ETV Bharat / city

R&D ನೀತಿ ಅನುಷ್ಠಾನಕ್ಕೆ ತರುವ ಮುಂಚೂಣಿ ಸಂಸ್ಥೆಯಾಗಿ ಯುವಿಸಿಇ ಬೆಳೆಯಲಿ: ಸಿಎಂ ಬೊಮ್ಮಾಯಿ ಕರೆ

author img

By

Published : Jun 10, 2022, 8:52 AM IST

Updated : Jun 10, 2022, 9:39 AM IST

ಯುವಿಸಿಇಯನ್ನು ಸ್ವಾಯತ್ತ ಸಂಸ್ಥೆಯಾಗಿಸಿ ಅಧಿಕಾರ ನೀಡಲಾಗಿದೆ. ಹೊಸ ವಿಚಾರಗಳಿಗೆ, ಖಾಸಗಿ ಹೂಡಿಕೆಗೂ ಇಲ್ಲಿ ಅವಕಾಶಗಳನ್ನು ಮಾಡಿಕೊಡಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

Chief Minister Basavaraja Bommai inaugurated the new buildings on the UVCE campus.
ಯುವಿಸಿಇ ಆವರಣದಲ್ಲಿ ನೂತನ ಕಟ್ಟಡಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.

ಬೆಂಗಳೂರು: ಸಂಶೋಧನೆ ಮತ್ತು ಅಭಿವೃದ್ಧಿ ಪಾಲಿಸಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಯುವಿಸಿಇ ಆರ್ ಅಂಡ್​​​​​​​​​​​​​ ಡಿ ನೀತಿಯನ್ನು ಅನುಷ್ಠಾನಕ್ಕೆ ತರುವ ಮುಂಚೂಣಿ ಸಂಸ್ಥೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಯುವಿಸಿಇ ಆವರಣದಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಹಾಗೂ ನವೀಕರಿಸಿರುವ ಕಟ್ಟಡಗಳು ಹಾಗೂ ಇಂಜಿನಿಯರಿಂಗ್ ಕಾಲೇಜಿನ ನವೀಕರಿಸಿದ ಐಕಾನಿಕ್ ಬ್ಲಾಕ್ ಕಟ್ಟಡಗಳನ್ನು ಉದ್ಘಾಟಿಸಿ, ನೂತನ ಮೆಕ್ಯಾನಿಕಲ್ ವಿಭಾಗದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಕರ್ನಾಟಕ ದೇಶಕ್ಕೇ ಅತ್ಯಂತ ಕೌಶಲಯುತ ಯುವಕರನ್ನು ಒದಗಿಸಬಲ್ಲದು, ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಮಹತ್ವ ತೀರ್ಮಾನಗಳನ್ನು ಕೈಗೊಂಡಿದೆ. ವಿನೂತನವಾದ ವಿಚಾರಗಳನ್ನು ರೂಪಿಸಲಾಗಿದೆ. ನೂತನ ಶಿಕ್ಷಣ ನೀತಿ ಜಾರಿಗೆ ತರಲಾಗಿದೆ. ಹೊಂದಿಕೊಳ್ಳುವ ಗುಣವುಳ್ಳ ನೀತಿಯನ್ನು ನಮ್ಮ ನಾಯಕರಾದ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಅಚ್ಚುಕಟ್ಟಾಗಿ ಅನುಷ್ಠಾನ ಮಾಡಲಾಗುತ್ತಿದೆ.

ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುತ್ತಿದೆ. ಕಾಲಮಿತಿಯೊಳಗೆ ಇದನ್ನು ಅನುಷ್ಠಾನಕ್ಕೆ ತಂದು ಇಡೀ ಭಾರತಕ್ಕೆ ಕರ್ನಾಟಕ ಕೇವಲ ಪ್ರಗತಿಪರ ರಾಜ್ಯ ಮಾತ್ರವಲ್ಲ, ದೇಶಕ್ಕೇ ಅತ್ಯಂತ ಕೌಶಲಯುತ ಯುವಕರನ್ನು ಒದಗಿಸಬಲ್ಲದು ಎಂದು ನಿರೂಪಿಸಲಾಗುವುದು ಎಂದರು.

