ಬೆಂಗಳೂರು: ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ಸಂಚರಿಸುತ್ತಿದ್ದವರ ವಾಹನಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಬುಧವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 8ರ ವರೆಗಿನ ಕಾರ್ಯಾಚರಣೆಯಲ್ಲಿ 577 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ಹಂಚಿಕೊಂಡಿದ್ದಾರೆ.
546 ದ್ವಿಚಕ್ರ ವಾಹನ, 16 ಮೂರು ಚಕ್ರದವಾಹನ, 15 ನಾಲ್ಕು ಚಕ್ರದ ವಾಹನಗಳನ್ನು ಸೀಜ್ ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
![ಬುಧವಾರ ಒಂದೇ ದಿನ 577 ವಾಹನಗಳು ಪೊಲೀಸ್ ವಶ](https://etvbharatimages.akamaized.net/etvbharat/prod-images/11656704_382_11656704_1620259892831.png)