ಬೆಂಗಳೂರು: ತಮಿಳುನಾಡು ಪೊಲೀಸರ ಮಾದರಿಯಂತೆ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದಲ್ಲಿ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಲಾಕ್ಡೌನ್ ಉಲ್ಲಂಘಿಸಿ ತಿರುಗಾಡುವವರನ್ನು ಹಿಡಿದು ಶಿಕ್ಷಿಸುವ ಅಣುಕು ಪ್ರದರ್ಶನದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.
ಕೊರೊನಾ ಹೆಚ್ಚಾಗುತ್ತಿರುವ ಕಾರಣ ನಗರದಲ್ಲಿ ಲಾಕ್ಡೌನ್ ಹೇರಲಾಗಿದೆ. ಜುಲೈ 14 ರಿಂದ ಆರಂಭವಾಗಿರುವ ಲಾಕ್ಡೌನ್ ಜುಲೈ 22 ವರೆಗೆ ಲಾಕ್ಡೌನ್ ಜಾರಿಯಲ್ಲಿರಲಿದೆ.
ಜನರು ಈ ಸಮಯದಲ್ಲಿ ಮನೆಯಲ್ಲೇ ಸುರಕ್ಷಿತವಾಗಿರಿ ಎಂದು ಇನ್ಸ್ಪೆಕ್ಟರ್ ಪ್ರಶಾಂತ್ ಅವರ ತಂಡ ವಿಡಿಯೋ ಮೂಲಕ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.