ETV Bharat / city

ಬೇಸಿಗೆ ರಜೆ ಮುಗಿಸಿ ಮತ್ತೆ ಶಾಲೆಯತ್ತ ಹೆಜ್ಜೆ ಹಾಕಿದ ಮಕ್ಕಳು

author img

By

Published : May 16, 2022, 12:47 PM IST

1 ರಿಂದ 10ನೇ ತರಗತಿವರೆಗೂ ಶಾಲೆ ಆರಂಭವಾಗಿದೆ. ಮೊದಲ ದಿನ ನಗುಮುಖದಿಂದ ಮಕ್ಕಳು ಆಗಮಿಸಿದ್ದಾರೆ. ಮಕ್ಕಳಿಗೆ ಗಿಫ್ಟ್, ಸ್ವೀಟ್ ಕೊಟ್ಟು ಶಿಕ್ಷಕರು ಬರಮಾಡಿಕೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ಮೊದಲಿನಂತೆ ಪಾಲನೆ ಮಾಡಲಾಗ್ತಿದೆ.‌ ಇಂದಿನಿಂದ ಶಾಲೆಯಲ್ಲಿ ಬಿಸಿ ಊಟ, ಕ್ಷೀರಭಾಗ್ಯ ಕೂಡ ಆರಂಭವಾಗ್ತಿದೆ. ಜೊತೆಗೆ ಕಲಿಕಾ ಚೇತರಿಕೆಯ ಕಾರ್ಯಕ್ರಮ ಶುರುವಾಗಿದೆ..

ಮಕ್ಕಳು
ಮಕ್ಕಳು

ಬೆಂಗಳೂರು : ಕೊರೊನಾ ಸೋಂಕಿನಿಂದ ಅತಿ ಹೆಚ್ಚು ತೊಂದರೆಗೆ ಒಳಗಾಗಿದ್ದು ಶಾಲಾ-ಕಾಲೇಜು ಮಕ್ಕಳು. ಕೋವಿಡ್​ ಸೋಂಕು ಹರಡುವಿಕೆ ನಿಯಂತ್ರಿಸಲು ಲಾಕ್​ಡೌನ್ ಅಸ್ತ್ರ ಪ್ರಯೋಗ ಮಾಡಿದಾಗ ಆರ್ಥಿಕ ಕ್ಷೇತ್ರದ ಮೇಲೆ ಭಾರಿ ಹೊಡೆತ ಬಿದ್ದಿತ್ತು. ಆನಂತರ ತುಂಬಾ ಪರಿಣಾಮ ಬೀರಿದ್ದು ಶಾಲಾ ಮಕ್ಕಳ ಮೇಲೆ.

ಒಂದೂವರೆ ವರ್ಷಕ್ಕೂ ಹೆಚ್ಚು ಸಮಯ ಶಾಲೆಗೆ ಹೋಗದೆ ಮಕ್ಕಳು ಮಾನಸಿಕವಾಗಿ ಸಹ ತೊಂದರೆ ಅನುಭವಿಸಿದರು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಾಲಾ ವಾತಾವರಣ ಬಹುಮುಖ್ಯವಾಗಿತ್ತು. ಆದರೆ, ಕೋವಿಡ್​ನಿಂದಾಗಿ ಆಗೊಮ್ಮೆ, ಈಗೊಮ್ಮೆ ಶಾಲೆಯ ಕದ ತಟ್ಟಿದ್ದು ಬಿಟ್ಟರೆ, ಮನೆಯಲ್ಲಿ ಆನ್​ಲೈನ್ ಪಾಠವೇ ಅಭ್ಯಾಸವಾಗಿತ್ತು.

ಬೇಸಿಗೆ ರಜೆ ಮುಗಿಸಿ ಶಾಲೆಗೆ ತೆರಳಿದ ಮಕ್ಕಳು..

