ಬೆಂಗಳೂರು: ಹಳೆಯ ಮೊಬೈಲ್ ಶಾಲಾ ಬಸ್‌ಗಳನ್ನು ಬಿಬಿಎಂಪಿಗೆ ಒದಗಿಸಲು ಬಿಎಂಟಿಸಿ ತೀರ್ಮಾನಿಸಿದ್ದು, ಈ ಮೂಲಕ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಶಾಲೆಗಳಿಗೆ ಕರೆತರಲು ಪಾಲಿಕೆಯು ಸೇತುವೆ ಕೋರ್ಸ್‌ಗಳನ್ನು ತರಲು ಮುಂದಾಗಿದೆ.
ಒಟ್ಟು 20 ಬಸ್‌ಗಳನ್ನು ನಗರ ಸಾರಿಗೆಯಿಂದ ₹ 80 ಲಕ್ಷ ವೆಚ್ಚದಲ್ಲಿ (ಪ್ರತಿ ಬಸ್ಗೆ ತಗುಲುವ ವೆಚ್ಚ 4 ಲಕ್ಷ) ಪಾಲಿಕೆ ಖರೀದಿಸುತ್ತಿದೆ. ಪರಿವರ್ತಿಸಲಾದ ಬಸ್‌ಗಳಲ್ಲಿ ವಿನೈಲ್ ಫ್ಲೋರಿಂಗ್ ಮತ್ತು ಶಿಕ್ಷಕರಿಗೆ ಕಲಿಸಲು ಬಿಳಿ ಬೋರ್ಡ್, ಕುರ್ಚಿಗಳು ಇರಲಿವೆ.
ಇದನ್ನೂ ಓದಿ...ಜ. 24-27ರವರೆಗೆ ರಾಜ್ಯದ ಕೆಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ!
ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಹೆಚ್ಚಿರುವ ಪ್ರದೇಶಗಳಿಗೆ ಬಸ್‌ಗಳನ್ನು ಕಳುಹಿಸಲಾಗುತ್ತಿದ್ದು, ಮಕ್ಕಳಿಗೆ ಕಲಿಸಲು ಬಿಬಿಎಂಪಿ ಶಾಲೆಗಳ ಶಿಕ್ಷಕರನ್ನೂ ನಿಯೋಜಿಸಲಾಗುತ್ತದೆ. ಹಿಂದುಳಿದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಬಿಎಂಟಿಸಿ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ.