ಬೆಂಗಳೂರು: ನಾನು ಉಪ ಮುಖ್ಯಮಂತ್ರಿ ಆಗಬೇಕೆಂದು ಜನರ ಒತ್ತಾಸೆ ಇರುವಾಗ ಬೇಡ ಅನ್ನೋಲ್ಲ ಎನ್ನುವ ಮೂಲಕ ಮತ್ತೊಮ್ಮೆ ಡಿಸಿಎಂ ಸ್ಥಾನದ ಮೇಲಿನ ಅಪೇಕ್ಷೆಯನ್ನು ಸಚಿವ ಬಿ. ಶ್ರೀರಾಮುಲು ಹೊರಹಾಕಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ ಅವರನ್ನು ಭೇಟಿ ಮಾಡುವ ಸಲುವಾಗಿ ಬಿಜೆಪಿ ಕಚೇರಿಗೆ ಬಂದಿದ್ದೆ. ಮಾಧ್ಯಮಗಳಲ್ಲಿ ಬಂದಿರುವ ವಿಚಾರಗಳು ಸತ್ಯಕ್ಕೆ ದೂರ. ಪಕ್ಷದ ಸಲುವಾಗಿ ರಾಜ್ಯದ ಜನರಿಗೆ ಒಳ್ಳೆಯ ಕೆಲಸ ಮಾಡುತ್ತೇವೆ ಎಂದು ಅಸಮಧಾನವಾಗಿದೆ ಎನ್ನುವ ಆರೋಪವನ್ನು ತಳ್ಳಿಹಾಕಿದರು.
ಬಿಜೆಪಿಯಲ್ಲಿ ಸ್ಥಾನಮಾನಕ್ಕಾಗಿ ಹೋರಾಟ ಮಾಡಿದ ಜನ ನಾವಲ್ಲ, ನಮ್ಮ ಇಲಾಖೆಯಲ್ಲಿ ನಾವು ಸಕ್ರಿಯರಾದ್ದೇವೆ. ಯಾವುದೇ ಖಾತೆಗೆ ಅಪೇಕ್ಷೆ ಪಟ್ಟವನು ನಾನಲ್ಲ. ಸರ್ಕಾರ ಬರಬೇಕು ಅನ್ನೋದು ಜನರ ಇಚ್ಛೆ ಆಗಿತ್ತು. ಅಲ್ಲದೆ, ರಾಮುಲುಗೆ ಡಿಸಿಎಂ ಸ್ಥಾನ ಕೊಡಬೇಕು ಎಂದು ಜನರ ಒತ್ತಾಯವೂ ಇದೆ. ಜನರ ಒತ್ತಾಯ ಹೀಗಿರುವಾಗ ನಾನು ಅದನ್ನು ಬೇಡ ಎನ್ನುವ ಮೂಲಕ ಜನರಿಗೆ ಮುಜುಗರ ಮಾಡಲ್ಲ. ಎಲ್ಲಾ ದೇವರ ಇಚ್ಛೆ, ಪಕ್ಷದ ತೀರ್ಮಾನದಂತೆ ನಾವೆಲ್ಲರೂ ಕೆಲಸ ಮಾಡಬೇಕಾಗುತ್ತದೆ ಎಂದು ಸಚಿವ ಶ್ರೀರಾಮುಲು ಹೇಳಿದ್ರು.