ETV Bharat / city

omicron virus effect: ಕ್ರಿಸ್​ಮಸ್, ಹೊಸ ವರ್ಷಾಚರಣೆಗೆ ಕಠಿಣ ನಿಯಮ ಜಾರಿ ಸಾಧ್ಯತೆ.. ನಾಳೆ ಸರ್ಕಾರದಿಂದ ಸಭೆ

ಕೊರೋನಾ ಹೊಸ ರೂಪಾಂತರಿ ತಳಿ 'ಓಮಿಕ್ರೋನ್​' ದೇಶದೆಲ್ಲೆಡೆ ಭೀತಿ ಹುಟ್ಟಿಸಿದ ಕಾರಣ ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆಗೆ ಕಠಿಣ ನಿಯಮ ರೂಪಿಸಲು ನಾಳೆ(ಸೋಮವಾರ)ಆರೋಗ್ಯ ಸಚಿವ ಸುಧಾಕರ್ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ.

omicron virus effect
ಕ್ರಿಸ್​ಮಸ್, ಹೊಸ ವರ್ಷಾಚರಣೆಗೆ ಕಠಿಣ ನಿಯಮ ಜಾರಿ ಸಾಧ್ಯತೆ
author img

By

Published : Nov 28, 2021, 4:48 PM IST

ಬೆಂಗಳೂರು: ಕೊರೊನಾ ಹೊಸ ರೂಪಾಂತರಿ ತಳಿ 'ಓಮಿಕ್ರೋನ್​' ದೇಶದೆಲ್ಲೆಡೆ ಭೀತಿ ಹುಟ್ಟಿಸಿದ ಕಾರಣ ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆಗೆ ಕಠಿಣ ನಿಯಮ ರೂಪಿಸಲು ನಾಳೆ(ಸೋಮವಾರ)ಆರೋಗ್ಯ ಸಚಿವ ಡಾ. ಸುಧಾಕರ್ ನೇತೃತ್ವದಲ್ಲಿ ಸಭೆ ಆಯೋಜಿಸಲಾಗಿದೆ.

ಸಭೆಯಲ್ಲಿ ಕ್ರಿಸ್​ಮಸ್ ಹಾಗೂ ಹೊಸ ವರ್ಷಾಚರಣೆ ಕುರಿತಂತೆ ಚರ್ಚೆ ಆಗಲಿದೆ. ಈ ವೇಳೆ ಕಠಿಣ ನಿಯಮಗಳನ್ನ ಹೇರಬೇಕಾ? ಅಥವಾ ಬೇಡವಾ ಎಂಬುದರ ಬಗ್ಗೆ ನಿರ್ಧಾರ ಹೊರಬೀಳಲಿದೆ.

ಕ್ರಿಸ್​ಮಸ್​ಗಿಂತ ಹೆಚ್ಚಾಗಿ ಹೊಸ ವರ್ಷಾಚರಣೆ ಕಡೆ ಗಮನ ಹರಿಸಲಾಗಿದೆ. ಪಬ್‌‌ಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡುವ ಸಾಧ್ಯತೆ ಇದೆ. ತಾಂತ್ರಿಕ ಸಲಹಾ ಸಮಿತಿಯ ಸಲಹೆ ಮೇರೆಗೆ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ.

ಮತ್ತೆ ಫೀಲ್ಡ್​ಗಿಳಿದ ಮಾರ್ಷಲ್​ಗಳು:

ಹೊಸ ರೂಪಾಂತರಿ ತಳಿ ಭೀತಿ ಹಿನ್ನೆಲೆ ಸರ್ಕಾರ ಬೆಂಗಳೂರಲ್ಲಿ ಮಾರ್ಷಲ್​ಗಳನ್ನು ಮತ್ತೆ ಅಖಾಡಕ್ಕಿಳಿಸಿದೆ. ಕೆ.ಆರ್. ಮಾರ್ಕೆಟ್ ಬಳಿ 20 ಮಾರ್ಷಲ್​ಗಳನ್ನು ನಿಯೋಜಿಸಲಾಗಿದೆ. ಈ ಬಾರಿ ದಂಡ ಪ್ರಯೋಗಕ್ಕಿಂತ ಅರಿವು ಮೂಡಿಸುವ ಯತ್ನ ಮಾಡಲಾಗುತ್ತಿದೆ.

ಕೈಯಲ್ಲಿ ಮೈಕ್ ಹಿಡಿದು ಮಾಸ್ಕ್ ಬಳಸಿ ಎಂದು ಮಾರ್ಷಲ್​ಗಳು ಅರಿವು ಮೂಡಿಸುತ್ತಿದ್ದಾರೆ. ಬೆಳಗಿನ ಪಾಳಿಯಲ್ಲಿ 10 ಮಂದಿ, ಮಧ್ಯಾಹ್ನದ ಪಾಳಿಯಲ್ಲಿ 10 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಿನ್ನೆಯಷ್ಟೇ ಕಟ್ಟೆಚ್ಚರ ವಹಿಸುವಂತೆ ತಜ್ಞರು ಸಲಹೆ ನೀಡಿದ ಬೆನ್ನಲ್ಲೇ ಸರ್ಕಾರ ಈ ಕ್ರಮ ಜಾರಿ ಮಾಡಿದೆ. ಅದರಂತೆ ಬಿಬಿಎಂಪಿ ಅಧಿಕಾರಿಗಳು ಮತ್ತು ಮಾರ್ಷಲ್​ಗಳು ನಗರದಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.