ETV Bharat / city

ಎಣ್ಣೆ ಏಟಲ್ಲಿ ಕಾಲೇಜು ಬಸ್​ಗೆ ಶಾಲಾ ಬಸ್​ ಡಿಕ್ಕಿ: 13 ವಿದ್ಯಾರ್ಥಿಗಳಿಗೆ ಗಂಭೀರ ಗಾಯ - ಶಾಲಾ ಬಸ್

ಕುಡಿದ ಮತ್ತಿನಲ್ಲಿ ಕಾಲೇಜ್ ಬಸ್​ಗೆ ಶಾಲಾ ಬಸ್ ಚಾಲಕ ಡಿಕ್ಕಿ ಹೊಡೆದು ಕಾಲೇಜ್​ನ 13 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಸಂತೆ ಬಳಿ ನಡೆದಿದೆ‌.

ಶಾಲಾ ಬಸ್​
author img

By

Published : Feb 11, 2019, 3:02 PM IST

ಬೆಂಗಳೂರು: ಕುಡಿದ ಮತ್ತಿನಲ್ಲಿ ಕಾಲೇಜ್ ಬಸ್​ಗೆ ಶಾಲಾ ಬಸ್ ಚಾಲಕ ಡಿಕ್ಕಿ ಹೊಡೆದಿರುವ ಘಟನೆ ಬೆಂಗಳೂರಿನ ಬಾಗಲೂರು ಸಂತೆ ಬಳಿ ನಡೆದಿದೆ‌.

ನಗರದ ನಾಗಾರ್ಜುನ ಕಾಲೇಜ್ ಬಸ್​ಗೆ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಚಾಲಕ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ನಾಗಾರ್ಜುನ ಕಾಲೇಜ್​ನ 13 ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿವೆ. ಅದರಲ್ಲಿ ನಿತೀಶ್ ಎಂಬ ವಿದ್ಯಾರ್ಥಿಯ ಕಾಲು ಮುರಿದಿದ್ದು, ಸಂಜಯ್ ಎಂಬ ವಿದ್ಯಾರ್ಥಿಗೆ ಆರು ಸ್ಟಿಚ್ ಹಾಕಲಾಗಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶಾಲಾ ಬಸ್​
undefined

ಘಟನೆಗೆ ಕಾರಣ:

ರಸ್ತೆ ಪಕ್ಕದಲ್ಲಿ ನಾಗಾರ್ಜುನ ಕಾಲೇಜ್ ಬಸ್​ ನಿಂತಿದ್ದು, ಈ ವೇಳೆ ಕುಡಿದ ಮತ್ತಿನಲ್ಲಿ ಬಸ್​ ಚಾಲನೆ ಮಾಡುತ್ತಿದ್ದ ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಚಾಲಕ ಮೊದಲು‌ ಕಾಲೇಜು ಬಸ್​ಗೆ ಡಿಕ್ಕಿ ಹೊಡೆದು, ನಂತರ ಟ್ರಾನ್ಸ್​ಫಾರಮ್ ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ. ಸ್ಥಳಕ್ಕೆ ಬಾಗಲೂರು ‌ಪೊಲೀಸರು ಭೇಟಿ ನೀಡಿ ತನಿಖೆ ಮುಂದುವರೆಸಿದ್ದಾರೆ.

ಕುಡಿದ ಮತ್ತಿನಲ್ಲಿ ಶಾಲಾ ಬಸ್ ಗೆ ಮತ್ತೊಂದು ಬಸ್ ಡಿಕ್ಕಿ
ಕೆಲ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಕುಡಿದ ಮತ್ತಿನಲ್ಲಿ ಶಾಲಾ ಬಸ್ ಗೆ ಮತ್ತೊಂದು ಬಸ್ ಡಿಕ್ಕಿಯಾಗಿರುವ ಘಟನೆ ಬೆಂಗಳೂರಿನ ಬಾಗಲೂರು ಸಂತೆ ಬಳಿ ನಡೆದಿದೆ‌..ನಾಗಾರ್ಜುನ ಕಾಲೇಜ್ ಬಸ್ ಗೆ  ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್ ಚಾಲಕ   ಡಿಕ್ಕಿ ಹೊಡೆದಿದ್ದಾನೆ.. ಇನ್ನು   ನಾಗಾರ್ಜುನ ಕಾಲೇಜ್ ನ ೧೩ ವಿದ್ಯಾರ್ಥಿಗಳಿಗೆ ಗಂಭೀರ ಗಾಯವಾಗಿದ್ದು, ಅದ್ರಲ್ಲಿ ನಿತೀಶ್ ಅನ್ನೋ ವಿದ್ಯಾರ್ಥಿಗೆ ಕಾಲು ಮುರಿದಿದ್ದು ಸಂಜಯ್ ಅನ್ನೋ ವಿದ್ಯಾರ್ಥಿಗೆ ಆರು ಸ್ಟಿಚ್ ಹಾಕಲಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಘಟನೆ ಕಾರಣ..

ಲರಸ್ತೆ ಪಕ್ಕದಲ್ಲಿ ನ ನಾಗಾರ್ಜುನ ಕಾಲೇಜ್ ಬಸ್  ನಿಂತಿದ್ದು ಈ ವೇಳೆ ಕುಡಿದ ಮತ್ತಿನಲ್ಲಿ  ಡೆಲ್ಲಿ ಪಬ್ಲಿಕ್ ಸ್ಕೂಲ್ ಬಸ್  ಚಾಲಕ  ಬಸ್ಸು ಚಾಲನೆ ಮಾಡಿದ್ದಾನೆ..   ಮೊದಲು‌ ಬಸ್ಸುಗೆ ಡಿಕ್ಕಿ ಹೊಡೆದು ನಂತ್ರ ಟ್ರಾನ್ಸ್ ಫರಮ್  ಕಂಬಕ್ಕೆ ಡಿಕ್ಕಿ ಹೊಡೆದು ಅಲ್ಲಿಂದ ಪರಾರಿಯಾಗಿದ್ದಾನೆ.. ಇನ್ನು ಈ ಸಂಬಂಧ ಸ್ಥಳಕ್ಕೆ ಬಾಗಲೂರು ‌ಪೊಲೀಸರಿ ಭೇಟಿ ಕೊಟ್ಟು ತನಿಖೆ ಮುಂದುವರೆಸಿದ್ದಾರೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.