ಬೆಂಗಳೂರು: ಸಂಚಾರಿ ವಿಜಯ್ ಅವರ ಕಿಡ್ನಿಯನ್ನು ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಮಹಿಳೆಯೊಬ್ಬರಿಗೆ ಟ್ರಾನ್ಸ್ಪ್ಲಾಂಟೇಷನ್ ಮಾಡಲಾಗಿದೆ. ಲಗ್ಗೆರೆ ಮೂಲದ 34 ವರ್ಷದ ಮಹಿಳೆಯ ಕಿಡ್ನಿ ನಿಷ್ಕ್ರೀಯ ಗೊಂಡಿತ್ತು.
ನಟ ವಿಜಯ್ ಅವರ ಒಂದು ಕಿಡ್ನಿ ಮಹಿಳೆಯ ಬ್ಲಡ್ ಗ್ರೂಪ್, ಡಿಎನ್ಎ, ಕಿಡ್ನಿ ಸೈಜ್ ಎಲ್ಲವೂ ಹೊಂದಾಣಿಕೆಯಾಗಿತ್ತು.
ಇಬ್ಬರ ಬಾಳಿಗೆ ಬೆಳಕಾದ ವಿಜಯ್ ಕಣ್ಣುಗಳು:
ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ ಇಬ್ಬರಿಗೆ ವಿಜಯ್ ಅವರ ಕಣ್ಣುಗಳ ಜೋಡಣೆ ಮಾಡಲಾಗುತ್ತಿದೆ. ಒಬ್ಬರಿಗೆ ಕಣ್ಣು ಜೋಡಣೆ ಕಾರ್ಯ ಮುಕ್ತಾಯವಾಗಿದ್ದು, ಮತ್ತೊಬ್ಬರಿಗೆ ಜೋಡಣೆ ಕಾರ್ಯ ನಡೀತಿದೆ. ದೃಷ್ಟಿ ಇಲ್ಲದ ಇಬ್ಬರಿಗೆ ಒಂದೊಂದು ಕಣ್ಣು ಅಳವಡಿಕೆ ಮಾಡಲಾಗ್ತಿದೆ.
ಇದನ್ನೂ ಓದಿ: PHOTOS: ಚಿಕ್ಕ ವಯಸ್ಸಿನಲ್ಲೇ ದುರಂತ ಅಂತ್ಯ ಕಂಡ ಕನ್ನಡದ ಶ್ರೇಷ್ಠ ನಟ-ನಟಿಯರಿವರು..