ETV Bharat / city

ಜ್ಯುವೆಲ್ಲರಿ ಮೇಕಿಂಗ್ ಶಾಪ್ ನುಗ್ಗಿ ಚಿನ್ನದ ಬದಲಿಗೆ‌ ಮಣ್ಣು ಕದ್ದ ಖದೀಮರು! - ಚಿನ್ನದ ಬದಲಿಗೆ‌ ಮಣ್ಣು ಕದ್ದ ಖದೀಮರು

ಕೊರೊನಾ ಲಾಕ್​​ಡೌನ್ ನಡುವೆಯೂ ಮಾಸ್ಕ್​​​​ ಧರಿಸಿ ಜ್ಯುವೆಲ್ಲರಿ ಮಳಿಗೆ ಬೀಗ‌ ಮುರಿದು ಒಳನುಗ್ಗಿದ ಖದೀಮರು, ಕಬ್ಬಿಣ್ಣದ ಪೆಟ್ಟಿಗೆಯಲ್ಲಿದ್ದ ಮಣ್ಣು‌ ಕದ್ದಿರುವ ಘಟನೆ ಕೆ.ಆರ್.ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ..

Soil theft
ಮಣ್ಣು ಕದ್ದ ಖದೀಮರು
author img

By

Published : Jul 25, 2020, 3:43 PM IST

ಬೆಂಗಳೂರು : ಕೊರೊನಾ ಲಾಕ್​​ಡೌನ್ ನಡುವೆಯೂ ಮಾಸ್ಕ್​​​​ ಧರಿಸಿ ಜ್ಯುವೆಲ್ಲರಿ ಮಳಿಗೆ ಬೀಗ‌ ಮುರಿದು ಒಳನುಗ್ಗಿದ ಖದೀಮರು ಕಬ್ಬಿಣದ ಪೆಟ್ಟಿಗೆಯಲ್ಲಿದ್ದ ಮಣ್ಣು‌ ಕದ್ದೊಯ್ದಿದ್ದಾರೆ. ಮಣ್ಣು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಆರ್‌ಮಾರುಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಅಂಚೆಪೇಟೆ ಬಳಿ ಚಿನ್ನ ತಯಾರಿಸುವ ಅಂಗಡಿಯಲ್ಲಿ ಜುಲೈ 17ರಂದು ಕಳ್ಳತನ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಕೆಆರ್‌ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲಾಕ್​​​ಡೌನ್ ಅವಧಿಯಲ್ಲಿ‌ ಈ ಖದೀಮರು ನಗರದ ವಿವಿಧ ಕಡೆ ಕಳ್ಳತನ‌ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಮಣ್ಣು ಕದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಮಳಿಗೆ ಮಾಲೀಕ ಸೋಮಶೇಖರ್ ಎಂದಿನಂತೆ ಅಂದು ಬೀಗ ಹಾಕಿ‌ ಮನೆಗೆ ಹೋಗಿದ್ದಾರೆ. ಅದೇ ದಿನ ರಾತ್ರಿ ಬಂದ ಆರೇಳು ಮಂದಿ ಖದೀಮರು, ಶೆಟರ್ ಬೀಗ ಮುರಿದು ಅಂಗಡಿಯಲ್ಲಿದ್ದ ಎರಡು ಚೀಲವಾಗುವಷ್ಟು ಮಣ್ಣು ಕದ್ದೊಯ್ದಿದ್ದಾರೆ. ಜೊತೆಗೆ ₹20 ಸಾವಿರ ನಗದು, ಹವಳ ಸರಗಳು ಸೇರಿ ವಿವಿಧ ವಸ್ತುಗಳನ್ನು ದೋಚಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.