಾರಿಗೆ ಒಬ್ಬರನ್ನೇ ನಿರ್ದೇಶಕರನ್ನಾಗಿ ಮಾಡಬಹುದು.
  • ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಡಿಜಿಟಲೀಕರಣಗೊಳಿಸುವ ಯೋಜನೆಯನ್ನು ಹೆಚ್ಚಿನ ಹಳೆಯ ದಾಖಲೆಗಳನ್ನು ಹೊಂದಿರುವ ಆರ್‌ಟಿಒ ಕಚೇರಿಗಳಿಂದ ಪ್ರಾರಂಭಿಸಿ, ಎಲ್ಲಾ ಆರ್‌ಟಿಒ ಕಚೇರಿಗಳಲ್ಲಿಯೂ ಕೆಲವು ವರ್ಷಗಳಲ್ಲಿ ಅನುಷ್ಟಾನಗೊಳಿಸಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.