ವಿಶ್ವದ ಭವಿಷ್ಯವನ್ನು ಬರೆಯುವ ಅವಕಾಶಗಳಿವೆ : ಶಿಕ್ಷಣ ಬಹಳ ಮುಖ್ಯ ಅದರೊಂದಿಗೆ ಜ್ಞಾನವೂ ಮುಖ್ಯ. ಜ್ಞಾನ ಶಿಕ್ಷಣದೆಡೆಗಿನ ಪರಿಪೂರ್ಣ ವಿಧಾನ. ಇದು ಜ್ಞಾನದ ಯುಗ. ಜ್ಞಾನಕ್ಕೆ ಹೆಚ್ಚಿನ ಬೆಲೆ ಇದೆ. ಜ್ಞಾನವಂತರು ನಿರ್ಣಯಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ರಾಜ್ಯದಲ್ಲಿ ದೇಶದಲ್ಲಿಯೇ ಅತಿ ಹೆಚ್ಚಿನ ಸಂಖ್ಯೆಯ ಸ್ಟಾರ್ಟ್ ಅಪ್​ಗಳು ಮತ್ತು ಯೂನಿಕಾರ್ನ್​ಗಳಿವೆ.

ಇಡೀ ವಿಶ್ವದ ಭವಿಷ್ಯ ಬರೆಯುವ ಅವಕಾಶಗಳು ಇಲ್ಲಿವೆ. 105 ವರ್ಷಕ್ಕಿಂತಲೂ ಹೆಚ್ಚು ವರ್ಷಗಳ ಕಾಲ ತಂತ್ರಜ್ಞಾನ, ಇಂಜಿನಿಯರಿಂಗ್ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದ ಕೊಡುಗೆಯನ್ನು ಈ ಸಂಸ್ಥೆ ನೀಡಿದೆ. ಸರ್.ಎಂ.ವಿಶ್ವೇಶ್ವರಯ್ಯನವರು ಸ್ಥಾಪಿಸಿದ ಈ ಸಂಸ್ಥೆ ಕರ್ನಾಟಕದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದರು.

ಇಡೀ ಜಗತ್ತಿಗೆ ಬೆಳಕು ನೀಡುವಂತೆ ಸಾಧನೆ ಮಾಡಿ : ಈ ಸಂಸ್ಥೆಯಲ್ಲಿ ಕಲಿಯುವುದು ಸರಸ್ವತಿಯ ವಾಹನ ಪರಮಹಂಸದ ಮೇಲೆ ಕುಳಿತು ಪ್ರಯಾಣ ಮಾಡಿದಂತೆ. ಪರಿಶುದ್ಧತೆ ಪರಮಹಂಸದ ವೈಶಿಷ್ಟ್ಯ. ಭಾರಿ ಗಾತ್ರದ ಪರಮಹಂಸ ಅತಿ ಎತ್ತರಕ್ಕೆ ಏರಬಲ್ಲದು. ಅದರಂತೆಯೇ ನೀವುಗಳು ಪರಿಶುದ್ಧರಾಗಿ, ಶಕ್ತಿವಂತರಾಗಿ ಅತಿ ಎತ್ತರಕ್ಕೆ ಏರಿ ಸಾಧನೆ ಮಾಡಬೇಕು. ನಿಮ್ಮ ಸಾಧನೆ ಇಡೀ ಜಗತ್ತಿಗೆ ಬೆಳಕು ಕೊಡಬೇಕು. ಅಂಥ ಶಕ್ತಿ ನಮ್ಮ ಸಾಧನೆಯಲ್ಲಿ ಇರಬೇಕು. ನಿಮ್ಮಿಂದ ನಾನು ಸ್ಫೂರ್ತಿ ಪಡೆದಿದ್ದೇನೆ. ನೀವು ಕರ್ನಾಕಟದ ಭವಿಷ್ಯವೂ ಹೌದು ಅದೃಷ್ಟವೂ ಹೌದು ಎಂದು ಹೇಳಿದರು.

ಯುವಿಸಿಇಯನ್ನು ಸ್ವಾಯತ್ತ ಸಂಸ್ಥೆಯಾಗಿಸಿ ಅಧಿಕಾರವನ್ನು ನೀಡಲಾಗಿದೆ. ಹೊಸ ವಿಚಾರಗಳಿಗೆ, ಖಾಸಗಿ ಹೂಡಿಕೆಗೂ ಇಲ್ಲಿ ಅವಕಾಶಗಳನ್ನು ಮಾಡಿಕೊಡಲಾಗಿದೆ. ಇದರಿಂದಾಗಿ ಸಾಕಷ್ಟು ಬದಲಾವಣೆಗಳನ್ನು ಇಲ್ಲಿ ಕಾಣಬಹುದಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಇದನ್ನೂ ಓದಿ : ವಿನ್ಯಾಸ ಸಂಬಂಧಿ ಕಲಿಕೆ: ಬ್ರಿಟನ್​ ವಿವಿ-ಕೌಶಲ್ಯಾಭಿವೃದ್ಧಿ ನಿಗಮ ಒಡಂಬಡಿಕೆ

Last Updated : Jun 10, 2022, 9:39 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.