ETV Bharat / city

ಪ್ರಯಾಣಿಕರೇ ಗಮನಿಸಿ: ಕೆಂಪೇಗೌಡ ಏರ್ಪೋರ್ಟ್‌ಗೆ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ - ಕೆಂಪೇಗೌಡ ವಿಮಾನ ನಿಲ್ದಾಣ

ಇಂದಿನಿಂದ ಕೆಂಪೇಗೌಡ ವಿಮಾನ ನಿಲ್ದಾಣ ತಲುಪುವ ಪ್ಯಾಸೆಂಜರ್ ರೈಲು ಸೇವೆ ಪುನರಾರಂಭಗೊಳ್ಳುತ್ತಿದೆ. ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ರೈಲುಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ.

Passenger train service
ಪ್ಯಾಸೆಂಜರ್ ರೈಲು ಸೇವೆ ಪುನರಾರಂಭ
author img

By

Published : Jul 29, 2022, 6:53 AM IST

ಬೆಂಗಳೂರು: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದಿನಿಂದ ಪ್ಯಾಸೆಂಜರ್ ರೈಲು ಸಂಚಾರ ಮತ್ತೆ ಆರಂಭವಾಗುತ್ತಿದೆ. ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಯಲಹಂಕ, ಬೆಂಗಳೂರು ಕಂಟೋನ್ಮೆಂಟ್ ರೈಲ್ವೆ ನಿಲ್ದಾಣಗಳಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್‌ ಸ್ಟೇಷನ್‌ಗೆ (ಕೆಐಎಡಿ) ಐದು ಮೆಮು ರೈಲುಗಳ ಸೇವೆ ಕಾರ್ಯಾರಂಭವಾಗಿದೆ.

ನಸುಕಿನ ಜಾವ 4.55 ಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ (ಕೆಎಸ್‌ಆರ್‌) ಹೊರಟ ಮೊದಲ ರೈಲು, ಬೆಳಗ್ಗೆ 6.10ಕ್ಕೆ ಕೆಐಎಡಿ ತಲುಪಲಿದೆ. ಬೆಳಗ್ಗೆ 6.38ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸ್ಟೇಷನ್​ನಿಂದ ಹೊರಡುವ ರೈಲು ಬೆಳಗ್ಗೆ 7 ಗಂಟೆಗೆ ಯಲಹಂಕ ನಿಲ್ದಾಣ ತಲುಪಲಿದೆ. ಮತ್ತೊಂದು ರೈಲು ಬೆಳಗ್ಗೆ 7.45ಕ್ಕೆ ಯಲಹಂಕದಿಂದ ಹೊರಟು 8.03ಗೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್ ತಲುಪಲಿದೆ.

ಹಾಗೆಯೇ, ಮತ್ತೊಂದು ರೈಲು ಬೆಳಗ್ಗೆ 8.57 ಕ್ಕೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್​ನಿಂದ ಹೊರಟು ಬೆಳಗ್ಗೆ 10.10ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇನ್ನೊಂದು ರೈಲು ಮಧ್ಯಾಹ್ನ 12.20ಕ್ಕೆ ಬೆಂಗಳೂರು ಕಂಟೋನ್ಮೆಂಟ್​ನಿಂದ ತೆರಳಿ ಮಧ್ಯಾಹ್ನ 1.20 ಕ್ಕೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್​ಗೆ ತಲುಪಲಿದೆ.

ಮಧ್ಯಾಹ್ನ 2.07ಕ್ಕೆ ವಿಮಾನ‌ ನಿಲ್ದಾಣ ರೈಲ್ವೆ ಸ್ಟೇಷನ್​ನಿಂದ ಹೊರಡುವ ರೈಲು 3.15ಕ್ಕೆ ಬೆಂಗಳೂರು ಕಂಟೋನ್ಮೆಂಟ್ ತಲುಪಲಿದೆ. ಇನ್ನು ಸಂಜೆ 4 ಗಂಟೆಗೆ ಬೆಂಗಳೂರು ಕಂಟೋನ್ಮೆಂಟ್​ನಿಂದ ಹೊರಡುವ ಮತ್ತೊಂದು ರೈಲು 6.14ಕ್ಕೆ ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್ ತಲುಪಲಿದೆ.

ಸಂಜೆ 5.58ಕ್ಕೆ ಮತ್ತೊಂದು ರೈಲು ವಿಮಾನ ನಿಲ್ದಾಣ ರೈಲ್ವೆ ಸ್ಟೇಷನ್​ನಿಂದ ಹೊರಟು ರಾತ್ರಿ 8.20ಕ್ಕೆ ಯಲಹಂಕ ತಲುಪಲಿದೆ. ಸಂಜೆ 7.15ಕ್ಕೆ ಯಲಹಂಕದಿಂದ ಹೊರಟು 7.35ಕ್ಕೆ ವಿಮಾನ‌ ನಿಲ್ದಾಣ ರೈಲು ಸ್ಟೇಷನ್ ತಲುಪಲಿದೆ. ರಾತ್ರಿ 7.58ಕ್ಕೆ ವಿಮಾನ ನಿಲ್ದಾಣದಿಂದ ಹೊರಡಲಿರುವ ಇನ್ನೊಂದು ರೈಲು, ರಾತ್ರಿ 9.20ಕ್ಕೆ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ ತಲುಪಲಿದೆ.

ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲುಗಳ ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಮಾನಗಳು ಹೆಚ್ಚು ಸಂಚರಿಸುವ ವೇಳೆ ಅಂದರೆ, ಬೆಳಗಿನ ಜಾವ ಮತ್ತು ರಾತ್ರಿ ಉಪನಗರ ರೈಲುಗಳು ಕಾರ್ಯಾಚರಣೆ ಮಾಡಲಿವೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಜುಲೈ 26 ರಿಂದ ಆಗಸ್ಟ್ 31 ರವರೆಗೆ ಮಂಗಳೂರು - ಬೆಂಗಳೂರು ವಿಶೇಷ ರೈಲು ವ್ಯವಸ್ಥೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.