ETV Bharat / city

ಸ್ವಾಮೀಜಿಗಳಿಗೆ ಕವರ್ ನೀಡಿ, ಬ್ಲಾಕ್ ಮೇಲ್ ಮಾಡಿದ್ದು ಯಾರು: ಸಿದ್ದರಾಮಯ್ಯ ಕಿಡಿ

ಲಿಂಗಾಯತ - ವೀರಶೈವ ಮಠಗಳ ಬಗ್ಗೆ ನನಗೆ ವಿಶೇಷ ಗೌರವ ಇದೆ. ನಾನೆಂದೂ ಸ್ವಾಮೀಜಿಗಳಿಗೆ ಕವರ್ ನೀಡಿ ಅವರನ್ನು ಅಪಮಾನಿಸಿಲ್ಲ. ಸ್ವಾಮೀಜಿಗಳನ್ನು ಮನೆಗೆ ಕರೆಸಿ ಕವರ್ ಕಾಣಿಕೆ ನೀಡಿ,‌ ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟು ಸ್ವಾಮೀಜಿಗಳನ್ನು ಬ್ಲಾಕ್ ಮೇಲ್ ಮಾಡಿದ್ದು ಯಾರು ಎಂದು ಬಿಜೆಪಿ ನಾಯಕರು ಮೊದಲು ಹೇಳಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ವಿರುದ್ದ ಗುಡುಗಿದ್ದಾರೆ.

siddaramaiah-tweet-against-bjp
ಸಿದ್ದರಾಮಯ್ಯ
author img

By

Published : Oct 26, 2021, 4:44 PM IST

ಬೆಂಗಳೂರು: ಸ್ವಾಮೀಜಿಗಳನ್ನು ಮನೆಗೆ ಕರೆಸಿ ಕೆಲವರಿಗೆ ಕವರ್ ಕಾಣಿಕೆ ನೀಡಿ,‌ ಅದನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟು ಸ್ವಾಮೀಜಿಗಳನ್ನು ಬ್ಲಾಕ್ ಮೇಲ್ ಮಾಡಿದ್ದು ಯಾರು ಎಂದು ಬಿಜೆಪಿ ನಾಯಕರು ಮೊದಲು ಹೇಳಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

siddaramaiah-tweet-against-bjp
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ಟೀಟ್​ ವಾರ್​

ಬಿಜೆಪಿ ಟ್ವೀಟ್​ಗೆ ತಿರುಗೇಟು ನೀಡಿದ ಅವರು, ರಾಜ್ಯದ ಸಾಮಾಜಿಕ‌ ಮತ್ತು ಶೈಕ್ಷಣಿಕ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಲಿಂಗಾಯತ - ವೀರಶೈವ ಮಠಗಳ ಬಗ್ಗೆ ನನಗೆ ವಿಶೇಷ ಗೌರವ ಇದೆ. ಈ ಕಾರಣದಿಂದಾಗಿಯೇ‌ ಮಠದ ಅಭಿವೃದ್ಧಿ ಚಟುವಟಿಕೆಗಳಿಗೆ ನಮ್ಮ ಸರ್ಕಾರ ಸಕಲ ನೆರವು ನೀಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.

siddaramaiah-tweet-against-bjp
ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಟ್ಟೀಟ್​

ನಾನೆಂದೂ ಸ್ವಾಮೀಜಿಗಳಿಗೆ ಕವರ್ ಕಾಣಿಕೆ ನೀಡಿ ಅವರನ್ನು ಅಪಮಾನಿಸಿಲ್ಲ. ಸ್ವಾಮೀಜಿಗಳನ್ನು ಮನೆಗೆ ಕರೆಸಿ ಕೆಲವರಿಗೆ ಕವರ್ ಕಾಣಿಕೆ ನೀಡಿ,‌ ಅದನ್ನು ಚಿತ್ರೀಕರಿಸಿ ಮಾಧ್ಯಮಗಳಿಗೆ ಕೊಟ್ಟು ಸ್ವಾಮೀಜಿಗಳನ್ನು ಬ್ಲಾಕ್ ಮೇಲ್ ಮಾಡಿದ್ದು ಯಾರು ಎಂದು ಬಿಜೆಪಿ ನಾಯಕರು ಮೊದಲು ಹೇಳಲಿ. ಅದರ ನಂತರ ಯಾರು ಲಿಂಗಾಯತರ ವಿರೋಧಿ ಎನ್ನುವುದನ್ನು ನಿರ್ಧರಿಸೋಣ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿ ಟ್ಟೀಟ್​ ಹೀಗಿತ್ತು: ರಾಜ್ಯ ಬಿಜೆಪಿ ಘಟಕ ಯಡಿಯೂರಪ್ಪ ಕುರ್ಚಿ ಉಳಿಸಿಕೊಳ್ಳುವುದಕ್ಕಾಗಿ ಮಠಾಧೀಶರನ್ನು ಮನೆಗೆ ಕರೆಸಿ ದುಡ್ಡು ಹಂಚಿದರು ಎನ್ನುವ ಮೂಲಕ ಸಿದ್ದರಾಮಯ್ಯ ಮಠಾಧೀಶರಿಗೆ ಅವಮಾನ ಮಾಡಿದ್ದಾರೆ. ಒಂದು ಸಮುದಾಯವನ್ನು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ನಿಂದಿಸುವುದು ಹಾಗೂ ಒಡೆಯುವುದು ಸಿದ್ದರಾಮಯ್ಯ ಅವರಿಗೆ ಚಾಳಿಯಾಗಿ ಬಿಟ್ಟಿದೆ. ಲಿಂಗಾಯತ ವಿರೋಧಿ ಸಿದ್ದರಾಮಯ್ಯ ಎಂದು ಬಿಜೆಪಿ ಟ್ವೀಟ್ ಮಾಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.