ಬೆಂಗಳೂರು: ಪ್ರತಿದಿನ ರಾಜಧಾನಿ ತೊರೆಯುತ್ತಿರುವವರ ಸಂಖ್ಯೆ ಹೆಚ್ಚಾಗಿದ್ದು, ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಸಾಮಾನು ಸಮೇತ ತಮ್ಮೂರಿಗೆ ತೆರಳಲು ನೂರಾರು ಜನರು ದೌಡಾಯಿಸಿದ್ದಾರೆ.
ಕೊರೊನಾ ನಿಯಂತ್ರಣದ ಸಲುವಾಗಿ ರಾಜ್ಯ ಸರ್ಕಾರ ಕಠಿಣ ಲಾಕ್ಡೌನ್ ಜಾರಿಗೊಳಿಸಿದೆ. ಕೆಲಸವಿಲ್ಲದೆ ಒಂದು ತುತ್ತು ಅನ್ನಕ್ಕೂ ಕೂಡ ರಾಜಧಾನಿಯಲ್ಲಿ ಕಷ್ಟವಾಗಿದೆ. ಇಲ್ಲಿ ಬದುಕು ನಡೆಸುವುದು ಕಟ್ಟಿಕೊಳ್ಳುವುದು ಕಷ್ಟ ಎಂದು ತಿಳಿದ ನೂರಾರು ಜನರು, ಗಂಟು ಮೂಟೆ ಸಮೇತ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ.
4ನೇ ದಿನವಾದ ಇಂದು ಕೂಡ ಕಾರ್ಮಿಕರು, ದಿನಗೂಲಿ ನೌಕರರು ಬಸ್ ಇಲ್ಲದೆ ಇದ್ದರೂ ರೈಲಿನ ಮೂಲಕ ಊರಿಗೆ ತೆರಳುತ್ತಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ 2ನೇ ಡೋಸ್ ವ್ಯಾಕ್ಸಿನ್ ಕೊರತೆ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