ಆನೇಕಲ್(ಬೆಂಗಳೂರು): ತಾಲೂಕಿನ ಗೌರೇನಹಳ್ಳಿ ಪ್ರಕಾಶ್ ಎಂಬುವವರ ಜಾನುವಾರು ಶೆಡ್ಗಳ ಮೇಲೆ ಬೆಂಗಳೂರಿನ ಗೌಗ್ಯಾನ್ ಸಂಸ್ಥೆಯೊಂದಿಗೆ ಆನೇಕಲ್ ಪೊಲೀಸರು ದಾಳಿ ನಡೆಸಿದರು. 68 ಜಾನುವಾರುಗಳನ್ನು ಸಂರಕ್ಷಿಸಿ ಗೋ ಸಾಕಣೆ ಕೇಂದ್ರಗಳಿಗೆ ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆನೇಕಲ್ ಪೊಲೀಸ್ ಉಪವಿಭಾಗಾಧಿಕಾರಿ ಎಂ ಮಲ್ಲೇಶ್, ಆನೇಕಲ್ ಪಿಐ ಹೆಚ್ಕೆ ಮಹಾನಂದ್ ಸಿಬ್ಬಂದಿ ನೇತೃತ್ವದೊಂದಿಗೆ ಗೌಗ್ಯಾನ್ ದೂರಿನ ಮೇರೆಗೆ ದಾಳಿ ನಡೆಸಲಾಗಿದೆ. ದನ-ಎಮ್ಮೆಗಳನ್ನು ಕಟಾವಿಗೆ ಕಳುಹಿಸಲು ಹುಲ್ಲು-ನೀರು ನೀಡದೆ ಕೂಡಿ ಹಾಕಲಾಗಿತ್ತು ಎಂದು ಗೌಗ್ಯಾನ್ ಸಂಸ್ಥೆಯ ಸಂಜಯ್ ಕುಲಕರ್ಣಿ ಆರೋಪಿಸಿದ್ದಾರೆ.
ಡಿವೈಎಸ್ಪಿ ಮಲ್ಲೇಶ್ ಹೇಳಿಕೆ ನೀಡಿ 68 ಜಾನುವಾರುಗಳನ್ನು ಸಾಕಲಾಗುತ್ತಿದೆ. ಸ್ಥಳೀಯರನ್ನು ಸಂಪರ್ಕಿಸಿದಾಗ ಸಮರ್ಪಕ ಮಾಹಿತಿ ನೀಡಲಿಲ್ಲ. ಹೀಗಾಗಿ ಇಷ್ಟೊಂದು ಜಾನುವಾರುಗಳ ಸಂಗ್ರಹ ಏಕೆ? ಎನ್ನುವ ವಿಚಾರಣೆ ತನಿಖೆಯಲ್ಲಿ ಕೈಗೊಳ್ಳಲಿದ್ದೇವೆ. ಸದ್ಯಕ್ಕೆ ಜಾನುವಾರುಗಳನ್ನು ಅಕ್ರಮ ಸಂಗ್ರಹ ಹಾಗೂ ಗೋ ಸಂರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜಾನುವಾರುಗಳನ್ನು ಸಂರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಳಗಾವಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕಾರ್ಮಿಕರ ಅಂತ್ಯಕ್ರಿಯೆ; ಕುಟುಂಬಸ್ಥರಿಗೆ ಗ್ರಾಮಸ್ಥರ ಸಾಥ್