ಮೂರನೇ ಅಲೆಯಲ್ಲಿ ಕೋವಿಡ್ ಸೋಂಕು ಇಳಿಕೆಯಾಗಿದೆ. ನಾಲ್ಕನೇ ಅಲೆ ಭೀತಿ ಇದ್ದರೂ ಸದ್ಯಕ್ಕೆ ಯಥಾಸ್ಥಿತಿಯಲ್ಲಿ ಸೋಂಕಿತರ ಸಂಖ್ಯೆ ಇದೆ. ಇತ್ತ ಕೋವಿಡ್ ಕಾರಣಕ್ಕೆ ಮಕ್ಕಳ ಕಲಿಕೆಯ ಹಿನ್ನಡೆ ಸರಿದೂಗಿಸಲು 15 ದಿನ ಮುಂಚಿತವಾಗಿಯೇ ಶಾಲೆಯನ್ನ ಆರಂಭಿಸಲಾಗಿದೆ. ಬೇಸಿಗೆ ರಜೆ ಮುಗಿಸಿರುವ ಚಿಣ್ಣರು ಇಂದು ಶಾಲೆಯ ಬಾಗಿಲು ತಟ್ಟಿದ್ದಾರೆ. ರಾಜ್ಯದ ಪಠ್ಯಕ್ರಮ ಹೊಂದಿರುವ ಸರ್ಕಾರಿ, ಅನುದಾನಿತ ಮತ್ತು ಅನುದಾನಿತ ರಹಿತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿದೆ.

1 ರಿಂದ 10ನೇ ತರಗತಿವರೆಗೂ ಶಾಲೆ ಆರಂಭವಾಗಿದೆ. ಮೊದಲ ದಿನ ನಗುಮುಖದಿಂದ ಮಕ್ಕಳು ಆಗಮಿಸಿದ್ದಾರೆ. ಮಕ್ಕಳಿಗೆ ಗಿಫ್ಟ್, ಸ್ವೀಟ್ ಕೊಟ್ಟು ಶಿಕ್ಷಕರು ಬರಮಾಡಿಕೊಳ್ಳುವ ಮೂಲಕ ಕೋವಿಡ್ ಮಾರ್ಗಸೂಚಿಗಳನ್ನು ಮೊದಲಿನಂತೆ ಪಾಲನೆ ಮಾಡಲಾಗ್ತಿದೆ.‌ ಇಂದಿನಿಂದ ಶಾಲೆಯಲ್ಲಿ ಬಿಸಿ ಊಟ, ಕ್ಷೀರಭಾಗ್ಯ ಕೂಡ ಆರಂಭವಾಗ್ತಿದೆ. ಜೊತೆಗೆ ಕಲಿಕಾ ಚೇತರಿಕೆಯ ಕಾರ್ಯಕ್ರಮ ಶುರುವಾಗಿದೆ.

ಶಾಲೆ ಸಿಂಗರಿಸಿದ ಶಿಕ್ಷಕರು : ವಿಜಯನಗರ ಜಿಲ್ಲೆಯ ಹೊಸಪೇಟೆಯ ಶಾಲೆಗಳನ್ನು ಸಿಂಗಾರ ಮಾಡಿರೋ ಶಿಕ್ಷಕರು ಮಕ್ಕಳಿಗೆ ಅದ್ಧೂರಿ ಸ್ವಾಗತ ಕೋರಿದರು. ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ರಂಗೋಲಿ ಹಾಕಿ, ಬಾಳೆ ಕಂಬ ಕಟ್ಟಿ, ತಳಿರು-ತೋರಣಗಳಿಂದ ಶಾಲೆಯನ್ನು ಸಿಂಗರಿಸಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ 1,713 ಶಾಲೆಗಳಲ್ಲಿ 2,63,220 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ಬನ್ನಿ ಮಕ್ಕಳೇ ಶಾಲೆಗೆ.. ರಾಜ್ಯಾದ್ಯಂತ ಇಂದಿನಿಂದ ಶಾಲೆಗಳು ಪುನಾರಂಭ; ಮಕ್ಕಳಿಗೆ ಅದ್ಧೂರಿ ಸ್ವಾಗತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.