ETV Bharat / city

ಷೇರು ವಹಿವಾಟಿನ ಸ್ಟಾರ್ಟ್‌ಅಪ್‌ ಬೆಂಗಳೂರು Havenspire: ಮೆಕ್ಯಾನಿಕಲ್‌ ಎಂಜಿನಿಯರ್ಸ್​ ವಿನೂತನ ಸಾಧನೆ - ಸ್ಟಾರ್ಟ್‌ಅಪ್‌ ಸಿಲಿಕಾನ್ ಸಿಟಿಯ ಹೆವೆನ್‌ಸ್ಪೈರ್‌ ಯಶೋಗಾಥೆ

ವಿಐಟಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್ ಓದುತ್ತಿರುವಾಗಲೇ ಷೇರುಪೇಟೆಯ ವಹಿವಾಟಿನ ಆಸಕ್ತಿ ಹೊಂದಿದ್ದ ಸಮಾನ ಮನಸ್ಕ ಗೆಳೆಯರಿಬ್ಬರು ಸೇರಿಕೊಂಡು, ಷೇರುಪೇಟೆಯ ಬಗ್ಗೆ ಆನ್‌ಲೈನ್‌ ತರಬೇತಿ (e-learning) ನೀಡುವ ಅತಿದೊಡ್ಡ ನವೋದ್ಯಮವನ್ನು ಸಿಲಿಕಾನ್ ಸಿಟಿಯಲ್ಲಿ ಸ್ಥಾಪಿಸಿದ್ದಾರೆ.

Havenspire Success
ಮೆಕ್ಯಾನಿಕಲ್‌ ಎಂಜಿನಿಯರ್ಸ್​ನ ವಿನೂತನ ಸಾಧನೆ
author img

By

Published : Jul 8, 2021, 2:12 PM IST

Updated : Jul 11, 2021, 10:48 PM IST

ಬೆಂಗಳೂರು: ಸುಮಾರು ಇಪ್ಪತ್ತರ ವಯಸ್ಸಿನವರು ಉತ್ತಮ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡು ಬದುಕು ಕಟ್ಟಿಕೊಳ್ಳುವ ಕನಸು ಕಾಣುತ್ತಿದ್ದರೆ, ನಗರದ ಯುವಕರಿಬ್ಬರು ಉಳಿದವರಿಗಿಂತ ಭಿನ್ನವಾಗಿ ಆಲೋಚಿಸಿ ಷೇರುಪೇಟೆಯ ವಹಿವಾಟಿನಿಂದಲೇ ಹಣ ಗಳಿಸಲು ಹಾಗೂ ಇತರರಿಗೂ ತರಬೇತಿ ನೀಡಿ ಆರ್ಥಿಕವಾಗಿ ಸಬಲರನ್ನಾಗಿರುವ ಉದ್ದೇಶದಿಂದ ಹೆವೆನ್‌ಸ್ಪೈರ್‌ (Havenspire) ನವೋದ್ಯಮ ಸ್ಥಾಪಿಸಿ, ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದ್ದಾರೆ.

ವಿಐಟಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್ ಓದುತ್ತಿರುವಾಗಲೇ ಷೇರುಪೇಟೆಯ ವಹಿವಾಟಿನ ಆಸಕ್ತಿ ಹೊಂದಿದ್ದ ಸಮಾನ ಮನಸ್ಕ ಗೆಳೆಯರಿಬ್ಬರು ಸೇರಿಕೊಂಡು, ಷೇರುಪೇಟೆಯ ಬಗ್ಗೆ ಆನ್‌ಲೈನ್‌ ತರಬೇತಿ (e-learning) ನೀಡುವ ಅತಿದೊಡ್ಡ ನವೋದ್ಯಮವನ್ನು ಸಿಲಿಕಾನ್ ಸಿಟಿಯಲ್ಲಿ ಸ್ಥಾಪಿಸಿದ್ದಾರೆ. ಷೇರುಪೇಟೆಯ ವಹಿವಾಟಿನ ಬಗ್ಗೆ ಜನಸಾಮಾನ್ಯರಲ್ಲಿ ಇರುವ ಆತಂಕ ದೂರ ಮಾಡಿ, ಬಂಡವಾಳ ಮಾರುಕಟ್ಟೆಯ ವಹಿವಾಟಿನ ಪ್ರಯೋಜನಗಳನ್ನು ಮನವರಿಕೆ ಮಾಡಿಕೊಟ್ಟು, ಷೇರು ವಹಿವಾಟು ನಡೆಸಲು ಹೆವೆನ್‌ಸ್ಪೈರ್‌ ನಗರದಿಂದ ಆನ್‌ಲೈನ್‌ನಲ್ಲಿಯೇ ತರಬೇತಿ ನೀಡುತ್ತಿದೆ.

