ಬೆಂಗಳೂರು: ಮಾನಸಿಕ ಆರೋಗ್ಯದ ಸಮಸ್ಯೆಗೋಸ್ಕರ ನಿಮ್ಹಾನ್ಸ್ನಲ್ಲಿ ನೋಂದಾಯಿತರಾಗಿರುವ ವ್ಯಕ್ತಿಗಳಿಗಾಗಿ, ದೂರವಾಣಿ ಸೇವೆಯೊಂದನ್ನು ನಿಮ್ಹಾನ್ಸ್ ಸಂಸ್ಥೆ ಆರಂಭಿಸಿದೆ.
ಕೋವಿಡ್ ಮಹಾಮಾರಿಯಿಂದ ಅಥವಾ ಲಾಕ್ಡೌನ್ ಕಾರಣಕ್ಕೆ ಬಹಳಷ್ಟು ವ್ಯಕ್ತಿಗಳು ನಿಮ್ಹಾನ್ಸ್ಅಥವಾ ಬೇರೆ ಆರೋಗ್ಯ ಸೌಲಭ್ಯಗಳಿಗೆ ಪ್ರಯಾಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಹಾಗೇ ಆಗದೇ ಇದ್ದಲ್ಲಿ ಅವರಿಗಾಗಿ ದೂರವಾಣಿ ಸಂಖ್ಯೆಯನ್ನ ಬಿಡುಗಡೆ ಮಾಡಿದೆ. ಜನರು ಕರೆಮಾಡಿ ಸೂಕ್ತ ಸಲಹೆಯನ್ನು ಪಡೆಯಬಹುದು. ಈ ಸೇವೆಯು ಈಗಾಗಲೇ ನಿಮ್ಹಾನ್ಸ್ ನಲ್ಲಿ ನೋಂದಾಯಿತರಾದ ಮಾನಸಿಕ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮಾತ್ರ ಲಭ್ಯವಿರಲಿದೆ.
ದೂರವಾಣಿ ಸೇವೆಯ ಸಂಖ್ಯೆ-080-46801771
ಸಮಯ: ಕೆಲಸದ ದಿನಗಳಲ್ಲಿ ಮಾತ್ರ ಬೆಳಗ್ಗೆ 10 ರಿಂದ ಮಧ್ಯಾಹ್ನ 4 ಗಂಟೆಯವರೆಗೆ