ಬೆಂಗಳೂರು: ತಂತ್ರಜ್ಞಾನಕ್ಕೆ ಅನುಗುಣವಾಗಿ ಬದಲಾಗುತ್ತಿರುವ ನಗರ ಸಂಚಾರ ಪೊಲೀಸ್ ಇಲಾಖೆ ಇದೀಗ ಪೇಟಿಎಂ ಮೂಲಕ ದಂಡ ಕಟ್ಟಲು ಅವಕಾಶ ಕಲ್ಪಿಸಿದೆ.
ಇಷ್ಟು ದಿನ ಬೆಂಗಳೂರು ಒನ್, ಪಿಡಿಎ ಹಾಗೂ ವೆಬ್ಸೈಟ್ಗಳ ಮೂಲದ ದಂಡ ಪಾವತಿಸಲು ಮಾತ್ರ ಅವಕಾಶ ಇತ್ತು. ಇದು ಕಷ್ಟಕರವಾಗಿದ್ದರಿಂದ ಜನರಿಗೆ ಬಹು ಹತ್ತಿರವಾಗಿರುವ ಆನ್ಲೈನ್ ಮೂಲಕ ಹಣ ಪಾವತಿಸಲು ಅನುಕೂಲವಾಗುವಂತೆ ಪೇಟಿಎಂ ಸಂಸ್ಥೆ ಜೊತೆ ಮಾತುಕತೆ ನಡೆಸಿ ದಂಡ ಕಟ್ಟಲು ಅವಕಾಶ ಕಲ್ಪಿಸಿದ್ದಾರೆ. ಈ ವ್ಯವಸ್ಥೆಗೆ ವಿದ್ಯುಕ್ತವಾಗಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಚಾಲನೆ ನೀಡಿದರು.
ದಂಡ ಕಟ್ಟೋದು ಹೇಗೆ ?
ನಿಮ್ಮ ಮೊಬೈಲ್ನಲ್ಲಿ ಪೇಟಿಎಂ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಓಪನ್ ಮಾಡಿ. ರಿಚಾರ್ಜ್ ಅಥವಾ ಪೇ ಫಾರ್ ಚಲನ್ ಆಯ್ಕೆ ಮಾಡಿ ಕ್ಲಿಕ್ ಮಾಡಿ, ನಿಮ್ಮ ನಗರ ಬೆಂಗಳೂರು ಸಂಚಾರ ಪೊಲೀಸ್ (ಬಿಟಿಪಿ) ಆಯ್ಕೆ ಮಾಡಿ, ವಾಹನ ನೋಂದಣಿ ಸಂಖ್ಯೆ ನಮೂದಿಸಿ. ಬಳಿಕ ನಿಮ್ಮ ಚಲನ್ ವಿವರಗಳನ್ನು ಪರಿಶೀಲಿಸಿ ದಂಡ ಪಾವತಿಸುವ ಚಲನ್ ಸೆಲೆಕ್ಟ್ ಮಾಡಬೇಕು. ನಿಮ್ಮ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್ ಅಥವಾ ಯುಪಿಐ ಮುಖಾಂತರ ಹಣ ಪಾವತಿಸಿ ಬಳಿಕ ರಸೀದಿ ಪಡೆದುಕೊಳ್ಳಬೇಕು.