ಮೆಕ್ಯಾನಿಕಲ್‌ ಎಂಜಿನಿಯರ್ಸ್​ ವಿನೂತನ ಸಾಧನೆ

ಕಾಲೇಜ್‌ನಲ್ಲಿ ಓದುತ್ತಿರುವ ಬಹುತೇಕರು, ತಮ್ಮ ಪಾಕೆಟ್‌ ಮನಿ ಅಥವಾ ದೂರದ ಊರಿನಿಂದ ತಮ್ಮ ದಿನನಿತ್ಯದ ಖರ್ಚು ವೆಚ್ಚಗಳಿಗಾಗಿ ಪಾಲಕರು ಕಳಿಸುವ ಹಣವನ್ನು ತಿಂಗಳು ಪೂರ್ಣವಾಗುವ ಮೊದಲೇ ಖಾಲಿ ಮಾಡಿ ಸ್ನೇಹಿತರಲ್ಲಿ ಸಾಲ ಸೋಲ ಮಾಡುವುದು ಸಾಮಾನ್ಯ ಸಂಗತಿಯಾಗಿರುತ್ತದೆ. ಈ ಮಧ್ಯೆ ತಮ್ಮ ಬಳಿ ಇರುವ ಹಣದಲ್ಲಿ ಅಷ್ಟಿಷ್ಟು ಉಳಿಸುವ ಪ್ರವೃತ್ತಿ ರೂಢಿಸಿಕೊಂಡವರ ಸಂಖ್ಯೆ ತುಂಬಾ ಕಡಿಮೆ. ತಿಂಗಳ ಹಣದಲ್ಲಿಯೇ ಬಹುಪಾಲನ್ನು ಉಳಿಸಿ, ಅದನ್ನು ವೃದ್ಧಿಸುವ ಕನಸು ಕಾಣುವವರ ಸಂಖ್ಯೆ ಅತಿ ವಿರಳ.

ಈ ತರಹದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ಓದುತ್ತಿದ್ದ ರಿತ್ವಿಕ್‌ ಹಾಗೂ ಆಕಾಶ್​​​​ ಜೈಯನ್​, ತಮ್ಮ 7,000 ರೂ. ಪಾಕೆಟ್‌ ಮನಿಯಲ್ಲಿ ಬಹುಪಾಲನ್ನು ಉಳಿಸಿ ಷೇರು ವಹಿವಾಟಿನಲ್ಲಿ ಹಣ ಗಳಿಕೆಯ ಮಾರ್ಗಗಳನ್ನು ಕಂಡುಕೊಂಡಿದ್ದರು. ಕಾಲೇಜು ಓದುವ ಹಂತದಲ್ಲಿ ಬಹುತೇಕರು ಆಕರ್ಷಕ ಸಂಬಳದ ಉದ್ಯೋಗ ಗಿಟ್ಟಿಸಲು ಶ್ರಮ ವಹಿಸುತ್ತಾರೆ. ಆದರೆ, ಈ ಇಬ್ಬರು ಯುವಕರು ಓದಿನ ಜತೆಗೆ ಷೇರು ಮಾರುಕಟ್ಟೆಯ ಗೋಜಲುಗಳನ್ನು ಬಿಡಿಸುವ ಬಗ್ಗೆ ತಲೆಬಿಸಿ ಮಾಡಿಕೊಂಡು ಹಣ ಗಳಿಕೆಯ ಮಾರ್ಗೋಪಾಯಗಳ ಹುಡುಕಾಟದಲ್ಲಿದ್ದರು.

ಇದೀಗ ಹೆವೆನ್‌ಸ್ಪೈರ್‌ ನವೋದ್ಯಮ ಸ್ಥಾಪಿಸಿ, ತಮ್ಮದು ಇತರರಿಗಿಂತ ಭಿನ್ನ ವ್ಯಕ್ತಿತ್ವ ಎನ್ನುವುದನ್ನು ಸಾಬೀತುಪಡಿಸಿದ್ದಾರೆ. ಕೂಡಿಟ್ಟ ಹಣದಿಂದ 6 ತಿಂಗಳಲ್ಲಿ 7 ಲಕ್ಷ ರೂ. ಗಳಿಸಿದ್ದು, ಒಂದೇ ದಿನದಲ್ಲಿ 1.20 ರೂ. ಲಕ್ಷ ಕಳೆದುಕೊಂಡ ನಿದರ್ಶನವೂ ಇದೆ ಎನ್ನುತ್ತಾರೆ ರಿತ್ವಿಕ್, ಆಕಾಶ್​​​​ ಜೈಯನ್​.

ಇದನ್ನೂ ಓದಿ: ಅಸಭ್ಯವಾಗಿ ವರ್ತಿಸಿದ ಮದ್ಯಪಾನಿಗೆ ನಾರಿಮಣಿಯರಿಂದ ಚಪ್ಪಲಿಯೇಟು

Last Updated : Jul 11, 2021, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.