ETV Bharat / city

ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಸುವರ್ಣಾವಕಾಶ - ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆ

ಸುಲಲಿತ ಜೀವನ ಸೂಚ್ಯಂಕ ಕುರಿತಂತೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್​ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಮನವಿ ಮಾಡಿದ್ದಾರೆ.

Kn_Mng_05_Smart_City_Meeting_Script_KA10015
ಸಾರ್ವಜನಿಕರು ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಭಾಗವಹಿಸಿ ಮಂಗಳೂರು ಕುರಿತು ಅಭಿಪ್ರಾಯ ತಿಳಿಸಿ: ಮೊಹಮ್ಮದ್ ನಜೀರ್
author img

By

Published : Jan 31, 2020, 7:52 PM IST

ಮಂಗಳೂರು: ಕೇಂದ್ರ ಸರ್ಕಾರ ವತಿಯಿಂದ ಪ್ರಮುಖ ಮೂಲ ಸೌಕರ್ಯ ಒದಗಿಸುವ ಹಾಗೂ ನಾಗರಿಕರಿಗೆ ಯೋಗ್ಯವಾದ ಜೀವನ ಮಟ್ಟವನ್ನು ನೀಡುವ ಸ್ವಚ್ಛ, ಸುಸ್ಥಿರ ಪರಿಸರ ಮತ್ತು ಉತ್ತಮ ಪರಿಹಾರಗಳಿಗೆ ಅನ್ವಯವಾಗುವ ನಗರಗಳನ್ನು ಉತ್ತೇಜಿಸುವ ಸಲುವಾಗಿ ಸರ್ವೇ ಕಾರ್ಯ ಆರಂಭವಾಗಿದೆ. ಈ ಸರ್ವೇ ಕಾರ್ಯವು ಫೆ.1 ರಿಂದ 29ರವರೆಗೆ ನಡೆಯಲಿದ್ದು, ಸುಲಲಿತ ಜೀವ ಸೂಚ್ಯಂಕ ಕುರಿತಂತೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದು ಎಂದು ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ನಜೀರ್ ಹೇಳಿದರು.

ಸಾರ್ವಜನಿಕರು ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಭಾಗವಹಿಸಿ ಮಂಗಳೂರು ಕುರಿತು ಅಭಿಪ್ರಾಯ ತಿಳಿಸಿ: ಮೊಹಮ್ಮದ್ ನಜೀರ್
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸ್ಮಾರ್ಟ್ ಸಿಟಿ ಸಭೆಯಲ್ಲಿ ಮಾತನಾಡಿದ ಅವರು, ಇದರಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಮುಖ್ಯ. http://eol2019.org/CitizenFeedback ನಲ್ಲಿ ಸಾರ್ವಜನಿಕರು ತಮ್ಮ ನಗರಗಳ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಹೇಳಿದರು. ಅಲ್ಲದೆ @smartcitiesMission ಫೇಸ್​ಬುಕ್, @easeofliving2019, @easeofliving 19 ಟ್ವಿಟ್ಟರ್ ಮೂಲಕವೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು. ಇದರಲ್ಲಿ ಯಾವುದಾದರೊಂದು ವಿಭಾಗವನ್ನು ಆಯ್ಕೆ ಮಾಡಿದ್ದಲ್ಲಿ, ಮೊದಲು ಯಾವ ರಾಜ್ಯ, ಜಿಲ್ಲೆ, ನಗರ ಎಂಬ ಆಯ್ಕೆ ಬರುತ್ತದೆ. ಇದರಲ್ಲಿ 22 ಪ್ರಶ್ನೆಗಳನ್ನು ಕೇಳಲಾಗಿದೆ. ಸಾರ್ವಜನಿಕರು ಸುಲಲಿತ ಜೀವನ ಸೂಚ್ಯಂಕ ಸಮೀಕ್ಷೆಯಲ್ಲಿ ಭಾಗವಹಿಸಿ ಮಂಗಳೂರು ಕುರಿತು ಅಭಿಪ್ರಾಯ ತಿಳಿಸಿ ಎಂದು ಸಾರ್ವಜನಿಕರಿಗೆ ಮೊಹಮ್ಮದ್ ಮನವಿ ಮಾಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.