ETV Bharat / city

ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿ ಗಡುವು ಒಂದು ತಿಂಗಳು ವಿಸ್ತರಣೆ : ಶ್ರೀರಾಮುಲು ಟ್ವೀಟ್​​ - ಸಾರಿಗೆ ಸಚಿವ ಶ್ರೀರಾಮುಲು

ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳು ತಮ್ಮನ್ನು ಭೇಟಿ ಮಾಡಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿ ಗಡುವು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ ಎಂದು ಶ್ರೀರಾಮುಲು ಟ್ವೀಟ್​ ಮಾಡಿದ್ದಾರೆ.

ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿ ಗಡುವು ಒಂದು ತಿಂಗಳು ವಿಸ್ತರಣೆ : ಶ್ರೀರಾಮುಲು ಟ್ವೀಟ್​​
road-tax-on-carriage-vehicles-last-date-extended
author img

By

Published : Aug 20, 2021, 12:23 AM IST

ಬೆಂಗಳೂರು : ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ರಸ್ತೆ ತೆರಿಗೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಿದೆ.

ಈ ಕುರಿತು ಟ್ವೀಟ್ ಮಾಡಿರುವ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರು, ಆಗಸ್ಟ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಸೆಪ್ಟೆಂಬರ್ 15ರವರೆಗೆ ಹಾಗೂ ಸೆಪ್ಟೆಂಬರ್ 15ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಅಕ್ಟೋಬರ್ 15ರವರೆಗೆ ದಂಡರಹಿತವಾಗಿ ಪಾವತಿಸಲು ವಿಸ್ತರಿಸಲಾಗಿದೆ. ಇದರಿಂದ ಸುಮಾರು 40 ಸಾವಿರ ಬಸ್ ಮಾಲೀಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

  • ಈ ಹಿನ್ನಲೆಯಲ್ಲಿ ಇದೊಂದು ವಿಶೇಷ ಪ್ರಕರಣ ವೆಂದು ಪರಿಗಣಿಸಿ ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಿರುತ್ತದೆ. ಆಗಸ್ಟ್ 15 ರಂದು ಪಾವತಿಸಬೇಕಿದ್ದ ರಸ್ತೆ ತೆರಿಗೆಯನ್ನು ಸೆಪ್ಟೆಂಬರ್ 15 ರವರೆಗೆ,2/3

    — B Sriramulu (@sriramulubjp) August 19, 2021 " class="align-text-top noRightClick twitterSection" data=" ">

ಖಾಸಗಿ ಬಸ್ ಮಾಲೀಕರ ವಿವಿಧ ಸಂಘಟನೆಗಳು ತಮ್ಮನ್ನು ಭೇಟಿ ಮಾಡಿ ಕೋವಿಡ್ ಹಿನ್ನೆಲೆಯಲ್ಲಿ ಉದ್ದಿಮೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ರಸ್ತೆ ತೆರಿಗೆ ಪಾವತಿ ದಿನಾಂಕವನ್ನು ಮುಂದೂಡಲು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ಇದೊಂದು ವಿಶೇಷ ಪ್ರಕರಣವೆಂದು ಪರಿಗಣಿಸಿ, ಸಾರಿಗೆ ಉದ್ದಿಮೆಯ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರ ಸ್ಟೇಜ್ ಕ್ಯಾರೇಜ್ ಮತ್ತು ಕಾಂಟ್ರಾಕ್ಟ್ ಕ್ಯಾರೇಜ್ ವಾಹನಗಳಿಗೆ ತೆರಿಗೆ ಪಾವತಿಸಲು ಒಂದು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: VIDEO: ಕೋಚಿಂಗ್​ ಸೆಂಟರ್​ ಮುಂದೆ ರೌಡಿಗಳ ಹಾಗೆ ವಿದ್ಯಾರ್ಥಿಗಳ ಹೊಡೆದಾಟ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.