ETV Bharat / city

ವೀಕೆಂಡ್ ಕರ್ಫ್ಯೂ ಜೊತೆಗೆ ಸಂಕ್ರಾಂತಿ ಹಬ್ಬ; ಬೆಂಗಳೂರು ತೊರೆದು ತಮ್ಮೂರಿನತ್ತ ಹೊರಟ ಜನ..

author img

By

Published : Jan 14, 2022, 2:56 AM IST

Updated : Jan 14, 2022, 3:13 AM IST

ಇಂದು ಮಕರ ಸಂಕ್ರಾಂತಿ ಹಾಗೂ ನಾಳೆ, ನಾಡಿದ್ದು ವೀಕೆಂಡ್‌ ಕರ್ಫ್ಯೂ ಇರುವ ಕಾರಣ ಬೆಂಗಳೂರಿನಲ್ಲಿದ್ದ ನೂರಾರು ಮಂದಿ ರಾಜ್ಯದ ಇತರೆ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಗೆ ಹೋಗಲು ಮುಂದಾದ ಕಾರಣ ಕೆಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು.

Sankranti and Weekend Curfew effect toll people going back their native from bangalore
ವೀಕೆಂಡ್ ಕರ್ಫ್ಯೂ ಜೊತೆಗೆ ಸಂಕ್ರಾಂತಿ ಹಬ್ಬ; ಬೆಂಗಳೂರು ತೊರೆದು ತಮ್ಮೂರಿನತ್ತ ಹೊರಟ ಜನ..

ಬೆಂಗಳೂರು: ಕೋವಿಡ್‌ ಹರಡುವಿಕೆಯನ್ನು ತಡೆಯಲು ಜಾರಿಗೆ ತಂದಿರುವ ವೀಕೆಂಡ್ ಕರ್ಫ್ಯೂ ಜೊತೆಗೆ ಸಂಕ್ರಾಂತಿ ಹಬ್ಬ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ನೂರಾರು ಮಂದಿ ಬೆಂಗಳೂರು ತೊರೆದು ತಮ್ಮ ಊರುಗಳತ್ತ ತೆರಳಿದರು.

ಜನ ರಾಜ್ಯ ರಾಜಧಾನಿಯಿಂದ ಬಸ್‌ ಹಾಗೂ ಇತರೆ ವಾಹನಗಳ ಮೂಲಕ ತಮ್ಮ ತಮ್ಮ ಊರುಗಳಿಗೆ ಹೋಗಲು ಮುಂದಾದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 75ರ ಹೊಸಕೋಟೆ ಟೋಲ್ ಗೇಟ್‌ನಲ್ಲಿ ಭಾರೀ ವಾಹನಗಳ ಜಮಾವಣೆ ಆಗಿದ್ದವು. ಟೋಲ್ ಗೇಟ್‌ನಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗಿ ಟ್ರಾಫಿಕ್ ಸಮಸ್ಯೆ ಉಂಟಾಯಿತು. ರಾತ್ರಿ 10 ಗಂಟೆಯಾದರೂ ರಸ್ತೆ ಯುದ್ದಕ್ಕೂ ವಾಹನಗಳನ್ನ ನಿಂತ್ತಿದ್ದ ದೃಶ್ಯ ಕಂಡುಬಂತು.

ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ಚೆನ್ನೈ ಗೆ ಸಂಪರ್ಕದ ಕೊಂಡಿಯಾಗಿರುವ ಈ ರಸ್ತೆಯಲ್ಲಿ ನೂರಾರು ವಾಹನಗಳು ಸಂಜೆಯಿಂದಲೇ ಟೋಲ್ ಗೇಟ್ ಬಳಿ ಸಾಕಷ್ಟು ಪ್ರಮಾಣದಲ್ಲಿ ಸಾಲುಗಟ್ಟಿ ನಿಂತಿದ್ದವು. ನಗರದಲ್ಲಿ ಕೋವಿಡ್‌ ಅಬ್ಬರಿಸುತ್ತಿದ್ದು, ಹಬ್ಬದ ಹೆಸರಿನಲ್ಲಿ ಜನರು ನಗರ ತೊರೆಯುತ್ತಿರುವುದರಿಂದ ಹಳ್ಳಿಗಳು ಹಾಗೂ ಹೊರ ರಾಜ್ಯಗಳಲ್ಲೂ ಕೊರೊನಾ ಸ್ಫೋಟಗೊಳ್ಳುವ ಸಾಧ್ಯತೆ‌ ಹೆಚ್ಚಾಗಿದೆ.

ಬಸ್ ನಿಲ್ದಾಣದಲ್ಲಿ ಜನಜಂಗುಳಿ:
ಸಂಕ್ರಾಂತಿ ಹಬ್ಬ ಮತ್ತು ಎರಡನೇ ವಾರದ ವಿಕೇಂಡ್ ಕರ್ಫ್ಯೂ ಜಾರಿ ಇರುವ ಕಾರಣ ತಮ್ಮ ಊರುಗಳಿಗೆ ತೆರಲು ಪ್ರಯಾಣಿಕರು ಐಟಿಐ, ಕೆ.ಆರ್.ಪುರ ಮತ್ತು ಟಿನ್ ಫ್ಯಾಕ್ಟರಿ ಬಸ್ ನಿಲ್ದಾಣದಲ್ಲಿ ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡು ಕಡೆ ತೆರಳಲು ನೂರಾರು ಪ್ರಯಾಣಿಕರು ಬಸ್ಸಿಗಾಗಿ ಕಾಯುತ್ತಿದ್ದರು. ಖಾಸಗಿ ಬಸ್ ಗಳಲ್ಲಿ ಪ್ರಯಾಣಿಕರು ತುಂಬಿರುವ ದೃಶ್ಯ ಕಂಡು ಬಂತು. ಈ ವೇಳೆ ಕೋವಿಡ್‌ ನಿಯಮಗಳನ್ನು ಗಾಳಿಗೆ ತೂರಿದ್ದರು.

ಇದನ್ನೂ ಓದಿ: ವೀಕೆಂಡ್, ನೈಟ್ ಕರ್ಫ್ಯೂ ಸಡಿಲಿಸಲು ಹೋಟೆಲ್ ಮಾಲೀಕರ ಸಂಘಗಳಿಂದ ಸರ್ಕಾರಕ್ಕೆ ಗಡುವು

Last Updated : Jan 14, 2022, 3:13 AM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.