ETV Bharat / city

ಮೂರನೇ ಅಲೆಗೆ ಸಜ್ಜಾಗುತ್ತಿರುವ ಆರೋಗ್ಯ ಇಲಾಖೆ: ಇಂದಿನಿಂದ ಆಕ್ಸಿಜನ್ ಪ್ಲಾಂಟ್​​ಗಳಲ್ಲಿ ಡ್ರೈ ರನ್

author img

By

Published : Dec 28, 2021, 3:33 AM IST

ಒಮಿಕ್ರಾನ್ ರೂಪಾಂತರಿ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ.

oxygen plants dry run from Tuesday in karnataka
ಮೂರನೇ ಅಲೆಗೆ ಸಜ್ಜಾಗುತ್ತಿರುವ ಆರೋಗ್ಯ ಇಲಾಖೆ: ಇಂದಿನಿಂದ ಆಕ್ಸಿಜನ್ ಪ್ಲಾಂಟ್​​ಗಳಲ್ಲಿ ಡ್ರೈ ರನ್

ಬೆಂಗಳೂರು: ಒಮಿಕ್ರಾನ್ ಸೋಂಕು ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ರಾಜ್ಯದಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ಈ ಮಧ್ಯೆ ಒಮಿಕ್ರಾನ್ ರೂಪಾಂತರಿ ಮೂರನೇ ಅಲೆಗೆ ಕಾರಣವಾಗಬಹುದು ಎಂಬ ಕಾರಣಕ್ಕೆ ರಾಜ್ಯ ಸರ್ಕಾರ ಹಾಗೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸರಣಿ ಸಭೆಗಳನ್ನು ನಡೆಸಲಾಗುತ್ತಿದೆ.

ಸೋಮವಾರ ಸಭೆ ಬಳಿಕ ಮಾತಾನಾಡಿದ ಆರೋಗ್ಯ ಇಲಾಖೆ ಆಯುಕ್ತ ರಂದೀಪ್, ಆರೋಗ್ಯ ಸಚಿವರು ಮೂರನೇ ಅಲೆ ಬಗ್ಗೆ ಮಾಹಿತಿ ತೆಗೆದುಕೊಳ್ಳಲು ಸೂಚನೆ ನೀಡಿದ್ದಾರೆ. ಒಂದು ವೇಳೆ ಮೂರನೇ ಅಲೆ ಎದುರಾದರೆ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚೆ ಮಾಡಲು ಸೂಚಿಸಿದ್ದರು. ಆಕ್ಸಿಜನ್ ಕೊರತೆ, ಔಷಧ, ಬೆಡ್​​ಗಳ ಲಭ್ಯತೆ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲನೆ ಮಾಡಿದ್ದೇವೆ ಎಂದಿದ್ದಾರೆ.

ಇದರ ಮೊದಲ ಭಾಗವಾಗಿ ಮಂಗಳವಾರ ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಪ್ಲಾಂಟ್​​ಗಳನ್ನು ಡ್ರೈ ರನ್ ಮಾಡುವ ಮೂಲಕ ಪರಿಶೀಲನೆ ಮಾಡಲಿದ್ದೇವೆ ಅಂದರು. ಈ ಡೈ ರನ್​ನಿಂದಾಗಿ ಆಕ್ಸಿಜನ್ ಪ್ಲಾಂಟ್ ಸರಿಯಾಗಿ ಕೆಲಸ ನಿರ್ವಹಿಸುತ್ತಿದೆಯಾ? ಎಂಬುದನ್ನು ಖಚಿತ ಪಡಿಸಿಕೊಳ್ಳಲಾಗುತ್ತದೆ.

ಇದನ್ನೂ ಓದಿ: ಆರ್​​​ಟಿಪಿಸಿಆರ್ ಪಾಸಿಟಿವ್ ಸ್ಯಾಂಪಲ್ಸ್​​​ ಕಡ್ಡಾಯವಾಗಿ ಜೀನೋಮ್ ಸೀಕ್ವೆನ್ಸಿಂಗ್​ಗೆ ಕಳಿಸಲು ಸೂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.